*ಕಾಲುಬಾಯಿ ರೋಗ ತಡೆಯಲು 6ನೇ ಸುತ್ತಿನ ಲಸಿಕೆ ಅಭಿಯಾನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಹೆಚ್ ಮುನಿಯಪ್ಪ ಚಾಲನೆ.*

ಜಿಲ್ಲೆ ತಾಲೂಕು
Spread the love

ಬೆಂಗಳೂರು ಗ್ರಾಮಾಂತರ ಜಿಲ್ಲೆ, ಅಕ್ಟೋಬರ್ 22(ವಿಜಯಮಿತ್ರ): ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ಜಾನುವಾರಗಳ ಕಾಲು ಬಾಯಿ ರೋಗ ತಡೆಯಲು 6ನೇ ಸುತ್ತಿನ ಕಾಲುಬಾಯಿ ರೋಗ ಲಸಿಕಾ ಅಭಿಯಾನಕ್ಕೆ ದೇವನಹಳ್ಳಿ ಪಶು ಆಸ್ಪತ್ರೆ ಬಳಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಹೆಚ್. ಮುನಿಯಪ್ಪ ಅವರು ಚಾಲನೆ ನೀಡಿದರು.

ಜಿಲ್ಲೆಯಾದ್ಯಂತ ಅಕ್ಟೋಬರ್ 21 ರಿಂದ ನವೆಂಬರ್ 21 ರವರೆಗೆ ಕಾಲುಬಾಯಿ ರೋಗ ಲಸಿಕಾ ಕಾರ್ಯಕ್ರಮವನ್ನು ಬಮೂಲ್ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದು ಜಾನುವಾರುಗಳಿಗೆ (ದನ ಮತ್ತು ಎಮ್ಮೆ) ಲಸಿಕೆ ಹಾಕಲಾಗುವುದು.ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ, ಪಶು ಆಸ್ಪತ್ರೆ ದೇವನಹಳ್ಳಿ ವತಿಯಿಂದ 50% ಸಹಾಯಧನದೊಂದಿಗೆ (ರೂ.16700/-) ಒಟ್ಟು 20 ಫಲಾನುಭವಿಗಳಿಗೆ 02 ಹೆಚ್.ಪಿ ಮೇವು ಕಟಾವು ಯಂತ್ರಗಳನ್ನು ವಿತರಿಸಲಾಗಿದೆ. ಕುರಿ/ಮೇಕೆ ಆಕಸ್ಮಿಕ ಮರಣದ ಅನುಗ್ರಹ ಯೋಜನೆಯಡಿ ದೇವನಹಳ್ಳಿ ತಾಲ್ಲೂಕಿನಲ್ಲಿ ಒಟ್ಟು 65 ಫಲಾನುಭವಿಗಳಿಗೆ ತಲಾ 5000 ರೂಪಾಯಿಗಳಂತೆ ವಿತರಿಸಲಾಯಿತು.

 

ಜಾನುವಾರು ಆಕಸ್ಮಿಕ ಮರಣದ ಅನುಗ್ರಹ ಯೋಜನೆ ಯೋಜನೆಯಡಿ ದೇವನಹಳ್ಳಿ ತಾಲ್ಲೂಕಿನಲ್ಲಿ ಒಟ್ಟು 58 ಫಲಾನುಭವಿಗಳಿಗೆ ತಲಾ 10,000 ರೂಪಾಯಿಗಳಂತೆ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಜಿಲ್ಲಾ ಉಪನಿರ್ದೇಶಕರಾದ ಡಾ. ಜಗದೀಶ್, ತಾಲ್ಲೂಕು ಪಶು ವೈದ್ಯಾಧಿಕಾರಿ ಡಾ, ಅನಿಲ್ ಕುಮಾರ್, ತಹಶಿಲ್ದಾರ್ ಬಾಲಕೃಷ್ಣ, ಬಯ್ಯಪ್ಪಾ ಸದಸ್ಯರಾದ ಮಂಜುನಾಥ್, ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *