ಮಾ.22ರ ಕರ್ನಾಟಕ ಬಂದ್ ಕುರಿತು ವಿವಿಧ ಕನ್ನಡ ಪರ ಸಂಘಟನೆಗಳು ಚರ್ಚೆ : ಬಂದ್ ಕೈ ಬಿಡಲು ಒಮ್ಮತದ ನಿರ್ಧಾರ

ದೊಡ್ಡಬಳ್ಳಾಪುರ : ಮಾರ್ಚ್ 22ರಂದು ಕರ್ನಾಟಕ ಬಂದ್ ಗೆ ಕರೆ ನೀಡಿದ್ದು ಯುಗಾದಿ ಹಬ್ಬ ಹಾಗೂ ಎಸ್ ಎಸ್ ಎಲ್ ಸಿ ಪರೀಕ್ಷೆ ಇರುವ ಹಿನ್ನಲೆಯಲ್ಲಿ ಬಹಳಷ್ಟು ಸಂಘಟನೆಗಳಿಂದ ವಿರೋಧ ವ್ಯಕ್ತವಾದ ಕಾರಣ ಬಂದ್ ಕೈ ಬಿಡಲು ನಿರ್ಧಾರ ಮಾಡಲಾಗಿದೆ   ನಗರದ ಕನ್ನಡ ಜಾಗೃತ ಭವನದಲ್ಲಿ ನೆಡೆದ ಸಭೆಯಲ್ಲಿ ಹಲವು ಕನ್ನಡ ಪರ ಸಂಘಟನೆಗಳ ಮುಖಂಡರು ಮಾರ್ಚ್ 22ರ ಶನಿವಾರದಂದು ಕನ್ನಡ ಪರ ಸಂಘಟನೆಗಳ ಒಕ್ಕೂಟ ನೀಡಿರುವ ಬಂದ್ ಕುರಿತು ಚರ್ಚಿಸಿದರು.   ನಾಡು ನುಡಿ […]

Continue Reading

ನಾಳೆಯಿಂದ ಎಸ್ ಎಸ್ ಎಲ್ ಸಿ ಪರೀಕ್ಷೆ ಪ್ರಾರಂಭ : ಮುಖ್ಯ ಪರೀಕ್ಷೆಗೆ ಸುಗಮವಾಗಿ ನೆಡೆಸಲು ಸಕಲ ಸಿದ್ಧತೆ – ಸಯೀದಾ ಅನೀಸ್ ಮುಜಾವರ

ದೊಡ್ಡಬಳ್ಳಾಪುರ : 2024-25 ನೇ ಸಾಲಿನ ಎಸ್.ಎಸ್.ಎಲ್.ಸಿ ಮುಖ್ಯ ಪರೀಕ್ಷೆಗೆ ಸುಗಮವಾಗಿ ನೆಡೆಸಲು ಬೇಕಿರುವ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಸಯೀದಾ ಅನೀಸ್ ಮುಜಾವರ ತಿಳಿಸಿದ್ದಾರೆ.   ಈ ಕುರಿತು ಮಾತನಾಡಿದ ಅವರು ತಾಲ್ಲೂಕಿನಲ್ಲಿ ಒಟ್ಟು 14 ಪರೀಕ್ಷಾ ಕೇಂದ್ರಗಳನ್ನು ಗುರ್ತಿಸಿದ್ದು ಪರೀಕ್ಷೆಗೆ ಸಕಲ ಸಿದ್ಧತೆಯನ್ನು ಮಾಡಿ ಕೊಳ್ಳಲಾಗಿದೆ. ನಗರ ವ್ಯಾಪ್ತಿ-05 ಗ್ರಾಮೀಣ-09 ಕೇಂದ್ರಗಳನ್ನು ಮಾಡಲಾಗಿದೆ. ತಾಲ್ಲೂಕಿನಲ್ಲಿ ಒಟ್ಟು 67 ಪ್ರೌಢಶಾಲೆಗಳಿದ್ದು ಅದರಲ್ಲಿ ಸರ್ಕಾರಿ (17)ಇತರೆ ಸರ್ಕಾರಿ(04) ಅನುದಾನಿತ(12) ಮತ್ತು ಅನುದಾನರಹಿತ(34) ಶಾಲೆಗಳಿಂದ […]

Continue Reading

ಭಾರತ ಚುನಾವಣಾ ಆಯೋಗ : ಅಧಾರ್ ನೊಂದಿಗೆ ಎಪಿಕ್ (EPIC) ಜೋಡಣೆಗೆ ಶೀಘ್ರ ಕ್ರಮ – ಆಯುಕ್ತ ಜ್ಞಾನೇಶ್ ಕುಮಾರ್

ಆಧಾರ್ ಕಾರ್ಡ್ ನೊಂದಿಗೆ ಎಪಿಕ್ (EPIC ) ಸಂಖ್ಯೆಯನ್ನು ಕೂಡಲೇ ಜೋಡಣೆ (Link) ಮಾಡಲು ಕ್ರಮ ವಹಿಸಲಾಗುವುದು ಎಂದು ಭಾರತ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತರಾದ ಜ್ಞಾನೇಶ್ ಕುಮಾರ್ ತಿಳಿಸಿದ್ದಾರೆ. ಇಂದು ಈ ಸಂಬಂಧ ನವದೆಹಲಿಯ ನಿರ್ವಚನ ಸದನದಲ್ಲಿ ಚುನಾವಣಾ ಭಾರತೀಯ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತರಾದ ಜ್ಞಾನೇಶ್ ಕುಮಾರ್ ಅವರ ನೇತೃತ್ವದಲ್ಲಿ ಚುನಾವಣಾ ಆಯುಕ್ತರಾದ ಡಾ. ಸುಖಬೀರ್ ಸಿಂಗ್ ಸಂಧು ಮತ್ತು ಡಾ. ವಿವೇಕ್ ಜೋಶಿ ಅವರು ಕೇಂದ್ರ ಗೃಹ ಕಾರ್ಯದರ್ಶಿ, ಕಾರ್ಯದರ್ಶಿ […]

Continue Reading

ಒಳಮೀಸಲಾತಿ ಜಾರಿಗಾಗಿ ಮಾದಿಗ ಸಮುದಾಯಗಳ ಸ್ವಾಭಿಮಾನದ ಒಕ್ಕೂಟದ ವತಿಯಿಂದ ಪ್ರತಿಭಟನೆ : ಹೋರಾಟದಲ್ಲಿದೊಡ್ಡಬಳ್ಳಾಪುರದ ಸಾವಿರಾರು ಪ್ರತಿಭಟನಾಕಾರರು ಭಾಗಿ

ಒಳಮೀಸಲಾತಿ ಜಾರಿಗಾಗಿ ಮಾದಿಗ ಸಮುದಾಯಗಳ ಸ್ವಾಭಿಮಾನದ ಒಕ್ಕೂಟದ ವತಿಯಿಂದ ಮಾ.19ರಂದು ಬೆಳಗ್ಗೆ 10ಕ್ಕೆ ಬೆಂಗಳೂರು ನಗರದ ಫ್ರೀಡಂ ಪಾರ್ಕ್ ನಲ್ಲಿ ರಾಜ್ಯಮಟ್ಟದ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಒಳಮಿಸಲಾತಿ ಆದೇಶವನ್ನು ಯಥಾವತ್ತಾಗಿ ಜಾರಿಗೊಳಿಸುವಂತೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ನೆಡೆಯುತ್ತಿರುವ ಹೋರಾಟದಲ್ಲಿ ಭಾಗವಹಿಸಲು ದೊಡ್ಡಬಳ್ಳಾಪುರ ತಾಲ್ಲೂಕಿನಿಂದ ಸಮುದಾಯದ ಸಾವಿರಾರು ಮುಖಂಡರು, ಪ್ರಮುಖರು ಬಸ್ ಗಳ ಮೂಲಕ ತೆರಳಿದರು.   ಈ ಕುರಿತು ಮುಖಂಡ ಬಚ್ಚಳ್ಳಿ ನಾಗರಾಜು ಮಾತನಾಡಿ ಸುಪ್ರೀಂ‌ಕೋರ್ಟ್ ಆದೇಶದಂತೆ ಸರ್ಕಾರದ ದತ್ತಾಂಶಗಳನ್ನು ಪರಿಗಣಿಸಿ ಬಿಳಂಬ ನೀತಿ ಅನುಸರಿಸದೆ […]

Continue Reading

ಪುಟ್ಟ ಮಕ್ಕಳ ನಗುವಿನಲ್ಲಿ “ಅಪ್ಪು” ಸದಾ ಅಮರ – ನರಸಿಂಹಮೂರ್ತಿ

ದೊಡ್ಡಬಳ್ಳಾಪುರ : ಡಾ.ಪುನೀತ್ ರಾಜಕುಮಾರ್ ರವರ 50 ನೇ ಹುಟ್ಟು ಹಬ್ಬದ ಅಂಗವಾಗಿ ಸರ್ಕಾರಿ ಶಾಲೆಯ ಮಕ್ಕಳಿಗೆ ನೋಟ್ಸ್ ಬುಕ್ ಪೆನ್ನು ಪೆನ್ಸಿಲ್ ವಿತರಣಾ ಕಾರ್ಯಕ್ರಮವನ್ನು ಮಾಡಲಾಯಿತು ಇಲ್ಲಿನ ವಿವೇಕಾನಂದ ನಗರದಲ್ಲಿ ಅಪ್ಪು ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕ ನಟ ಡಾ. ಪುನೀತ್ ರಾಜಕುಮಾರ್ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸಿ ಸಿಹಿ ಹಂಚಿ ಸಂಭ್ರಮಿಸಿದರು, ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಾರ್ವಜನಿಕರಿಗೆ ಅನ್ನದಾಸೋಹ ಏರ್ಪಡಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಿದರು. ಕಾರ್ಯಕ್ರಮದ ಆಯೋಜಕ ಹಾಗೂ ಅಪ್ಪು ಅಭಿಮಾನಿ ನರಸಿಂಹಮೂರ್ತಿ ಮಾತನಾಡಿ ಕರ್ನಾಟಕ […]

Continue Reading

“ಅಪ್ಪು”50ನೇ ವರ್ಷದ ಹುಟ್ಟು ಹಬ್ಬವನ್ನು ವಿಶೇಷವಾಗಿ ಆಚರಿಸಿದ ಯುವ ಪಡೆ : ಎಳ್ಳುಪುರ ಕ್ರಾಸ್ ಗೆ ಡಾ. ಪುನೀತ್ ರಾಜಕುಮಾರ್ ವೃತ್ತ ಎಂದು ಮರುನಾಮಕರಣ

ದೊಡ್ಡಬಳ್ಳಾಪುರ : ತಾಲ್ಲೂಕಿನ ಎಳ್ಳು ಪುರ ಕ್ರಾಸ್ ಅನ್ನು ಕರ್ನಾಟಕ ರತ್ನ ಡಾ. ಪುನೀತ್ ರಾಜಕುಮಾರ್ ರವರ 50ನೇ ವರ್ಷದ ಹುಟ್ಟು ಹಬ್ಬದಂದು ಅವರ ಸವಿನೆನಪಿಗಾಗಿ ಡಾ. ಪುನೀತ್ ರಾಜಕುಮಾರ್ ವೃತ್ತ ಎಂದು  ನಾಮಕರಣ ಮಾಡಿ ನಾಮಫಲಕ ಅನಾವರಣಗೊಳಿಸಲಾಯಿತು. ದೊಡ್ಡಬಳ್ಳಾಪುರ ನಗರಸಭೆ ಉಪಾಧ್ಯಕ್ಷ ಎಂ ಮಲ್ಲೇಶ್ ನಾಮಫಲಕ ಲೋಕಾರ್ಪಣೆ ಮಾಡಿ ಮಾತನಾಡಿದರು ಚಿತ್ರರಂಗದ ಇತಿಹಾಸದಲ್ಲಿ ಯಾವ ನಟರಿಗೂ ಸಿಗದ ಅತ್ಯುತ್ತಮ ಗೌರವ ಡಾ. ಪುನೀತ್ ರಾಜಕುಮಾರ್ ಅವರಿಗೆ ಲಭಿಸಿದೆ . ಅವರ ನಿಸ್ವಾರ್ಥ ಸೇವಾ ಕಾರ್ಯಗಳೇ ಇಂದು […]

Continue Reading

ಅಪ್ಪು ಅಮರ ವಿಶೇಷ ಕಾರ್ಯಕ್ರಮ: ಅನ್ನದಾಸೋಹ ಸಮಿತಿಯೊಟ್ಟಿಗೆ ಹಸಿದವರಿಗೆ ಆಹಾರ ವಿತರಣೆ ಮಾಡಿದ ಅಭಿಮಾನಿಗಳು

ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಇವರ ಹುಟ್ಟು ಹಬ್ಬದ ಅಂಗವಾಗಿ ನಿರಂತರ ಅನ್ನದಾಸೋಹ ಕಾರ್ಯಕ್ರಮದಲ್ಲಿ ನಿರಾಶ್ರಿತ ಕಡುಬಡವರಿಗೆ ಆಹಾರ ವಿತರಣೆ ಮಾಡಲಾಯಿತು. 1818 ನೇ ದಿನದ ಅನ್ನ ದಾಸೋಹಕ್ಕೆ ಡಾ. ಶಿವರಾಜಕುಮಾರ್ ಹಾಗೂ ಡಾ.ಪುನೀತ್ ರಾಜಕುಮಾರ್ ರವರ ಅಭಿಮಾನಿಗಳು ಸಹಾಯ ಹಸ್ತ ನೀಡುವ ಮೂಲಕ ಕೇಕ್ ಕತ್ತರಿಸಿ ಸಿಹಿ ವಿತರಣೆ ಹಾಗೂ ಆಹಾರ ವಿತರಣೆ ಮಾಡುವ ಮೂಲಕ ಸಂಭ್ರಮಿಸಿದರು. ಬೆಂಗಳೂರು ಗ್ರಾಮಾಂತರ ಡಾ.ಶಿವರಾಜ್ ಕುಮಾರ್ ಸಂಘದ ಜಿಲ್ಲಾಧ್ಯಕ್ಷರಾದ ಡಿ .ಸಿ.ಚೌಡರಾಜ್ ಮಾತನಾಡಿ ರಾಜ್ ಕುಟುಂಬವೂ […]

Continue Reading

ಕರ್ನಾಟಕ ದಲಿತ ಸಂಘರ್ಷ ಸಮಿತಿ ಹೆಸರು ಬಳಸಿದ ಬ್ಯಾನರ್ ಅಳವಡಿಕೆ ಆರೋಪ ಸಂಘಟನೆಯ ಬ್ಯಾನರ್ ತೆಗೆಯುವಂತೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳಿಂದ ಪ್ರತಿಭಟನೆ

ದೊಡ್ಡಬಳ್ಳಾಪುರ : ಪ್ರೋ.ಬಿ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ(47-74/75)ಯ ಹೆಸರನ್ನು ಬಳಕೆ ಮಾಡಿ, ಸಂಘಟನೆಯ ಹೆಸರಿನಲ್ಲಿ ಅಧ್ಯಯನ ಶಿಬಿರವನ್ನ ನಡೆಸಲಾಗುತ್ತಿದೆ ಎಂದು ಆರೋಪಿಸಿ ಸಂಘಟನೆಯ ಕಾರ್ಯಕರ್ತರು ಶಿಬಿರ ಬಳಿಯ ಪ್ರತಿಭಟನೆ ನಡೆಸಿದ್ದಾರೆ ಹಾಗೂ ಸಂಘಟನೆಯ ಬ್ಯಾನರ್ ತೆಗೆಯುವಂತೆ ಆಗ್ರಹಿಸಿದ್ದಾರೆ. ತಾಲೂಕಿನ ಬೆಸೆಂಟ್ ಪಾರ್ಕ್ ನಲ್ಲಿ ಹೆಣ್ಣೂರು ಶ್ರೀನಿವಾಸ್ ರವರ ನೇತೃತ್ವದಲ್ಲಿ ರಾಜ್ಯ ಮಟ್ಟದ ಮೂರು ದಿನಗಳ ಅಧ್ಯಯನ ಶಿಬಿರವನ್ನು ನಡೆಸುತ್ತಿದ್ದಾರೆ, ಅಧ್ಯಯನ ಶಿಬಿರವನ್ನ ಕರ್ನಾಟಕ ದಲಿತ ಸಂಘರ್ಘ ಸಮಿತಿಯ ಹೆಸರಿನಲ್ಲಿ ಮಾಡಲಾಗುತ್ತಿದೆ ಎಂದು ಕರ್ನಾಟಕ ದಲಿತ […]

Continue Reading

ದೊಡ್ಡಬಳ್ಳಾಪುರ ತಾಲೂಕು ಕನಸವಾಡಿಯಲ್ಲಿ ನಡೆವ ಬೆಂ.ಗ್ರಾ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಹಿನ್ನಲೆ ಸಂಘ-ಸಂಸ್ಥೆಗಳ ಪ್ರಮುಖರ ಪೂರ್ವಭಾವಿ ಸಭೆ

ದೊಡ್ಡಬಳ್ಳಾಪುರ : ತಾಲೂಕಿನ ಕನಸವಾಡಿಯಲ್ಲಿ 26ನೇ ಕನ್ನಡ ಸಾಹಿತ್ಯ ಸಮ್ಮೇಳನ ನಿಗದಿಯಾಗಿದ್ದು, ಕನ್ನಡದ ಹಬ್ಬವನ್ನು ಯಶಸ್ವಿಯಾಗಿ ಆಯೋಜಿಸಲು ಎಲ್ಲ ಸಂಘ-ಸಂಸ್ಥೆಗಳ ಸಹಕಾರ ಅತ್ಯಗತ್ಯ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಎನ್.ಕೃಷ್ಣಪ್ಪ ತಿಳಿಸಿದರು.   ನಗರದ ಕನ್ನಡ ಜಾಗೃತ ಭವನದಲ್ಲಿ ಶನಿವಾರ ಸಂಜೆ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಹಿನ್ನಲೆ ಸಂಘ-ಸಂಸ್ಥೆಗಳ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಏಪ್ರಿಲ್‌ 12 ಮತ್ತು 13ರಂದು ಸಮ್ಮೇಳನ ನಡೆಯಲಿದ್ದು, ವಿಚಾರಗೋಷ್ಠಿ, ಕವಿಗೋಷ್ಠಿ, […]

Continue Reading

‘₹’ ಸಂಕೇತ ಕೈಬಿಟ್ಟ ತಮಿಳುನಾಡು ಸರ್ಕಾರ : ಕರವೇ ನಾರಾಯಣಗೌಡರಿಂದ ಪ್ರಶಂಸೆ

ತಮಿಳುನಾಡು ಸರ್ಕಾರ ರುಪಾಯಿ ಚಿಹ್ನೆಯನ್ನು ತಮಿಳಿನಲ್ಲಿಯೇ ಸಿದ್ಧಪಡಿಸಿ ಅದನ್ನು ಬಳಸಲು ಆರಂಭಿಸಿದೆ ಈ ಬೆಳವಣಿಗೆಯನ್ನು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ ಎ ನಾರಾಯಣಗೌಡ ಸ್ವಾಗತಿಸಿದ್ದಾರೆ.   ತಮಿಳುನಾಡು ಸರ್ಕಾರದ ವಿಧಾನಸಭೆ ಅಧಿವೇಶನದಲ್ಲಿ ಸರ್ಕಾರದ ಮುಂಗಡಪತ್ರವನ್ನು ಓದುವ ಒಂದು ದಿನ ಮೊದಲು ತಮಿಳುನಾಡು ಸರ್ಕಾರ ತಮಿಳು ಭಾಷೆಯ ” ರೂ ” ರುಪಾಯಿ ಚಿಹ್ನೆಯನ್ನು ಬಳಸುವ ನಿರ್ಧಾರ ಕೈಗೊಂಡಿದ್ದು. ತಮಿಳುನಾಡಿನಲ್ಲಿ ತಮಿಳು ಲಿಪಿಯ ರೂಪಾಯಿ ಸಂಕೇತವನ್ನು ಬಳಸುವ ಗಟ್ಟಿಯಾದ ತೀರ್ಮಾನ ಮಾಡಿದ್ದಾರೆ. ಹೌದು ಈ ಕುರಿತು ತಮ್ಮ […]

Continue Reading