*ರೈಲಿಗೆ ಸಿಲುಕಿ ಅಪರಿಚಿತ ವ್ಯಕ್ತಿ ಸಾವು*

ದೊಡ್ಡಬಳಾಪುರ ಮೇ14( ವಿಜಯಮಿತ್ರ ) : ತೊಂಡೇಬಾವಿ ಮತ್ತು ಗೌರಿಬಿದನೂರು ರೈಲು ನಿಲ್ದಾಣಗಳ ಮಧ್ಯೆ ಹನುಮೇನಹಳ್ಳಿ ಹತ್ತಿರ ಅಪರಿಚಿತ ಗಂಡಸು ಸುಮಾರು 35 ವರ್ಷದವನು ರೈಲಿಗೆ ಸಿಕ್ಕಿ ಮೃತಪಟ್ಟಿರುವ ಘಟನೆ ಸಂಭವಿಸಿದೆ.   ಯಶವಂತಪುರ ರೈಲ್ವೆ ಪೋಲಿಸ್ ಠಾಣೆ ಯು.ಡಿ ಆರ್.ನಂ. 90/2024 ಕಲಂ 174 Cr.P.C ರೀತ್ಯಾ ಪ್ರಕರಣ ದಾಖಲು ಮಾಡಿಕೊಂಡಿದ್ದು ಮೃತನ ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ.     *ಚಹರೆ* – 5.5ಅಡಿ ಎತ್ತರ, ಎಣ್ಣೆಗೆಂಪು ಬಣ್ಣ ತಲೆಯಲ್ಲಿ ಸುಮಾರು 1 ಇಂಚು […]

Continue Reading

*ಕೋಳೂರು ಸರ್ಕಾರಿ ಜಾಗದ ಸರ್ವೆ ಕಾರ್ಯ : ಆಶ್ರಯ ಯೋಜನೆ ಅಡಿ ನಿವೇಶನ ಹಂಚಲು ವರದಿ ಸಲ್ಲಿಕೆ*

ದೊಡ್ಡಬಳ್ಳಾಪುರ ಮೇ 14 ( ವಿಜಯ ಮಿತ್ರ ) : ತಾಲೂಕಿನ ಕೋಳೂರು ಗ್ರಾಮದ ಬಡ ಕುಟುಂಬಗಳಿಗೆ ವಾಸಿಸಲು ಸ್ಥಳದ ಅವಶ್ಯಕತೆ ಇದ್ದು. ಗ್ರಾಮಸ್ಥರ ಕೋರಿಕೆಯ ಮೇರೆಗೆ ಇಂದು ಕೋಳೂರು ಗ್ರಾಮದ ಸರ್ವೇ ನಂಬರ್ 182 ರಲ್ಲಿ ಲಭ್ಯವಿರುವ 9.17ಗುಂಟೆ ಸರ್ಕಾರಿ ಜಾಗದ ಸರ್ವೆ ಕಾರ್ಯ ನಡೆಯಿತು. ಈ ಕುರಿತು ಸ್ಥಳೀಯ ಮುಖಂಡರಾದ ಪೂಜಪ್ಪ ಮಾತನಾಡಿ ಹಲವು ವರ್ಷಗಳ ಪ್ರತಿಫಲವಾಗಿ ಇಂದು ನಮ್ಮ ಗ್ರಾಮಕ್ಕೆ ಸೇರಿರುವ 9.17 ಗುಂಟೆ ಸರ್ಕಾರಿ ಜಾಗದ ಸರ್ವೆ ಕಾರ್ಯ ನಡೆದಿದೆ . […]

Continue Reading

*ಹೆಚ್ಚುತ್ತಿರುವ ತಾಪಮಾನದಿಂದ ತೋಟಗಾರಿಕಾ ಬೆಳೆಗಳನ್ನು ಸಂರಕ್ಷಿಸುವ ಕ್ರಮಗಳು*

ಬೆಂಗಳೂರು ಗ್ರಾಮಾಂತರ ಜಿಲ್ಲೆ, ಮೇ‌ 14 ( ವಿಜಯಮಿತ್ರ ); ಬೆಂಗಳೂರು ಗ್ರಾಮಾಂತರ ಜಿಲ್ಲೆಯು ನಾಲ್ಕು ತಾಲ್ಲೂಕುಗಳನ್ನು ಒಳಗೊಂಡು ಪೂರ್ವ ಒಣವಲಯಕ್ಕೆ ಸೇರಿರುತ್ತದೆ. ಪ್ರಮುಖವಾಗಿ ಜಿಲ್ಲೆಯಲ್ಲಿ ತೋಟಗಾರಿಕಾ ಬೆಳೆಗಳಲ್ಲಿ ಹಣ್ಣಿನ ಬೆಳೆಗಳಾದ ಮಾವು, ದ್ರಾಕ್ಷಿ, ಸೀಬೆ, ಬಾಳೆ ಮತ್ತು ದಾಳಿಂಬೆ ಹಾಗೂ ತರಕಾರಿ ಬೆಳೆಗಳಾದ ಟೊಮ್ಯಾಟೋ, ಬದನೆ, ಕಡ್ಡಿ ಬೀನ್ಸ್, ಎಲೆ ಮತ್ತು ಹೂ ಕೋಸು, ಕುಂಬಳ ಜಾತಿ ತರಕಾರಿಗಳು, ಅಲ್ಲದೇ ಹೂವಿನ ಬೆಳೆಗಳಾದ ಗುಲಾಬಿ, ಸೇವಂತಿಗೆ ಮತ್ತು ಸುಗಂಧರಾಜ ಮತ್ತು ತೋಟದ ಬೆಳೆಗಳಾದ ತೆಂಗು, ಅಡಿಕೆ […]

Continue Reading

*ಸಿಎಸ್ಆರ್ ಅನುದಾನದಲ್ಲಿ ಆಸ್ಪತ್ರೆಗೆ ಶವ ಸಂಗ್ರಹಾಕ ಕೋಲ್ಡ್ ಬಾಕ್ಸ್ ಹಸ್ತಾಂತರ*

ದೊಡ್ಡಬಳ್ಳಾಪುರ ತಾಲ್ಲೂಕಿನ ಸಾರ್ವಜನಿಕ ಆಸ್ಪತ್ರೆಗೆ ಗೋಕುಲ್‌ದಾಸ್ ಎಕ್ಸ್‌ಪೋರ್ಟ್ ಚಾರಿಟಬಲ್ ಫೌಂಡೇಶನ್ ಸಿಎಸ್‌ಆರ್ ಅನುದಾನ ದಲ್ಲಿ ಶವ ಸಂಗ್ರಹಕ ಕೋಲ್ಡ್ ಬಾಕ್ಸ್ (ಡೀಪ್ ಫ್ರೀಜರ್ ಬಾಕ್ಸ್) ಹಸ್ತಾಂತರಿಸಿತು. ಈ ವೇಳೆ ಡಾ.ಮಂಜುನಾಥ್ ಮಾತ ನಾಡಿ, ಗೋಕುಲ್ ದಾಸ್ ಸಂಸ್ಥೆ ನೀಡಿದ ಡೀಪ್ ಕೋಲ್ಡ್ ಬಾಕ್ಸ್ ಸಾಕಷ್ಟು ಅನುಕೂಲಕರವಾಗಿದ್ದು ಅಪಘಾತ, ರೈಲ್ವೆ ಅಪಘಾತಗಳಲ್ಲಿ ಮೃತಪಟ್ಟಿರುವ ಶವಗಳನ್ನು ವಾರಸುದಾರರು ಸಿಕ್ಕಿ ಶವದ ಗುರುತು ಪತ್ತೆಯಾಗುವವರೆಗೂ ಅದನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲು ಸಾಧ್ಯವಿಲ್ಲ, ಆದ್ದರಿಂದ ಶವವನ್ನು ಅಲ್ಲಿಯವರೆಗೂ ಸಂಗ್ರಹಿಸುವುದು ಅಗತ್ಯವಾಗಿದೆ. ಈ ಕೋಲ್ಡ್ […]

Continue Reading

*ಅಂಕಿತ ಬಸಪ್ಪನವರಿಗೆ ಅಭಿನಂದನೆ ಸಲ್ಲಿಸಿದ ನವ ಕರ್ನಾಟಕ ಯುವಶಕ್ತಿ ವೇದಿಕೆ*

SSLC ಪರೀಕ್ಷೆಯಲ್ಲಿ ರಾಜ್ಯಕ್ಕೇ ಪ್ರಥಮ ಸ್ಥಾನ ಪಡೆದ ಬಾಗಲಕೋಟೆಯ ಮುಧೋಳ ಮೂಲದ ವಿದ್ಯಾರ್ಥಿನಿ ಅಂಕಿತಾ ಬಸಪ್ಪ ಅವರನ್ನು ನವ ಕರ್ನಾಟಕ ಯುವ ಶಕ್ತಿ ವೇದಿಕೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.   ಈ ಸಂದರ್ಭದಲ್ಲಿ ಹಳ್ಳಿ ರೈತ ಅಂಬರೀಶ್ ಮಾತನಾಡಿ ರಾಜ್ಯದ ವಿದ್ಯಾರ್ಥಿಗಳಿಗೆ ಅಂಕಿತ ಬಸಪ್ಪನವರು ಮಾದರಿಯಾಗಿದ್ದಾರೆ. ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ ರಾಜ್ಯಕ್ಕೆ ಗೌರವ ತಂದುಕೊಟ್ಟಿರುವ ಅಂಕಿತ ಬಸಪ್ಪನವರು ಮುಂದಿನ ದಿನಗಳಲ್ಲಿ ಉತ್ತಮ ವಿದ್ಯಾಭ್ಯಾಸದೊಂದಿಗೆ ರಾಷ್ಟ್ರಕ್ಕೆ ಕೀರ್ತಿ ತರುವಂತಾಗಲಿ ಎಂದು ಹಾರೈಸಿದರು […]

Continue Reading

*ಇನ್ಸ್ಟಾಗ್ರಾಂ ಪ್ರೀತಿ : ಬ್ರೇಕ್ ಅಪ್ ಕಾರಣ ಸಾವಿಗೆ ಶರಣಾದ ಯುವಕ*

ದೊಡ್ಡಬಳ್ಳಾಪುರ ಮೇ 14 ( ವಿಜಯಮಿತ್ರ ) : ಇನ್ಸ್ಟಾಗ್ರಾಂನಲ್ಲಿ ಪರಿಚಯವಾದ ಯುವತಿಯೊಂದಿಗೆ ಪ್ರೀತಿಯಲ್ಲಿ ಬಿದ್ದ ಯುವಕ , ಯುವತಿ ಕೈ ಕೊಟ್ಟ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ಕೊಡಿಗೇಹಳ್ಳಿಯಲ್ಲಿ ನಡೆದಿದೆ.   ಆತ್ಮಹತ್ಯೆಗೆ ಶರಣಾದ ಯುವಕನನ್ನು ಬಾಲಾಜಿ(22) ಎಂದು ಗುರುತಿಸಲಾಗಿದೆ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಬಾಲಾಜಿಗೆ ಕೆಲ ತಿಂಗಳುಗಳ ಹಿಂದೆ ಇನ್ಸ್ಟಾ ಗ್ರಾಂನಲ್ಲಿ ಕನಕಪುರ ಮೂಲದ ಯುವತಿಯ ಪರಿಚಯವಾಗಿತ್ತು. ಆ ಪರಿಚಯ ಪ್ರೀತಿಗೆ ತಿರುಗಿತ್ತು.   ಮೃತ ಬಾಲಾಜಿ ಇನ್ಸ್ಟಾಗ್ರಾಮ್ ನಲ್ಲಿ ಪರಿಚಯವಾದ […]

Continue Reading

*ದೊಡ್ಡಬಳ್ಳಾಪುರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಭಗೀರಥ ಜಯಂತೋತ್ಸವ ಆಚರಣೆ*

ದೊಡ್ಡಬಳ್ಳಾಪುರ: ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮತ್ತು ತಾಲ್ಲೂಕು ಆಡಳಿತದ ವತಿಯಿಂದ ಭಗೀರಥ ಜಯಂತೋತ್ಸವವನ್ನು ಕಚೇರಿಯ ಆವರಣದಲ್ಲಿ ಸರಳವಾಗಿ ಆಚರಿಸಲಾಯಿತು.       ಕಾರ್ಯಕ್ರಮದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಭಗೀರಥ ಉಪ್ಪಾರ ಸಂಘದ ಜಿಲ್ಲಾಧ್ಯಕ್ಷ ಚಂದ್ರಶೇಖರ್ .ಡಿ.ಉಪ್ಪಾರ್ ಮಾತನಾಡಿ ಭಗೀರಥ ಮಹರ್ಷಿ ತನ್ನ ಕಠಿಣ ತಪಸ್ಸಿನಿಂದ ಗಂಗೆಯನ್ನು ಭುವಿಗೆ ತಂದ ಮಹಾತ್ಮರ ಸಮುದಾಯದಲ್ಲಿ ಜನಿಸಿದ ನಾವೇ ಧನ್ಯರು. ಭೂಮಿಯ ಮೇಲಿನ ಕೋಟ್ಯಾಂತರ ಜೀವರಾಶಿಗಳಿಗೆ ಅತ್ಯಗತ್ಯತೆಯ ಜೀವಜಲ ತಂದುಕೊಟ್ಟಂತಹ ಮಹರ್ಷಿ ಶ್ರೀ ಭಗೀರಥರ ಜಯಂತೋತ್ಸವನ್ನು ರಾಜ್ಯಾದ್ಯಂತ ಆಚರಿಸುವ […]

Continue Reading

*ಸ್ಮಶಾನ ಜಾಗಕ್ಕಾಗಿ ದಲಿತರ ಹೋರಾಟ : ಪೂರ್ವಜರ ನೆನಪು ಉಳಿಸಿಕೊಡಿ ಎಂದ ಗ್ರಾಮಸ್ಥರು*

ದೊಡ್ಡಬಳ್ಳಾಪುರ : ನ್ಯಾಯಾಲಯದಲ್ಲಿ ದಾವೆ ಹೂಡಿದರು ನಮಗೆ ಜಾಗದ ಕಿರಿಕಿರಿ ಮಾತ್ರ ತಪ್ಪಿಲ್ಲ. ನಮ್ಮ ಪೂರ್ವಜರ ನೆನಪುಗಳು ಈ ಸ್ಮಶಾನದಲ್ಲಿದ್ದು ವರ್ಷಕ್ಕೊಮ್ಮೆ ಪೂಜಿಸುವ ಅವಕಾಶವು ಈಗ ಇಲ್ಲದಂತಾಗಿದೆ ದಯಮಾಡಿ ನಮಗೆ ಸ್ಮಶಾನ ಜಾಗವನ್ನು ದೊರಕಿಸಿಕೊಡಿ ಎಂದು ದಲಿತ ಮುಖಂಡರು ಮನವಿ ಮಾಡಿದರು   ತಾಲ್ಲೂಕಿನ ಕಂಟನ ಕುಂಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ವೆ ನಂಬರ್ 40 ರಲ್ಲಿ 0.09 ಗುಂಟೆ ವಿಸ್ತೀರ್ಣದ ಜಾಗದಲ್ಲಿ 50ಕ್ಕೂ ಅಧಿಕ ಪರಿಶಿಷ್ಟ ಜನಾಂಗಕ್ಕೆ ಸೇರಿದ ಸಮಾಧಿಗಳಿದ್ದು . ಸ್ಥಳೀಯ ಪರಿಶಿಷ್ಟ ಕುಟುಂಬಗಳು […]

Continue Reading

*ಕುರುಬ ಸಮುದಾಯದ ಮಕ್ಕಳಿಗೆ ಉತ್ತಮ ಶಿಕ್ಷಣ ಕಲ್ಪಿಸಿ,ನಮ್ಮ ಸಂಸ್ಕೃತಿ ಪರಂಪರೆಗಳನ್ನು ಉಳಿಸಿ – ಶ್ರೀ ಈಶ್ವರಾನಂದಪುರಿ ಸ್ವಾಮೀಜಿ*

ದೊಡ್ಡಬಳ್ಳಾಪುರ ಮೇ12 ( ವಿಜಯಮಿತ್ರ ) : ತಾಲೂಕಿನ ತೂಬಗೆರೆ ಗ್ರಾಮದಲ್ಲಿನ ಕುರುಬ ಸಮುದಾಯದ ಆರಾಧ್ಯದೈವ ಶ್ರೀ ಸಿದ್ಧರಾಮೇಶ್ವರ ಮತ್ತು ಶ್ರೀ ಸಿದ್ದೇಶ್ವರ ಸ್ವಾಮಿಯ ದೊಡ್ಡ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು. ಜಾತ್ರೆಯಲ್ಲಿ ಹೊಸದುರ್ಗ ಕನಕ ಗುರುಪೀಠ ಶಾಖಾ ಮಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿ,ಹಾಲುಮತ ಸಂಸ್ಕೃತಿ ವೈಭವ ಮತ್ತು ಪರಂಪರೆಗಳನುಸಾರ ಕುಲದೈವ ಸಿದ್ದರಾಮೇಶ್ವರ ಸ್ವಾಮಿ ಮತ್ತು ಸಿದ್ದೇಶ್ವರ ಸದ್ಬಕ್ತರಾದ ನಾವುಗಳು ನಮ್ಮ ಇತಿಹಾಸ ಹಿರಿಮೆಗಳಿಗೆ, ದೈವತ್ವದ ಸದಾಚಾರಗಳನ್ನು ಪಸರಿಸುವುದು ಮತ್ತು ಗೌರವಿಸುವುದು […]

Continue Reading

*ಭೂ ಕಬಳಿಕೆ ಆರೋಪ : ಅನಧಿಕೃತ ಕಾಂಪೌಂಡ್ ತೆರವುಗೊಳಿಸುವಂತೆ ಅಗ್ರಹ*

ದೊಡ್ಡಬಳ್ಳಾಪುರ ಮೇ 11 ( ವಿಜಯಮಿತ್ರ ) : ನಮ್ಮ ಬದುಕಿಗೆ ಆಧಾರವಾಗಿದ್ದ ಭೂಮಿಯನ್ನು ಕಸಿದುಕೊಳ್ಳುವ ಹುನ್ನಾರ ನಡೆಯುತ್ತಿದೆ. ಪರಿಶಿಷ್ಟ ಜಾತಿಗೆ ಸೇರಿದ್ದೇವೆ ಎಂಬ ಕಾರಣಕ್ಕೆ ನಮ್ಮ ಮೇಲೆ ದೌರ್ಜನ್ಯ ನಡೆಯುತ್ತಿದೆ.ಎಲ್ಲವೂ ತಿಳಿದಿದ್ದರೂ ಅಧಿಕಾರಿಗಳು ಮೌನವಹಿಸಿರುವುದು ವಿಪರ್ಯಾಸ ಎಂದು ರೈತ ಮುನಿರಾಜು ತಮ್ಮ ನೋವನ್ನು ವ್ಯಕ್ತಪಡಿಸಿದರು ಖಾಸಗಿ ಸರ್ವೆ ಅಧಿಕಾರಿಗಳ ಸಹಾಯದಿಂದ ನಮ್ಮ ಸ್ಥಳ ಸರ್ವೇ ನಂಬರ್ 191 ರಲ್ಲಿ   ಅನಧಿಕೃತ ಕಾಂಪೌಂಡ್ ನಿರ್ಮಾಣ ಮಾಡಲಾಗಿದೆ. ನಮ್ಮ ಸ್ಥಳಕ್ಕೆ ಅತಿಕ್ರಮ ಪ್ರವೇಶ ಮಾಡಿದ್ದು. ನ್ಯಾಯ ಕೇಳಲು ಹೋದ […]

Continue Reading