ದೊಡ್ಡಬಳ್ಳಾಪುರ : ನಾಡಿನ ಜನರ ನಾಡಿ ಮಿಡಿತವನ್ನು ಅರಿತು ಪ್ರಾದೇಶಿಕ ಅಭಿವೃದ್ಧಿಗಾಗಿ ಶ್ರಮಿಸುವ ನಿಟ್ಟಿನಲ್ಲಿ ಜೆಡಿಎಸ್ ಪಕ್ಷ ಸ್ಥಾಪನೆಯಾಗಿದ್ದು ಇಂದಿಗೆ 25ವರ್ಷಗಳನ್ನು ಪೂರೈಸಿದೆ ಈ ನಿಟ್ಟಿನಲ್ಲಿ ರಾಜ್ಯ ವರಿಷ್ಠರ ಆದೇಶದ ಮೇರೆಗೆ ಜಿಲ್ಲಾ ಹಾಗೂ ತಾಲ್ಲೂಕು ಪ್ರಮುಖರ ಸಹಕಾರದೊಂದಿಗೆ ಮೇ 08ರಂದು ತಾಲ್ಲೂಕಿನ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ರಜತ ಮಹೋತ್ಸವ(ಜೆಡಿಎಸ್ ಪಕ್ಷದ ಬೆಳ್ಳಿಹಬ್ಬ )ವನ್ನು ಆಯೋಜನೆ ಮಾಡಲಾಗಿದ್ದು ಈ ಕಾರ್ಯಕ್ರಮದಲ್ಲಿ ರಾಜ್ಯ ಯುವ ನಾಯಕರಾದ ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಹಲವು ರಾಜ್ಯ ಪ್ರಮುಖರು ಭಾಗವಹಿಸಲಿದ್ದಾರೆ ಎಂದು ತಾಲ್ಲೂಕು ಅಧ್ಯಕ್ಷ ಎಸ್ ಎಂ ಹರೀಶ್ ಗೌಡ ತಿಳಿಸಿದರು.
ನಗರದ ಕನ್ನಡ ಜಾಗೃತಿ ಭವನದಲ್ಲಿ ನಡೆದ ಸುದ್ದಿಗೊಷ್ಟಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು ನಮ್ಮ ಜೆಡಿಎಸ್ ಪಕ್ಷ ಕಳೆದ 25ವರ್ಷಗಳಿಂದ ನಿರಂತರ ಜನಸಂಪರ್ಕದಲ್ಲಿದ್ದು ತನ್ನದೇಆದ ಶಕ್ತಿ ಹೊಂದಿದೆ,ಕಾರ್ಯಕರ್ತರ ಬೆಂಬಲದಿಂದ ಸಾಲು ಸಾಲು ಚುನಾವಣೆ ಎದುರಿಸಿದ್ದು ಗೆಲುವು ಸೋಲು ಎರಡನ್ನು ಕಂಡಿದ್ದೇವೆ. ನಮ್ಮ ಪಕ್ಷವನ್ನು ರಾಷ್ಟ್ರಿಯ ಪಕ್ಷಗಳು ಸದಾ ವಿರೋಧಿಸಿಕೊಂಡು ಬಂದಿವೆ. ನಮ್ಮ ಪಕ್ಷದ ಸೋಲು ಕಾರ್ಯಕರ್ತರಲ್ಲಿ ಎಂದಿಗೂ ಉತ್ಸಹ ಕಡಿಮೆ ಮಾಡಿಲ್ಲ ಜಿಲ್ಲೆ ಹಾಗೂ ತಾಲ್ಲೂಕಿನ ಕಾರ್ಯಕರ್ತರ ಸಲುವಾಗಿ ಮೇ 08ರಂದು ತಾಲ್ಲೂಕಿನಲ್ಲಿ ರಜತ ಮೊಹೋತ್ಸವ(ಬೆಳ್ಳಿ ಹಬ್ಬ )ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಈ ಕಾರ್ಯಕ್ರಮದಲ್ಲಿ ತಾಲ್ಲೂಕಿನ ಜೆಡಿಎಸ್ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವೀಗೊಳಿಸಬೇಕು ಎಂದು ತಿಳಿಸಿದರು.
Ad
ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಮಂಜುನಾಥ್ ಮಾತನಾಡಿ ಬೆಳ್ಳಿ ಹಬ್ಬದ ಮಹೋತ್ಸವವು ಮೇ 08ರಂದು ದೊಡ್ಡಬಳ್ಳಾಪುರ ತಾಲ್ಲೂಕಿನ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ಆಯೋಜನೆ ಮಾಡಲಾಗಿದ್ದು ಕಾರ್ಯಕ್ರಮಕ್ಕೆ ಆಗಮಿಸಲಿರುವ ರಾಜ್ಯ ಜೆಡಿಎಸ್ ಯುವ ನಾಯಕರಾದ ನಿಖಿಲ್ ಕುಮಾರಸ್ವಾಮಿಯವರನ್ನು ಬೃಹತ್ ಬೈಕ್ ರ್ಯಾಲಿ ಮೂಲಕ ಸ್ವಾಗತಿಸಲಿದ್ದೇವೆ. ಕಾರ್ಯಕ್ರಮವು ವಿಶೇಷವಾಗಿದ್ದು ರಾಜ್ಯ ಪ್ರಮುಖರು ನೇರವಾಗಿ ಕಾರ್ಯಕರ್ತರ ಜೊತೆ ಸಂವಾದ ನಡೆಸಲಿದ್ದಾರೆ ಎಂದರು.
ನಗರಸಭಾ ಸದಸ್ಯ ತಾ ನಾ ಪ್ರಭುದೇವ್ ಮಾತನಾಡಿ ಮೇ 08ರಂದು ತಾಲ್ಲೂಕಿನಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಬೃಹತ್ ಕಾರ್ಯಕ್ರಮಕ್ಕೆ ಇಂದು ಪೂಜೆ ಮಾಡುವ ಮೂಲಕ ವೇದಿಕೆಗೆ ಚಾಲನೆ ನೀಡಿದ್ದೇವೆ.
ಪಂಚ ರಾಜ್ಯಗಳ ಫಲಿತಾಂಶ ನಮಗೆ ಸ್ಫೂರ್ತಿಯಾಗಿದ್ದು ಮುಂದೆ ಕರ್ನಾಟಕದಲ್ಲೂ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಅಧಿಕಾರಕ್ಕೆ ಬರುವ ನಿರೀಕ್ಷೆ ಇದೆ. ನಮ್ಮದು ಕಾರ್ಯಕರ್ತರ ಪಕ್ಷವಾಗಿದ್ದು ಈ ಬಾರಿ ನಿಖಿಲ್ ಕುಮಾರಸ್ವಾಮಿಯವರಿಗೆ ಶಕ್ತಿ ತುಂಬುವ ಕೆಲಸ ರಾಜ್ಯದ ಜೆಡಿಎಸ್ ಸೇನಾನಿಗಳು ಮಾಡಲಿದ್ದಾರೆ.ತಾಲ್ಲೂಕಿನ ಜೆಡಿಎಸ್ ಕಾರ್ಯಕರ್ತರಲ್ಲಿ ನವ ಚೈತನ್ಯ ಮೂಡಿಸುವ ಸಲುವಾಗಿ ರಾಜ್ಯ ಯುವ ನಾಯಕರಾದ ನಿಖಿಲ್ ಕುಮಾರಸ್ವಾಮಿ ದೊಡ್ಡಬಳ್ಳಾಪುರ ತಾಲ್ಲೂಕಿನ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.
ಈ ವೇಳೆ ವಕೀಲರಾದ ಡಾ. ವಿಜಯ್ ಕುಮಾರ್,ಅಂಜನ್ ಗೌಡ, ನಗರಸಭಾ ಸದಸ್ಯ ತಾ ನಾ ಪ್ರಭುದೇವ್, ತಾಳಗವಾರ ನಾಗರಾಜ್, ಕೋನಘಟ್ಟ ಆನಂದ್, ಸತ್ಯಣ್ಣ, ಅಶ್ವಥ್ , ಕೆಂಪರಾಜು, ನಾಗರಾಜ್ ಸೇರಿದಂತೆ ಹಲವು ಪ್ರಮುಖರು ಹಾಜರಿದ್ದರು.
