ವಿಧಾನಸೌಧದ ಆವರಣದಲ್ಲಿ ಜನವರಿ 27ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಭುವನೇಶ್ವರಿ ಕಂಚಿನ‌ ಪ್ರತಿಮೆ ಅನಾವರಣ

ಬೆಂಗಳೂರು, ಜನವರಿ24:-ಕರ್ನಾಟಕ ಸುವರ್ಣ ಮಹೋತ್ಸವದ ಹಿನ್ನೆಲೆಯಲ್ಲಿ ವಿಧಾನಸೌಧದ ಪಶ್ಚಿಮ ದ್ವಾರದಲ್ಲಿ ನಿರ್ಮಿಸಲಾಗಿರುವ 25 ಅಡಿ ಎತ್ತರದ ಭುವನೇಶ್ವರಿ ಕಂಚಿನ ಪ್ರತಿಮೆ ಜನವರಿ 27 ರಂದಿ ನಿತ್ಯ ಆರ್ಚನೆ ನೆರವೇರಲಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ಎಸ್.ತಂಗಡಗಿ ಅವರು ವಿಕಾಸಸೌಧದಲ್ಲಿ ನಡೆದ ಸುದ್ದಿ ಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಕರ್ನಾಟಕ ಸುವರ್ಣ ಮಹೋತ್ಸವದ ಹಿನ್ನೆಲೆಯಲ್ಲಿ ‘ಹೆಸರಾಯಿತು ಕರ್ನಾಟಕ ಹಾಗೂ ಉಸಿರಾಗಲಿ’ ಕನ್ನಡ ಎಂಬ ಶೀರ್ಷಿಕೆಯಡಿ ವರ್ಷವಿಡೀ ರಾಜ್ಯಾದ್ಯಂತ ಹಲವು ಕಾರ್ಯಕ್ರಮಗಳನ್ನು […]

Continue Reading

“ಕಿತ್ತೂರು ರಾಣಿ ಚೆನ್ನಮ್ಮ” ಹಾಗೂ “ವೀರ ಮಹಿಳೆ” ಪ್ರಶಸ್ತಿಗೆ ಅರ್ಜಿ ಆಹ್ವಾನ

ಬೆಂ.ಗ್ರಾ.ಜಿಲ್ಲೆ :ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಮಹಿಳೆಯರ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಅರ್ಹ ಸಂಸ್ಥೆಗಳಿಗೆ ಮತ್ತು ವ್ಯಕ್ತಿಗಳನೊಳಗೊಂಡಂತೆ ಕ್ರೀಡೆ, ಕಲೆ, ಸಾಹಿತ್ಯ, ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ಮಹಿಳೆಯರು “ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ” ಹಾಗೂ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಆತ್ಮಸ್ಥೈರ್ಯದಿಂದ ಹೋರಾಡಿ ಜೀವನೋಪಾಯದಿಂದ ಪಾರು ಮಾಡಿದಂತಹ ಮಹಿಳೆಯರಿಗೆ “ವೀರ ಮಹಿಳೆ ಪ್ರಶಸ್ತಿ” ಎಂದು ಗುರುತಿಸಿ ಪ್ರಶಸ್ತಿ ನೀಡಲು ಮಹಿಳೆ ಹಾಗೂ ಸಂಸ್ಥೆಗಳ ಪ್ರಶಸ್ತಿಗಾಗಿ ಅರ್ಹ ಮಹಿಳೆಯರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.   ಆಸಕ್ತಿಯುಳ್ಳ […]

Continue Reading

ಪೋಡಿ ಅಭಿಯಾನದಲ್ಲಿ ರಾಜ್ಯಕ್ಕೆ ಬೆಂ.ಗ್ರಾ ಜಿಲ್ಲೆ ಪ್ರಥಮ:ಸಚಿವ ಕೃಷ್ಣ ಭೈರೇಗೌಡ

ಬೆಂ.ಗ್ರಾ.ಜಿಲ್ಲೆ, ಜ.24: ಕಳೆದ ಡಿಸೆಂಬರ್ ನಲ್ಲಿ ದರಖಾಸ್ತು ಪೋಡಿ ಅಭಿಯಾನ ಆರಂಭವಾಗಿ ರಾಜ್ಯದ್ಯಾಂತ ಇದುವರೆಗೂ ಅಂದಾಜು 5000 ಪೋಡಿ ದುರಸ್ತಿ ಆಗಿದೆ. ಅದರಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಇದುವರೆಗೂ 1236 ಪೋಡಿ ದುರಸ್ತಿ ಆಗಿದ್ದು ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿದೆ ಎಂದು ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಅವರು ಹೇಳಿದರು.   ದೇವನಹಳ್ಳಿ ತಾಲ್ಲೂಕಿನ ವಿಶ್ವನಾಥಪುರ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆ ಸಮೀಪ ಜಿಲ್ಲಾಡಳಿತ ವತಿಯಿಂದ ಆಯೋಜಿಸಿದ್ದ ಕಂದಾಯ ಇಲಾಖೆ ಮತ್ತು ಭೂ ಮಾಪನ ಇಲಾಖೆಯಡಿ ಸರಳೀಕರಣವಾದ ದರಖಾಸ್ತು […]

Continue Reading

ಜಿಲ್ಲಾಡಳಿತ ಭವನದಲ್ಲಿ ಸಂಸದರ ಕಛೇರಿ ಆರಂಭ

ಬೆಂ.ಗ್ರಾ. ಜಿಲ್ಲೆ : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಡಳಿತ ಭವನದಲ್ಲಿ ಸಂಸದರ ಕಛೇರಿಗೆ ಸಂಸದ ಡಾ.ಕೆ ಸುಧಾಕರ್ ಪೂಜೆ ಸಲ್ಲಿಸುವ ಮೂಲಕ ಕಾರ್ಯಾಲಯಕ್ಕೆ ಚಾಲನೆ ನೀಡಿದರು.   ನಂತರ ಮಾತನಾಡಿದ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜನರ ಕೆಲಸಗಳು ಸುಗಮವಾಗಿ ಸಾಗಲು ಕಛೇರಿ ತೆರೆಯಲಾಗಿದೆ. ಸಾರ್ವಜನಿಕರು ಇದರ ಸದುಪಯೋಗವನ್ನು ಪಡಿಸಿಕೊಳ್ಳಬೇಕೆಂದರು.   ಕಲಾಪಕ್ಕೆ ಭಾಗವಹಿಸುವ ದಿನಗಳನ್ನು ಹೊರತುಪಡಿಸಿ, ಪ್ರತಿ ಸೋಮವಾರ ಅರ್ಧ ದಿನ ಈ ಕಛೇರಿಯಲ್ಲಿ ಲಭ್ಯವಿರುತ್ತೇನೆ. ಉಳಿದಂತೆ ನನ್ನ ಆಪ್ತ ಸಹಾಯಕರು ಪ್ರತಿದಿನ ಕಛೇರಿಯಲ್ಲಿ ಲಭ್ಯವಿದ್ದು […]

Continue Reading

ಖ್ಯಾತ ಜ್ಯೋತಿಷಿ ಎನ್ ಕೃಷ್ಣರವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದ ವರ್ಲ್ಡ್ ಬುಕ್ ರೆಕಾರ್ಡ್ಸ್

ದೊಡ್ಡಬಳ್ಳಾಪುರ : ಶ್ರೀಲಂಕಾ ಮೂಲದ ವರ್ಲ್ಡ್ ಬುಕ್    ರೆಕಾರ್ಡ್ ಸಂಸ್ಥೆಯು ತಾಲೂಕಿನ ಕೊನಘಟ್ಟ ಗ್ರಾಮದ ಜ್ಯೋತಿಷಿ ಎನ್,ಕೃಷ್ಣ ರವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಸತತ ಐದು ವರ್ಷಗಳ ಕಾಲ ನಿರಂತರ ಜ್ಯೋತಿಷ್ಯಶಾಸ್ತ್ರ ಅಭ್ಯಾಸ ಮಾಡಿರುವ ಕೊನಘಟ್ಟ ಎನ್ ಕೃಷ್ಣರವರಿಗೆ ಈ ಗೌರವ ಡಾಕ್ಟರ್ ಲಭಿಸಿದ್ದು, ಸ್ನೇಹಿತರು, ಹಿತೈಷಿಗಳು ಸಂತಸ ವ್ಯಕ್ತ ಪಡಿಸಿದ್ದಾರೆ.   ಈ ಕುರಿತು ಜ್ಯೋತಿಷಿ ಎನ್. ಕೃಷ್ಣ ಮಾತನಾಡಿ ಜ್ಯೋತಿಷ್ಯ ಶಾಸ್ತ್ರ ಎಂಬುದು ವೈಜ್ಞಾನಿಕವಾಗಿ ಗ್ರಹಗಳ ಚಲನೆಯನ್ನು ಆಧರಿಸಿ ಹೇಳುವುದಾಗಿದೆ , […]

Continue Reading

ಜಿಲ್ಲಾಧಿಕಾರಿಗಳ ಭೇಟಿ ಯಶಸ್ವಿ : ಜ. 26 ರ ಗಣರಾಜ್ಯೋತ್ಸವ ದಿನದಂದು ಕಪ್ಪು ಭಾವುಟ ಹಾರಿಸುವ ನಿರ್ಧಾರವನ್ನು ಹಿಂಪಡೆದ ಹೋರಾಟಗಾರರು.

ಕೆರೆಗಳಿಗೆ ಹರಿಸುತ್ತಿರುವ ಕೊಳಚೆ ನೀರು ರಾಸಾಯನಿಕ ನೀರನ್ನು ನಿಲ್ಲಿಸಬೇಕು, ಎಂದು ಆಗ್ರಹಿಸಿ ಜನವರಿ 26ರಂದು ಅಧಿಕಾರಿಗಳ ವಿರುದ್ಧ ಜನಪ್ರತಿನಿಧಿಗಳ ವಿರುದ್ಧ ಎರಡು ಪಂಚಾಯತಿಯ ಮನೆ ಮನೆಯ ಕಪ್ಪು ಬಾವುಟವನ್ನು ಹಾರಿಸಲು ನಿರ್ಧರಿಸಿದ್ದ ಅರ್ಕಾವತಿ ನದಿ ಪಾತ್ರ ಹೋರಾಟ ಸಮಿತಿ ತನ್ನ ನಿರ್ಧಾರವನ್ನು ಹಿಂಪಡೆದಿದೆ ಎಂದು ಹೋರಾಟಗಾರರು ತಿಳಿಸಿದ್ದಾರೆ.     ಮಜರಾ ಹೊಸಹಳ್ಳಿ ಮತ್ತು ದೊಡ್ಡ ತುಮಕೂರು ಗ್ರಾಮಸ್ಥರ ಹಾಗೂ ಹೋರಾಟಗಾರರ ಬೇಡಿಕೆಗಳಿಗೆ ಸಕಾರಾತ್ಮಕ ಸ್ಪಂದಿಸಿರುವ ಜಿಲ್ಲಾಧಿಕಾರಿಗಳು ಅತಿ ಶೀಘ್ರಗತಿಯಲ್ಲಿ ಕುಡಿಯುವ ನೀರು ವ್ಯವಸ್ಥೆ ಮಾಡಲಾಗುವುದು ಹಾಗೂ […]

Continue Reading

ಅಸಲಿ ಗಾಂಧಿಯವರ ಹಾಡಿನಲ್ಲಿ ಪುಕ್ಕಟೆ ಪ್ರಚಾರ ಪಡೆಯುತ್ತಿರುವ ಕಾಂಗ್ರೆಸ್; ಹೆಚ್.ಡಿ.ಕುಮಾರಸ್ವಾಮಿ ಕಿಡಿ

ನವದೆಹಲಿ: ನಕಲಿ ಗಾಂಧಿಗಳ ಪಕ್ಷ ಈಗ ಬೆಳಗಾವಿಯಲ್ಲಿ ಅಸಲಿ ಗಾಂಧಿಯವರ ಹಾಡಿನಲ್ಲಿ ಪುಕ್ಕಟೆ ಪ್ರಚಾರ ಪಡೆಯುತ್ತಿದೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಲೇವಡಿ ಮಾಡಿದರು.   ನವದೆಹಲಿಯಲ್ಲಿ ಮಾಧ್ಯಮಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವರು; ರಾಜ್ಯದಲ್ಲಿ ಅತ್ಯಾಚಾರ, ದರೋಡೆಗಳು ನಡೆಯುತ್ತಿವೆ. ಅಪರಾಧಿ ಚಟುವಟಿಕೆಗಳು ಮಿತಿ ಮೀರಿವೆ. ಕಾನೂನು ಸುವ್ಯವಸ್ಥೆ ಹದಗೆಟ್ಟು ಜನರಿಗೆ ಭದ್ರತೆ ಇಲ್ಲದಾಗಿದೆ ಎಂದು ಆರೋಪಿಸಿದರು.   ಸರಕಾರದಲ್ಲಿ ಒಬ್ಬ ತಹಶಿಲ್ದಾರ್, ಉಪ ವಿಭಾಗಾಧಿಕಾರಿಯನ್ನು ನಿಯಂತ್ರಣ ಮಾಡುವುದು ಇವರಿಗೆ ಆಗುತ್ತಿಲ್ಲ. ಕಾನೂನು ಸುವ್ಯವಸ್ಥೆ ಮೇಲೆ […]

Continue Reading

*ಜಿಲ್ಲಾಡಳಿತ ಭವನದಲ್ಲಿ ವೇಮನ ಜಯಂತಿ ಹಾಗೂ ಅಂಬಿಗರ ಚೌಡಯ್ಯ ಜಯಂತಿ ಆಚರಣೆ*

ಬೆಂಗಳೂರು ಗ್ರಾಮಾಂತರ ,‌ ಜನವರಿ 21: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಶ್ರೀ ಮಹಾಯೋಗಿ ವೇಮನ ಜಯಂತಿ ಹಾಗೂ ವಚನಕಾರ ನಿಜ ಶರಣ ಅಂಬಿಗರ ಚೌಡಯ್ಯ ಜಯಂತಿಯನ್ನು ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಯವರ ನ್ಯಾಯಾಲಯ ಸಭಾಂಗಣದಲ್ಲಿ ಇಂದು ಸರಳವಾಗಿ ಆಚರಿಸಲಾಯಿತು. ಜಿಲ್ಲಾಡಳಿತದ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಮಹಾಯೋಗಿ ವೇಮನ ಹಾಗೂ ಅಂಬಿಗರ ಚೌಡಯ್ಯನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಹಾಯಕ […]

Continue Reading

ಹೊಳೆ ಮುತ್ತುರಾಯಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ : ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘದ ವತಿಯಿಂದ 50 ಸಾವಿರ ಮೊತ್ತದ ಡಿಡಿ ವಿತರಣೆ

ದೊಡ್ಡಬಳ್ಳಾಪುರ: ತಾಲ್ಲೂಕಿನ ಹಾಲಪ್ಪನಹಳ್ಳಿ ಗ್ರಾಮದ ಹೊಳೆ ಮುತ್ತುರಾಯಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘದ ವತಿಯಿಂದ 50 ಸಾವಿರ ಮೊತ್ತದ ಡಿಡಿ ವಿತರಣೆ ಮಾಡಲಾಯಿತು.   ತಾಲೂಕಿನ ಆರೂಢಿ ವಲಯದ ಕಾಡತಿಪ್ಪುರು ಕಾರ್ಯಕ್ಷೇತ್ರದ ಹಾಲಪ್ಪನಹಳ್ಳಿ ಗ್ರಾಮದ ಹೊಳೆ ಮುತ್ತುರಾಯಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಮಂಜೂರು ಮಾಡಿದ್ದ ಐವತ್ತು ಸಾವಿರ ರೂಪಾಯಿಗಳ ಡಿಡಿ ಯನ್ನು ಕ್ಷೇತ್ರದ ಪರವಾಗಿ ತಾಲೂಕಿನ ಯೋಜನಾಧಿಕಾರಿಗಳಾದ ಸುಧಾ ಬಾಸ್ಕರ್ ದೇವಸ್ಥಾನ ಸಮಿತಿಗೆ ಹಸ್ತಾಂತರ ಮಾಡಿದರು. […]

Continue Reading

ಸಕ್ಕರೆಗೊಲ್ಲಹಳ್ಳಿ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷಹಾಗೂ ಉಪಾಧ್ಯಕ್ಷ ಸ್ಥಾನಗಳ ಚುನಾವಣೆ : ಮತ್ತೆ ಅಧಿಕಾರಕ್ಕೆ ಬಂದ ಬಿಜೆಪಿ

ದೊಡ್ಡಬಳ್ಳಾಪುರ : ತಾಲ್ಲೂಕಿನ ಸಕ್ಕರೆಗೊಲ್ಲಹಳ್ಳಿ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಹನುಮಂತಯ್ಯ.ಟಿ, ಉಪಾಧ್ಯಕ್ಷರಾಗಿ ಪದ್ಮಶ್ರೀ ಬೈರಯ್ಯ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅವಿರೋಧವಾಗಿ ಆಯ್ಕೆಯಾದ ನಂತರ ಪಂಚಾಯಿತಿ ಕಚೇರಿಯಿಂದ ಗ್ರಾಮದ ಪ್ರಮುಖ ವೃತ್ತದವರೆಗೆ ಕಾಲ್ನಡಿಗೆ ಮೂಲಕ ಮೆರವಣಿಗೆ ಹೊರಟರು.ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಿಗೆ ಗಣ್ಯರು ಹೂಮಾಲೆ ಹಾಕಿ, ಸಿಹಿ ಹಂಚಿಕೊಂಡು, ಪಟಾಕಿ ಸಿಡಿಸಿ ಅಭಿನಂದಿಸಿದರು.   ಗ್ರಾಮ ಪಂಚಾಯಿತಿಯಲ್ಲಿ ಒಟ್ಟು 18 ಸದಸ್ಯರು ಇದ್ದು, ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಅಧಿಕಾರದ ಅವಧಿ ಒಂದು ವರ್ಷ […]

Continue Reading