*ರಾಜ್ಯ ಸರ್ಕಾರದ ನಿರ್ಧಾರ ಕನ್ನಡಿಗರ ಹೆಮ್ಮೆಯನ್ನು ದುಪ್ಪಟ್ಟು ಮಾಡಿದೆ – ಕರವೇ ಜಿಲ್ಲಾಧ್ಯಕ್ಷ ಪುರುಷೋತ್ತಮ್ ಗೌಡ*

ದೊಡ್ಡಬಳ್ಳಾಪುರ (ವಿಜಯಮಿತ್ರ) : ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ’ ಅಭಿಯಾನದಡಿ ಎಲ್ಲಾ ಸರ್ಕಾರಿ ನೌಕರರು ಕೆಂಪು-ಹಳದಿ ಬಣ್ಣದ ಗುರುತಿನ ಚೀಟಿಯ ಕೊರಳುದಾರವನ್ನು (ಟ್ಯಾಗ್) ಹಾಕಿಕೊಳ್ಳುವಂತೆ ಆದೇಶ ಹೊರಡಿಸಿರುವ ರಾಜ್ಯ ಸರ್ಕಾರಕ್ಕೆ ಕರ್ನಾಟಕ ರಕ್ಷಣಾ ವೇದಿಕೆಯ ಬೆಂಗಳೂರು ಗ್ರಾಮಾಂತರ ಘಟಕ ಜಿಲ್ಲಾಧ್ಯಕ್ಷ ಪುರುಷೋತ್ತಮ್ ಗೌಡ ಅಭಿನಂದನೆ ಸಲ್ಲಿಸಿದ್ದಾರೆ   ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳು, ನಿಗಮ, ಮಂಡಳಿ, ನಿರ್ದೇಶನಾಲಯ, ಆಯುಕ್ತಾಲಯ ಇತ್ಯಾದಿ ಸರ್ಕಾರಿ ಮತ್ತು ಸರ್ಕಾರಿ ಸ್ವಾಮ್ಯದ ಕಛೇರಿಗಳಲ್ಲಿ ಕರ್ತವ್ಯ ನಿರ್ವಹಿಸುವ ಎಲ್ಲಾ ಸರ್ಕಾರಿ ನೌಕರರು ಕೆಂಪು-ಹಳದಿ ಬಣ್ಣಗಳನ್ನು […]

Continue Reading

*ಔಷಧಿಗಳನ್ನು ವೈದ್ಯರ ಸಲಹೆ ಚೀಟಿ ಇಲ್ಲದೆ ನೀಡುವಂತಿಲ್ಲ – ಏನ್ ಸಿ ಪಟಾಲಯ್ಯ*

ದೊಡ್ಡಬಳ್ಳಾಪುರ ಆಗಸ್ಟ್ 18(ವಿಜಯಮಿತ್ರ) : ಇತ್ತೀಚಿನ ದಿನಗಳಲ್ಲಿ ಕೆಲ ಔಷಧಿ ಕೇಂದ್ರಗಳಲ್ಲಿ ವೈದ್ಯರ ಸಲಹೆ ಚೀಟಿ ಇಲ್ಲದೆ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದ್ದು. ಯಾವುದೇ ಕಾರಣಕ್ಕೂ ತಾಲೂಕಿನ ಔಷಧಿ ಮಳಿಗೆಗಳ ಮಾಲೀಕರು ವೈದ್ಯರ ಸಲಹೆ ಚೀಟಿ ಇಲ್ಲದೆ ಯಾವುದೇ ಔಷಧಿಗಳನ್ನು ನೀಡಬಾರದೆಂದು ದೊಡ್ಡಬಳ್ಳಾಪುರ ತಾಲೂಕು ಔಷಧಿ ವ್ಯಾಪಾರಿಗಳ ಕ್ಷೇಮಾಭಿವೃದ್ಧಿ ಸಂಘದ ಸಂಸ್ಥಾಪಕ ಅಧ್ಯಕ್ಷ ಏನ್ ಸಿ ಪಟಾಲಯ್ಯ ತಿಳಿಸಿದರು. ನಗರದ ಔಷಧಿ ವ್ಯಾಪಾರಿಗಳ ಕ್ಷೇಮಾಭಿವೃದ್ಧಿ ಸಂಘದ ಕಚೇರಿಯಲ್ಲಿ ಆಯೋಜನೆ ಮಾಡಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಔಷಧಿ […]

Continue Reading

*ದೊಡ್ಡಬಳ್ಳಾಪುರ : ಜಿಲ್ಲೆಗೆ ಸೂಕ್ತ ಸಂಚಾಲಕರನ್ನು ನೇಮಿಸಿ : ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ರಾಜ್ಯ ಸಮಿತಿಗೆ ಮನವಿ*

ದೊಡ್ಡಬಳ್ಳಾಪುರ ಆಗಸ್ಟ್ 18 ( ವಿಜಯಮಿತ್ರ) : ಪ್ರೊಫೆಸರ್ ಬಿ ಕೃಷ್ಣಪ್ಪ ರವರು ಸ್ಥಾಪಿರುವ ಕರ್ನಾಟಕ ದಲಿತ ಸಂಘರ್ಷ ಸಮಿತಿ(47/74/75) ಬೆಂಗಳೂರು ಗ್ರಾಮಾಂತರ ಜಿಲ್ಲೆಯಾದ್ಯಂತ ಅತಿ ವೇಗವಾಗಿ ಬೆಳೆಯುತ್ತಿದ್ದು . ಪ್ರತಿ ತಾಲೂಕಿನಲ್ಲೂ ಸಂಘಟನೆಯ ಬಲವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಜಿಲ್ಲಾ ಸಂಚಾಲಕರು ಕರ್ತವ್ಯ ನಿರ್ವಹಿಸಬೇಕಿದೆ. ಆದರೆ ರಾಜ್ಯ ಸಮಿತಿ ತೀರ್ಮಾನಿಸಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹಂಗಮಿ ಜಿಲ್ಲಾ ಸಂಚಾಲಕರು ತಮ್ಮ ಕರ್ತವ್ಯ ವನ್ನು ಸರಿಯಾಗಿ ನಿರ್ವಹಿಸದ ಕಾರಣ ಸೂಕ್ತ ವ್ಯಕ್ತಿಯನ್ನು ಜಿಲ್ಲಾ ಸಂಚಾಲಕರನ್ನಾಗಿ ಆಯ್ಕೆ ಮಾಡಬೇಕೆಂದು ದೊಡ್ಡಬಳ್ಳಾಪುರ […]

Continue Reading

*ದೊಡ್ಡಬಳ್ಳಾಪುರ : ನಾಗರೆಕೆರೆ ಸೇರುತ್ತಿದ್ದ ಘನತ್ಯಾಜ್ಯಕ್ಕೆ ಬ್ರೇಕ್ : ನಗರಸಭೆ ವತಿಯಿಂದ ಘನತ್ಯಾಜ್ಯ ತಡೆಗೆ ಬಲೆಗಳ ನಿರ್ಮಾಣ*

ದೊಡ್ಡಬಳ್ಳಾಪುರ : ತಾಲ್ಲೂಕಿನ ನಾಗರ ಕೆರೆಗೆ ರಾಜ ಕಾಲುವೆ ಹಾಗೂ ಮೋರಿಗಳ ಮುಖಾಂತರ ನಿರಂತರವಾಗಿ ಹಾಗೂ ಮಳೆ ಬಿದ್ದಾಗ ಬಂದು ಸೇರುತ್ತಿದ್ದ ಪ್ಲಾಸ್ಟಿಕ್ ವಸ್ತುಗಳನ್ನು ಹಾಗೂ ಘನ ತ್ಯಾಜ್ಯಗಳನ್ನು ತಡೆಗಟ್ಟಲು ಘನ ತ್ಯಾಜ್ಯದ ತಡೆಯ ಬಲೆಗಳನ್ನು ನಿರ್ಮಿಸಲಾಗಿದೆ.     ನಗರ ಭಾಗದ ಪ್ಲಾಸ್ಟಿಕ್ ಹಾಗೂ ಘನ ತ್ಯಾಜ್ಯ ವಸ್ತುಗಳು ಕೆರೆಯ ಸೇರಿ ಕೆರೆಯ ಜಲಮೂಲ ಸಂಪೂರ್ಣ ಹಾಳಾಗಿದ್ದು ಈ ಕುರಿತಂತೆ ನಾಗರಕೆರೆ ಜೀವ ವೈವಿಧ್ಯತೆ ಸಂರಕ್ಷಣಾ ಸಮಿತಿಯು ನಿರಂತರವಾಗಿ ಹೋರಾಟ ನಡೆಸುತ್ತಾ ಬಂದಿದೆ. ತಡವಾದರೂ ಕೊನೆಗೆ […]

Continue Reading

*ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ 78ನೇ ಸ್ವಾತಂತ್ರ್ಯ ದಿನದ ಸಂಭ್ರಮಾಚರಣೆ : ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಹಲವು ಸಾಧಕರಿಗೆ ಸನ್ಮಾನ*

ದೊಡ್ಡಬಳ್ಳಾಪುರ : ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ 78ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.   ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಲವು ಸಾಧಕರಿಗೆ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಧೀರಜ್ ಮುನಿರಾಜು, ಉಪ ವಿಬಾಗಾಧಿಕಾರಿ ದುರ್ಗ ಶ್ರೀ, ತಾಲೂಕು ದಂಡಾಧಿಕಾರಿಗಳಾದ ವಿದ್ಯಾ ವಿಭಾ ರಾಥೋಡ್ ಸೇರಿದಂತೆ ಹಲವು ಗಣ್ಯರು ಪ್ರಶಂಸನಾ ಪತ್ರ ನೀಡುವ ಮೂಲಕ ಸನ್ಮಾನಿಸಿ ಗೌರವಿಸಿದರು     ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾದ ಸಿದ್ದಯ್ಯ, ಕೃಷಿ ಕ್ಷೇತ್ರದಿಂದ ಹಳ್ಳಿರೈತ […]

Continue Reading

*ಆಗಸ್ಟ್ 15 ನಮ್ಮ ಪೂರ್ವಜರ ಹೋರಾಟದ ಸಂಕೇತವಾಗಿದೆ – ಚಿಕ್ಕ ಗಂಗಯ್ಯ*

ದೊಡ್ಡಬಳ್ಳಾಪುರ ಆಗಸ್ಟ್ 15( ವಿಜಯಮಿತ್ರ) : ಸ್ವಾತಂತ್ರ್ಯ ದಿನಾಚರಣೆಯ ಕುರಿತು ಮಕ್ಕಳಿಲ್ಲಿ ಅರಿವು ಮೂಡಿಸುವುದು ಅಗತ್ಯವಾಗಿದೆ. ಬಾಲ್ಯದಿಂದಲೇ ಮಕ್ಕಳಲ್ಲಿ ದೇಶಭೀಮಾನ, ದೇಶಪ್ರೇಮ ಬೆಳೆಸುವ ನಿಟ್ಟಿನಲ್ಲಿ ಶಿಕ್ಷಕರು ಕರ್ತವ್ಯ ನಿರ್ವಹಿಸಬೇಕಿದೆ ಎಂದು ಎಸ್ ಡಿ ಎಂ ಸಿ ಅಧ್ಯಕ್ಷ ಶಶಿಕುಮಾರ್  ತಿಳಿಸಿದರು. ತಾಲೂಕಿನ ರಾಜೀವ್ ಗಾಂಧಿ ಬಡಾವಣೆ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಣೆ ಮಾಡಲಾಯಿತು ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಮಾತನಾಡಿದ ಅವರು ಮಕ್ಕಳಿಗೆ ನಮ್ಮ ದೇಶದ ಸಂಸ್ಕೃತಿ, ಸ್ವಾತಂತ್ರ್ಯಕ್ಕಾಗಿ ನಮ್ಮ ಪೂರ್ವಜರು ಪಟ್ಟ […]

Continue Reading

*78ನೇ ಸ್ವತಂತ್ರ ದಿನಾಚರಣೆ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ : ಕೃಷಿ ಕ್ಷೇತ್ರದಲ್ಲಿ ಉತ್ತಮ ಸಾಧನೆ ಗುರುತಿಸಿ ಹಳ್ಳಿ ರೈತ ಅಂಬರೀಶ್ ಗೆ ಪ್ರಶಂಸನಾಪತ್ರ ವಿತರಣೆ*

ದೊಡ್ಡಬಳ್ಳಾಪುರ ಆಗಸ್ಟ್ 15b(ವಿಜಯಮಿತ್ರ) : 78 ನೇ ಭಾರತ ಸ್ವಾತಂತ್ರೋತ್ಸವದ ಅಂಗವಾಗಿ ಕೃಷಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಹಳ್ಳಿರೈತ ಅಂಬರೀಶ್ ರವರಿಗೆ ಪ್ರಶಂಸನಾ ಪತ್ರ ನೀಡಿ ಅಭಿನಂದನಾಪೂರ್ವಕವಾಗಿ ಗೌರವಿಸಲಾಯಿತು.   ತಾಲ್ಲೂಕಿನ ಭಗತ್‌ಸಿಂಗ್ ಕ್ರೀಡಾಂಗಣದಲ್ಲಿ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜನೆ ಮಾಡಲಾಗಿದ್ದ 78 ನೇ ಭಾರತ ಸ್ವಾತಂತ್ರೋತ್ಸವ ಸಮಾರಂಭದಲ್ಲಿ ಹಲವು ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿ ಸಾಧನೆ ಮಾಡಿರುವ ಗಣ್ಯರಿಗೆ ಪ್ರಶಸ್ತಿ ಪಡೆದ ಪ್ರಧಾನ ಮಾಡಲಾಯಿತು ಅಂತೆಯೇ ಕೃಷಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಹಳ್ಳಿರೈತ […]

Continue Reading

*ಅಕ್ರಮ ದಾಖಲೆ ಸೃಷ್ಟಿಸಿ, ಭೂಕಬಳಿಕೆ ಆರೋಪ : ಭೂಮಿ ಉಳಿಸಿಕೊಡುವಂತೆ ಅಧಿಕಾರಿಗಳಲ್ಲಿ ಮನವಿ ಮಾಡಿದ ರೈತ ಕುಟುಂಬ*

ದೊಡ್ಡಬಳ್ಳಾಪುರ : ಕಳೆದ 50 ವರ್ಷಗಳಿಂದ ಅನುಭವದಲ್ಲಿದ್ದು, ಸುಮಾರು 30 ವರ್ಷಗಳ ಹಿಂದೆ ಹಕ್ಕು ಪತ್ರ ಪಡೆದು ಕಿಮ್ಮತ್ತು ಕಟ್ಟಿ ಪಡೆದ ಭೂಮಿಯೊಂದಿಗೆ ಬದುಕು ಕಟ್ಟಿಕೊಂಡಿರುವ ಕುಟುಂಬ ನಮ್ಮದಾಗಿದ್ದು . ಈಗ ಕೆಲ ಪ್ರಭಾವಿಗಳು ನಮ್ಮ ಜಮೀನಿಗೆ ಸಂಬಂಧಿಸಿದಂತೆ ಅಕ್ರಮ ದಾಖಲೆಗಳು ಸೃಷ್ಟಿಸಿ ನಮ್ಮ ಭೂಮಿಯನ್ನು ಕಸಿದುಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಗಾಯತ್ರಿಮ್ಮ ತಿಳಿಸಿದರು.   ಜಮೀನಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ತಡೆಯಾಜ್ಞೆ ಇದ್ದರೂ ಕೆಲ ಪ್ರಭಾವಿಗಳು, ದಲ್ಲಾಳಿಗಳು ನಮ್ಮನ್ನು ಒಕ್ಕಲೆಬ್ಬಿಸಲು ಹಾಗೂ ಅಕ್ರಮವಾಗಿ ನಮ್ಮ ಭೂಮಿಯನ್ನು ಸ್ವಾದೀನ […]

Continue Reading

*1600ನೇ ದಿನಕ್ಕೆ ಕಾಲಿಟ್ಟ ನಿರಂತರ ಅನ್ನದಾಸೋಹ ಕಾರ್ಯಕ್ರಮ : ಕಾರ್ಯಕ್ರಮದ ದಾನಿಗಳಾಗಿ ಶಾಲಾ ಮಕ್ಕಳೊಂದಿಗೆ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡ ಕಿರಣ್*

ದೊಡ್ಡಬಳ್ಳಾಪುರ (ವಿಜಯಮಿತ್ರ) :ತಾಲೂಕಿನ ಬಾಶೆಟ್ಟಿಹಳ್ಳಿ ಅಂಬೇಡ್ಕರ್ ನಗರದ ನಿವಾಸಿ ಕಿರಣ್ ಕುಮಾರ್ ಅವರು ತಮ್ಮ 24ನೇ ಹುಟ್ಟು ಹಬ್ಬವನ್ನು ನಿರಂತರ ಹಣದ ಸಹ ಸಮಿತಿಯೊಂದಿಗೆ ಆಚರಿಸಿಕೊಂಡರು. ಶಾಲಾ ಮಕ್ಕಳಿಗೆ ಅಗತ್ಯ ಪರಿಕರಗಳ ವಿತರಣೆ ಮಾಡುವ ಮೂಲಕ ಹಾಗೂ ಹಸಿದವರಿಗೆ ಆಹಾರ ವಿತರಣೆ ಮಾಡುವ ಮೂಲಕ ತಮ್ಮ ಈ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡರು. ಕಾರ್ಯಕ್ರಮದಲ್ಲಿ ದಾನಿಗಳಾದ ಸುನಿಲ್ ಮಾತನಾಡಿ ಹಲವಾರು ದಿನಗಳಿಂದ ಮಲ್ಲೇಶ್ ಅವರು ಮಾಡುತ್ತಿರುವ ಅನ್ನದಾಸೋಹದ ಬಗ್ಗೆ ತಿಳಿದಿದ್ದು. ಇಂದು ನನ್ನ ಆತ್ಮೀಯ ಗೆಳೆಯ ಕಿರಣ್ ರವರ […]

Continue Reading

*78ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಪುರುಷರ ಹೊನಲು ಬೆಳಕಿನ ಮ್ಯಾಟ್ ಕಬ್ಬಡ್ಡಿ ಪಂದ್ಯಾವಳಿ*

ದೊಡ್ಡಬಳ್ಳಾಪುರ: 78ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಪುರುಷರ ಹೊನಲು ಬೆಳಕಿನ ಮ್ಯಾಟ್ ಕಬ್ಬಡಿ ಪಂದ್ಯಾವಳಿಗಳನ್ನು ತಾಲೂಕಿನ ಮುತ್ತೂರು ಗ್ರಾಮದಲ್ಲಿ ಆಯೋಜನೆ ಮಾಡಲಾಗಿದೆ.   ಬಿಎಸ್ಎಲ್ ಕಬ್ಬಡಿ ಕ್ಲಬ್ ಮುತ್ತೂರು ಗ್ರಾಮಸ್ಥರ ವತಿಯಿಂದ ಆಗಸ್ಟ್ 14 ಮತ್ತು 15ರಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ. ಎಸ್ ಹರೀಶ್ ಗೌಡ ರವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮವನ್ನು ರೂಪಿಸಲಾಗಿದೆ ಎಂದು ಬಿಎಸ್ಎಲ್ ಕಬಡ್ಡಿ ಕ್ಲಬ್ ತಿಳಿಸಿದೆ.   ಸ್ವಾತಂತ್ರ್ಯ ದಿನಾಚರಣೆಯು ಸಂಭ್ರಮಾಚರಣೆಯ ದಿನವಾಗಿದ್ದು. ಯುವಕರಲ್ಲಿ ಕ್ರೀಡೋತ್ಸಾಹ ಹೆಚ್ಚಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ […]

Continue Reading