ಕ್ಯಾನ್ಸರ್ ರೋಗಿಗೆ ಸಹಾಯಧನ ವಿತರಣೆ

ದೊಡ್ಡಬಳ್ಳಾಪುರ : ತಾಲ್ಲೂಕಿನ ಕೊಡಿಗೇಹಳ್ಳಿ ವಲಯದ ಚಿಕ್ಕಪೇಟೆಯ ನಿವಾಸಿ ಫಾರೂಕ್ ಫಾಷ ರವರಿಗೆ 20,000/- ರೂಪಾಯಿಗಳ ಸಹಾಯಧನ ಮಂಜೂರು ಮಾಡಿದ್ದು ಇಂದು(ನ. 05) ತಾಲ್ಲೂಕು ಯೋಜನಾಧಿಕಾರಿಗಳಾದ ದಿನೇಶ್ ಸಹಾಯಧನ ಚೆಕ್ ವಿತರಣೆ ಮಾಡಿದರು. Ad ಶ್ರೀ ಕ್ಷೇತ್ರ ಧರ್ಮಸ್ಥಳ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಗಂಟಲು ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ಫಾರೂಕ್ ಫಾಷ ರವರಿಗೆ ಸಹಾಯಧನ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ವಲಯದ ಮೇಲ್ವಿಚಾರಕರಾದ ಸವಿತಾ , ಒಕ್ಕೂಟದ ಪದಾಧಿಕಾರಿಗಳಾದ ಸುಜಾತಾ,ರತ್ನಮ್ಮ,ಸೇವಾಪ್ರತಿನಿಧಿಗಳಾದ ಮಂಜಮ್ಮ,ಶ್ವೇತಾ, ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು

Continue Reading

ಚಿಕ್ಕಬೆಳವಂಗಲ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಚಿಕಿತ್ಸೆಗಾಗಿ ಸಹಾಯಧನ ವಿತರಣೆ

ಕ್ರಿಟಿಕಲ್ ಇಲ್ ನೆಸ್ ಫಂಡ್ ಕಾರ್ಯಕ್ರಮ ಅಡಿಯಲ್ಲಿ ಮಂಜೂರಾಗಿದ್ದ 37,500ರೂಗಳ ಸಹಾಯಧನ ವನ್ನು ದೊಡ್ಡಬಳ್ಳಾಪುರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಎನ್. ಆರ್.ದಿನೇಶ್ ಚಿಕ್ಕ ಬೆಳವಂಗಲ ಗ್ರಾಮದ ಫಲನುಭವಿ ಸುರೇಖಾರವರಿಗೆ ವಿತರಣೆ ಮಾಡಿದರು.   ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ದೊಡ್ಡಬಳ್ಳಾಪುರ ತಾಲ್ಲೂಕು ಇವರ ವತಿಯಿಂದ ದೊಡ್ಡ ಬೆಳವಂಗಲ ಹೋಬಳಿಯ ಚಿಕ್ಕ ಬೆಳವಂಗಲ ಗ್ರಾಮದ ಧರ್ಮೇಂದ್ರರವರ ಪತ್ನಿ ಸುರೇಖಾರವರು ತೀವ್ರ ತರದ ಕಾಯಿಲೆಯಿಂದ ಬಳಲುತ್ತಿದ್ದು ಇವರ ಚಿಕಿತ್ಸೆಗೆ ಕ್ರಿಟಿಕಲ್ ಇಲ್ ನೆಸ್ ಫಂಡ್ ಕಾರ್ಯಕ್ರಮ ಅಡಿಯಲ್ಲಿ […]

Continue Reading