ಸಾರ್ವಜನಿಕ ಆಸ್ಪತ್ರೆ : ಹಾವು ಕಡಿತಕ್ಕೆ ಒಳಗಾದ ಪುಟ್ಟ ಕಂದಮ್ಮನನ್ನು ಉಳಿಸಲು ಆಸ್ಪತ್ರೆ ಸಿಬ್ಬಂದಿಗಳ ಹರಸಾಹಸ : ಸದ್ಯ ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಂದಮ್ಮ

ದೊಡ್ಡಬಳ್ಳಾಪುರ : ನಾಗರ ಹಾವು ಕಡಿತಕ್ಕೆ ಒಳಗಾದ ಏಳು ವರ್ಷದ ಅಮೀದ್ ಕುಮಾರ್ ಎಂಬ ಮಗುವಿನ ಪ್ರಾಣ ಉಳಿಸಲು ಸಾಕಷ್ಟು ಪ್ರಯತ್ನ ಮಾಡುವ ಮೂಲಕ ದೊಡ್ಡಬಳ್ಳಾಪುರ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿ ವರ್ಗ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ.ಮಗುವಿನ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು,ಹೆಚ್ಚಿನ ಚಿಕಿತ್ಸೆಗಾಗಿ ಮಗುವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.   ತಾಲ್ಲೂಕಿನ ಕೋಡಿಹಳ್ಳಿ ಸಮೀಪದಲ್ಲಿ ಉತ್ತರ ಭಾರತ ಮೂಲದ ಕೂಲಿ ಕಾರ್ಮಿಕರ ಕುಟುಂಬ ವಾಸವಿದ್ದು ಇಂದು ಏಳು ವರ್ಷದ ಕಂದಮ್ಮ ಅಮೀದ್ ಕುಮಾರ್ ಗೆ […]

Continue Reading

ಒಳ ಮೀಸಲಾತಿ ಜಾರಿ : ವಲ್ಲದಮನಸ್ಸಿನಲ್ಲಿ ರಾಜ್ಯಸರ್ಕಾರದ ಘೋಷಣೆಯನ್ನು ಸ್ವಾಗತಿಸಿದ ಮಾದಿಗ ಸಮುದಾಯದ ಮುಖಂಡರು

ದೊಡ್ಡಬಳ್ಳಾಪುರ : ಮಾದಿಗ ಸಮುದಾಯದ 35 ವರ್ಷಗಳ ಹೋರಾಟಕ್ಕೆ ಫಲವಾಗಿ ಒಳ ಮೀಸಲಾತಿ ಜಾರಿಯಾಗಿದೆ. ಈ ಹಿನ್ನಲೆ ಮಾದಿಗ ಸಮುದಾಯದ ಮುಖಂಡರು ಪರಸ್ಪರ ಸಿಹಿ ಹಂಚಿಕೊಂಡು ಸಂಭ್ರಮಿಸಿದರು. ದೊಡ್ಡಬಳ್ಳಾಪುರ ನಗರದ ಪ್ರವಾಸಿ ಮಂದಿರದಲ್ಲಿ ಮಾದಿಗ ಸಮುದಾಯಗಳ ಒಕ್ಕೂಟದ ವತಿಯಿಂದ ನೆಡೆದ ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಒಳ ಮೀಸಲಾತಿಯನ್ನು ಮಾದಿಗ ಸಮುದಾಯದ ಮುಖಂಡರು ಸ್ವಾಗತಿಸಿದರು.   ಇದೇ ವೇಳೆ ಮುಖಂಡರಾದ ರಾಮಕೃಷ್ಣಪ್ಪ ಮಾತನಾಡಿ ಕಾಂಗ್ರೆಸ್ ಸರ್ಕಾರ ಚುನಾವಣಾ ಪ್ರಣಾಳಿಕೆಯಲ್ಲೇ ಒಳ ಮೀಸಲಾತಿ ಜಾರಿ ಮಾಡುವುದ್ದಾಗಿ ಭರವಸೆ […]

Continue Reading

ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿ.ಒ.ಪಿ) ಮತ್ತು ಬಣ್ಣ ಲೇಪಿತವಾದ ವಿಗ್ರಹಗಳನ್ನು ಬಳಸದೆ ಪರಿಸರ ಸ್ನೇಹಿ ಗಣೇಶ ಹಬ್ಬ ಆಚರಿಸಿ

ಇದೇ ಆಗಸ್ಟ್ 26 ಮತ್ತು 27 ರಂದು ಸ್ವರ್ಣಗೌರಿ ಹಾಗೂ ಗಣೇಶ ಚತುರ್ಥಿ ಹಬ್ಬದ ಆಚರಣೆ ಮಾಡುವ ಸಲುವಾಗಿ ಸಾರ್ವಜನಿಕರು ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿ.ಒ.ಪಿ) ಮತ್ತು ಬಣ್ಣ ಲೇಪಿತವಾದ ವಿಗ್ರಹಗಳನ್ನು ಇನ್ನೂ ಮುಂದೆ ರಾಜ್ಯದ ಯಾವುದೇ ಕೆರೆ ಮತ್ತು ಇತರೆ ಜಲ ಮೂಲಗಳಲ್ಲಿ ವಿಸರ್ಜಿಸುವುದನ್ನು ಕರ್ನಾಟಕ ರಾಜ್ಯ ಮಾಲಿನ್ಯ ಮಂಡಳಿ ನಿಷೇಧಿಸಿದೆ.   ಸಾರ್ವಜನಿಕರು ಸಾಮಾನ್ಯವಾಗಿ ಪಿ.ಒ.ಪಿ ಮತ್ತು ಬಣ್ಣದ ವಿಗ್ರಹಗಳನ್ನು ಸ್ಥಾಪಿಸಿ ಪೂಜಿಸಿದ ನಂತರ ಕೆರೆ,ಬಾವಿ, ಕಲ್ಯಾಣಿಗಳಲ್ಲಿ ಹಾಗೂ ಇನ್ನಿತರೆ ನೈಸರ್ಗಿಕ ಜಲಮೂಲಗಳಿಗೆ ವಿಸರ್ಜಿಸುವುದು […]

Continue Reading

ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಸರ್ವಸದಸ್ಯರ ಮಹಾಸಭೆ ಮತ್ತು ಜಿಲ್ಲಾ ಪತ್ರಿಕಾ ದಿನದ ಆಚರಣೆ

ದೊಡ್ಡಬಳ್ಳಾಪುರ : ಪತ್ರಕರ್ತರು ಸಮಾಜದ ಅಂಕು ಡೊಂಕು ಗಳನ್ನು ತಮ್ಮ ಬರವಣಿಗೆ ಯಿಂದ ಯಾವುದೇ ಪಕ್ಷಪಾತವಿಲ್ಲದೆ ತಿದ್ದಬೇಕು, ಸಮಾಜದಲ್ಲಿ ನೆಡೆಯುವ ತಪ್ಪುಗಳನ್ನು ಯಾವುದೇ ಅಂಜಿಕೆ ಇಲ್ಲದೇ ಪ್ರಶ್ನಿಸುವ ಮೂಲಕ ಉತ್ತಮ ಸಮಾಜದ ನಿರ್ಮಾಣದಲ್ಲಿ ಪತ್ರಕರ್ತರ ಪಾತ್ರ ಮುಖ್ಯವಾದುದ್ದು ಎಂದು ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ಅಧ್ಯಕ್ಷ ಬಿ.ವಿ ಮಲ್ಲಿಕಾರ್ಜುನಯ್ಯ ತಿಳಿಸಿದರು. ಶ್ರೀಕ್ಷೇತ್ರ ಘಾಟಿ ಸುಬ್ರಮಣ್ಯದ ಎ.ಎಸ್.ವಿ.ಎನ್.ವಿ ಸಮುದಾಯ ಭವನದಲ್ಲಿ ನಡೆದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸರ್ವಸದಸ್ಯರ ಮಹಾಸಭೆ ಮತ್ತು ಜಿಲ್ಲಾ ಪತ್ರಿಕಾ ದಿನಾಚರಣೆಯಲ್ಲಿ […]

Continue Reading

ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮಗದಿಂದ ವಿವಿಧ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನ*

ಜಿಲ್ಲೆಯಲ್ಲಿ 2025-26ನೇ ಸಾಲಿಗೆ ಸಂಬಂಧಿಸಿದಂತೆ ಆರ್ಥಿಕವಾಗಿ ಹಿಂದುಳಿದ ವರ್ಗದ ಅಭಿವೃದ್ದಿಗಾಗಿ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮಗದಿಂದ ವಿವಿಧ ಯೋಜನೆಗಳ ಸೌಲಭ್ಯ ಪಡೆಯಲು ಅರ್ಹ ಫಲಾಪೇಕ್ಷಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.   ಸ್ವಯಂ ಉದ್ಯೋಗ ನೇರ ಸಾಲ ಯೋಜನೆಯಡಿ ಕುರಿ ಸಾಕಾಣಿಕೆ ಯೋಜನೆ (ಕಿರು ಆರ್ಥಿಕ ಚಟುವಟಿಕೆಗಳಿಗೆ)ಮತ್ತು ನೇರ ಸಾಲ ಯೋಜನೆ (ಸಹಾಯಧನ ಗರಿಷ್ಠ ರೂ,2 ಲಕ್ಷ). ಉದ್ಯಮ ಶೀಲತಾ ಅಭಿವೃದ್ಧಿ ಯೋಜನೆಯಲ್ಲಿ ಹೈನುಗಾರಿಕೆ (ಸಹಾಯಧನ ಗರಿಷ್ಠ ರೂ, 1.25 ಲಕ್ಷ), ಫಾಸ್ಟ್ ಫುಡ್ ಟ್ರಕ್, ಟ್ರೈಲರ್/ […]

Continue Reading

ತಾಲ್ಲೂಕು ಕಛೇರಿಯಲ್ಲಿ ಲಂಚವಿಲ್ಲದೆ ಯಾವ ಸರ್ಕಾರಿ ಕೆಲಸಗಳು ನಡೆಯುವುದಿಲ್ಲ – ಎ. ನಂಜಪ್ಪ

ದೊಡ್ಡಬಳ್ಳಾಪುರ : ತಾಲ್ಲೂಕು ಆಡಳಿತ ಕಛೇರಿಗಳಾದ ತಹಶೀಲ್ದಾರ್ ಮತ್ತು ಉಪವಿಭಾಗಾಧಿಕಾರಿಗಳ ಕಛೇರಿಯಲ್ಲಿ ದಳ್ಳಾಳಿಗಳ ಹಾವಳಿ ಹೆಚ್ಚಾಗಿದ್ದು, ತಮ್ಮ ಕೆಲಸಗಳ ನಿಮಿತ್ಯ ತಾಲ್ಲೂಕು ಕಛೇರಿಗೆ ಬರುವ ಸಾಮಾನ್ಯ ಜನರನ್ನು ದಿಕ್ಕುತಪ್ಪಿಸಿ ವಂಚಿಸಿ ಹಣ ವಸೂಲಿ ಮಾಡುತ್ತಿದ್ದಾರೆ. ತಾಲ್ಲೂಕು ಕಛೇರಿಯಲ್ಲಿ ಲಂಚವಿಲ್ಲದೆ ಯಾವ ಸರ್ಕಾರಿ ಕೆಲಸಗಳು ನಡೆಯುವುದಿಲ್ಲ ಎಂದು ತಾಲ್ಲೂಕಿನ ನಾಗರೀಕರು ನಮ್ಮ ಸಂಘಟನೆಗೆ ನೂರಾರು ದೂರುಗಳುನಮ್ಮನೀಡಿದ್ದಾರೆ ಎಂದು ರಾಜ್ಯ ವಿಜಯ ಕರ್ನಾಟಕ ರಕ್ಷಣಾ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಎ. ನಂಜಪ್ಪ ಆರೋಪಿಸಿದರು.   ಪ್ರತಿಭಟನೆ ಕುರಿತು ಸಂಘಟನೆಯ ಪ್ರಮುಖರು  […]

Continue Reading

ಕುಷ್ಠರೋಗ ಮುಕ್ತ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸಿ: ಡಾ.ಪ್ರದೀಪ್ತಾ ಕುಮಾರ್ ನಾಯಕ್

ಮನುಷ್ಯನ ಆರೋಗ್ಯಕ್ಕೆ ಸಂಬಂಧಿಸಿದಂತೆ ಕುಷ್ಠರೋಗವು ಒಂದು ಬಾಧಿತ ರೋಗವಾಗಿದ್ದು, ಕುಷ್ಠರೋಗ ಮುಕ್ತ ಸಮಾಜ ನಿರ್ಮಿಸಲು ಅಧಿಕಾರಿಗಳು ನಿರಂತರ ಕಾರ್ಯ ಪ್ರವೃತ್ತರಾಗಿರಬೇಕು ಎಂದು ಕೇಂದ್ರ ಮಾನವ ಹಕ್ಕುಗಳ ಆಯೋಗದ ಅಧಿಕಾರಿ ಡಾ.ಪ್ರದೀಪ್ತಾ ಕುಮಾರ ನಾಯಕ್ ಅವರು ಹೇಳಿದರು.   ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಕುಷ್ಠರೋಗ ಪ್ರಕರಣಗಳ ಸಮೀಕ್ಷೆ ಹಾಗೂ ಸರ್ಕಾರದ ಸೌಲಭ್ಯಗಳ ಬಗೆಗಿನ ಪರಿಶೀಲನಾ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದ ಅವರು ರೋಗದ ಆರಂಭಿಕ ಲಕ್ಷಣಗಳ ಪತ್ತೆಯಿಂದ ಕುಷ್ಠರೋಗವನ್ನು ನಿಯಂತ್ರಿಸಬಹುದು. ರೋಗದ ಲಕ್ಷಣಗಳು ಕಂಡುಬಂದ […]

Continue Reading

ಬ್ಯಾಂಕ್ ನಿಂದ ಗ್ರಾಹಕರಿಗೆ ಸಿಗುವ ಸವಲತ್ತುಗಳನ್ನು ಸದುಪಯೋಗ ಪಡಿಸಿಕೊಳ್ಳಿ – ನಂಜಮರಿಯಪ್ಪ

ದೊಡ್ಡಬಳ್ಳಾಪುರ : ಕೆನರಾಬ್ಯಾಂಕ್ ವತಿಯಿಂದ ತಾಲ್ಲೂಕಿನ ಕೊನಘಟ್ಟ ಗ್ರಾಮದಲ್ಲಿ 3 ತಿಂಗಳ ಹಣಕಾಸು ಸೇರ್ಪಡೆ ಅಭಿಯಾನ ಕಾರ್ಯಕ್ರಮ ನೆಡೆಯಿತು. ಕೊನಘಟ್ಟ ಗ್ರಾಮದ ಕೆನರಾಬ್ಯಾಂಕ್ ಮುಂಭಾಗದ ನೆಡೆದ ಕಾರ್ಯಕ್ರಮದಲ್ಲಿ PMJDY, APY, REKYC, PMSBY, PMJJYY ಯೋಜನೆಗಳಗೆ ಬಗ್ಗೆ ಹಾಗೂ ಬ್ಯಾಂಕ್ ನಿಂದ ಗ್ರಾಹಕರಿಗೆ ಸಿಗುವ ಸವಲತ್ತುಗಳ ಬಗ್ಗೆ ಕೊನಘಟ್ಟ ಕೆನರಾಬ್ಯಾಂಕ್ ಘಟಕದ ವ್ಯವಸ್ಥಾಪಕರಾದ ಉದಯ್ ಕಿರಣ್ ತಿಳಿಸಿದರು. ಬ್ಯಾಂಕಿನಿಂದ ವರ್ಷಕ್ಕೆ 20 ರೂಗಳ ವಿಮೆಪಡೆಯುವ ಮೂಲಕ ಅಫಘಾತಗಳಲ್ಲಿ ಮೃತಪಟ್ಟರ ಕುಟುಂಬಕ್ಕೆ ಕನಿಷ್ಠ ಎರಡು ಲಕ್ಷ ರೂಪಾಯಿಗಳ ವಿಮಾಹಣ […]

Continue Reading

ಮೈತ್ರಿ ಸರ್ವ ಸೇವಾ ಸಮಿತಿ ವತಿಯಿಂದ ಸಾವಯವ ಸಂತೆ ಮತ್ತು ಸ್ಥಳೀಯ ರೈತರಿಗೆ ಅರಿವು ಕಾರ್ಯಕ್ರಮ

ಮೈತ್ರಿ ಸರ್ವ ಸೇವಾ ಸಮಿತಿ (ಸಮಗ್ರ ಕೃಷಿ ಘಟಕ) ವತಿಯಿಂದ ಹಾಡೋನಹಳ್ಳಿ ಕೆವಿಕೆ ಸಹಯೋಗದೊಂದಿಗೆ ಸಾವಯವ ಸಂತೆ ಮತ್ತು ಸ್ಥಳೀಯ ರೈತರಿಗೆ ಅರಿವು ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಕೆವಿಕೆ ಹಿರಿಯ ವಿಜ್ಞಾನಿ ಹನುಮಂತ ರಾಯಪ್ಪ ಮಾತನಾಡಿ ಯಾವುದೇ ವ್ಯವಸಾಯ ಮಾಡಿದರೆ ಮುಂದೆ ಬೆಳೆ ಬೆಳೆಯಲು ರೈತರಿಗೆ ಸಹಾಯಕ ಹಾಗೂ ಪೂರಕವಾಗಿರಬೇಕು.. ನಮ್ಮ ವ್ಯವಸಾಯ ಭೂಮಿಯ ಫಲವತ್ತಾತೆ ಕಾಪಾಡುವ ನಿಟ್ಟಿನಲ್ಲಿ ಕೃಷಿ ಮಾಡಬೇಕಾಗಿದೆ. ರಾಸಾಯನಿಕ ಗೊಬ್ಬರ ಹೆಚ್ಚಾಗಿ ಬಳಸದೆ ಸಾವಯವ ಕೃಷಿಗೆ ಮುಂದಾಗಬೇಕು ಎಂದರು.   ಹಾಡೋನಹಳ್ಳಿ ಗ್ರಾಮ […]

Continue Reading

ದೊಡ್ಡಬಳ್ಳಾಪುರದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಅಧ್ಯಯನ ಮಾರ್ಗದರ್ಶಿ ಕಾರ್ಯಾಗಾರ

*ದೊಡ್ಡಬಳ್ಳಾಪುರ* : ಮಕ್ಕಳು ಕಷ್ಟುಪಟ್ಟು ಓದುವುದಕ್ಕಿಂತ ಇಷ್ಟ ಪಟ್ಟು ಓದುವ ಪರಿಪಾಠವನ್ನು ಬೆಳೆಸಿಕೊಳ್ಳಬೇಕು. ಒತ್ತಡಕ್ಕೊಳಗಾಗದೆ ಧನಾತ್ಮಕ ಆಲೋಚನೆಗಳ ಮೂಲಕ ಸಾಧನೆಯ ಹಾದಿಯಲ್ಲಿ ಮುನ್ನಡೆಯಬೇಕು ಎಂದು ಥಟ್‌ ಅಂತ ಹೇಳಿ ಖ್ಯಾತಿಯ ಡಾ.ನಾ.ಸೋಮೇಶ್ವರ ಹೇಳಿದರು.   ಇಲ್ಲಿನ ಲಯನ್ಸ್‌ ಕ್ಲಬ್‌ ಆಫ್‌ ದೊಡ್ಡಬಳ್ಳಾಪುರ ಆರ್.ಎಲ್.ಜಾಲಪ್ಪ ಇನ್ಸ್‌ಟಿಟ್ಯೂಷನ್ಸ್, ಭಾರತೀಯ ವೈದ್ಯಕೀಯ ಸಂಘ, ಭಾರತ ವಿದ್ಯಾರ್ಥಿ ಫೆಡರೇಶನ್‌ ಹಾಗೂ ಶ್ರೀ ದೇವರಾಜ ಅರಸ್‌ ಅಂತಾರಾಷ್ಟ್ರೀಯ ವಸತಿ ಪ್ರೌಢಶಾಲೆಯ ಸಹಯೋಗದಲ್ಲಿ ನಡೆದ ಎಸ್‌ಎಸ್‌ಎಲ್‌ಸಿ ಮಕ್ಕಳು ಹಾಗೂ ಅವರ ಪೋಷಕರಿಗೆ ಮಾರ್ಗದರ್ಶನ ಕಾರ್ಯಾಗಾರದಲ್ಲಿ ಪಾಲ್ಗೊಂಡು […]

Continue Reading