*ಭಾರತ ಸೇವಾದಳದ ನೂತನ ತಾಲೂಕು ಅಧ್ಯಕ್ಷರಾಗಿ ಆರ್ ವಿ ಮಹೇಶ್ ಆಯ್ಕೆ : ಅಭಿನಂದನೆ ಸಲ್ಲಿಸಿದ ಶಿಕ್ಷಕರ ತಂಡ*

ದೊಡ್ಡಬಳ್ಳಾಪುರ : ಭಾರತ ಸೇವಾದಳದ ನೂತನ ತಾಲೂಕು ಘಟಕ ಅಧ್ಯಕ್ಷರಾದ ಆರ್.ವಿ.ಮಹೇಶ್ ಕುಮಾರ್ ರವರನ್ನು ತಾಲೂಕು ಶಿಕ್ಷಕರ ತಂಡ ಸನ್ಮಾನಿಸಿ ಗೌರವಿಸಿದ್ದರು.   ಭಾರತ ಸೇವಾದಳದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿ ಸಾಮಾಜಿಕ ಹೋರಾಟಗಾರ ಆರ್ ವಿ ಮಹೇಶ್ ರನ್ನು ಭಾರತ ಸೇವಾದಳದ ತಾಲೂಕು ಸಮಿತಿಯ ಅಧ್ಯಕ್ಷರನ್ನಾಗಿ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ತಾಲೂಕಿನ ಶಿಕ್ಷಕರ ತಂಡ ಅವರಿಗೆ ಪುಷ್ಪ ಮಾಲೆ ಹಾಕುವ ಮೂಲಕ ಅಭಿನಂದನೆ ಸಲ್ಲಿಸಿದರು.   ಈ ಸಂದರ್ಭದಲ್ಲಿ ಭಾರತ ಸೇವಾದಳದ ನೂತನ ತಾಲ್ಲೂಕು ಅಧ್ಯಕ್ಷ […]

Continue Reading

*ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಪ್ಲಾಸ್ಟಿಕ್ ಧ್ವಜ ಮಾರಾಟ ಹಾಗೂ ಬಳಕೆ ನಿಷೇಧ*

ಬೆಂಗಳೂರು ಗ್ರಾಮಾಂತರ ಜಿಲ್ಲೆ, ಆಗಸ್ಟ್‌. 12, 2024 (ವಿಜಯಮಿತ್ರ):- ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನಾಚರಣೆಯನ್ನು ಸಡಗರ, ಸಂಭ್ರಮದಿಂದ ಆಚರಿಸಲು ಸಿದ್ಧತೆ ಕೈಗೊಳ್ಳಲಾಗಿದ್ದು ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಪ್ಲಾಸ್ಟಿಕ್ ಧ್ವಜ ಮಾರಾಟ ಹಾಗೂ ಬಳಕೆ ನಿಷೇಧಿಸಲಾಗಿದೆ.   ರಾಜ್ಯಾದ್ಯಂತ ಪ್ಲಾಸ್ಟಿಕ್ ಬಾವುಟ ಸೇರಿದಂತೆ ಕೆಲವು ಪ್ಲಾಸ್ಟಿಕ್ ಪದಾರ್ಥಗಳ ಬಳಕೆಯನ್ನು ನಿಷೇಧಿಸಲಾಗಿದ್ದು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಭಾರತ ಸರ್ಕಾರವು ಸಹ ಏಕ ಬಳಕೆಯ ಪ್ಲಾಸ್ಟಿಕ್‌ನಿಂದ ತಯಾರಿಸಿದ ಪ್ಲಾಸ್ಟಿಕ್ ಧ್ವಜಗಳ (SUP) ತಯಾರಿಕೆ, ಆಮದು, ಸಂಗ್ರಹಣೆ, […]

Continue Reading

*ಹೊಸಕೋಟೆಯಲ್ಲಿ ಅನಿರೀಕ್ಷಿತ ದಾಳಿ: ಒಬ್ಬ ಕಿಶೋರ ಕಾರ್ಮಿಕರ ರಕ್ಷಣೆ*

ಬೆಂಗಳೂರು ಗ್ರಾಮಾಂತರ ಜಿಲ್ಲೆ, ಆಗಸ್ಟ್. 12, (ವಿಜಯಮಿತ್ರ):- ಜಿಲ್ಲಾ ಬಾಲಕಾರ್ಮಿಕ ಯೋಜನೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಕ್ಕಳ ಸಹಾಯವಾಣಿ-1098 ಹಾಗೂ ಶಿಕ್ಷಣ ಇಲಾಖೆ ಇವರ ಜಂಟಿಯಾಗಿ ಹೊಸಕೋಟೆ ಟೌನ್ ಹಾಗೂ ದೊಡ್ಡದುನ್ನಸಂದ್ರದಲ್ಲಿ ವಿವಿಧ ಸ್ಥಳಗಳಲ್ಲಿ ಸೋಮವಾರದಂದು ಬಾಲ ಕಾರ್ಮಿಕರ ಹಾಗೂ ಕಿಶೋರ ಕಾರ್ಮಿಕರ ಅನಿರೀಕ್ಷಿತ ತಪಾಸಣೆ ಹಾಗೂ ದಾಳಿಯನ್ನು ನಡೆಸಿದರು.   ಈ ತಪಾಸಣೆ ವೇಳೆಯಲ್ಲಿ ಒಬ್ಬ ಕಿಶೋರ ಕಾರ್ಮಿಕರನ್ನು ರಕ್ಷಿಸಲಾಗಿದ್ದು, ಬಳಿಕ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಮುಂದಿನ ಕ್ರಮಕ್ಕಾಗಿ ಹಾಜರು ಪಡಿಸಿದರು. […]

Continue Reading

*ದೊಡ್ಡಬಳ್ಳಾಪುರ ಹಿಂದೂ ಹಿತರಕ್ಷಣಾ ವೇದಿಕೆ ಸುದ್ದಿಗೋಷ್ಠಿ : ಬಾಂಗ್ಲಾದೇಶದಲ್ಲಿರುವ ಹಿಂದೂಗಳ ಸಂರಕ್ಷಣೆಗೆ ಭಾರತ ಸರ್ಕಾರ ಮಧ್ಯ ಪ್ರವೇಶಿಸುವಂತೆ ಆಗ್ರಹ*

ದೊಡ್ಡಬಳ್ಳಾಪುರ :ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ಹಿಂಸಾತ್ಮಕ ಅಕ್ರಮಣವನ್ನು ನಿಲ್ಲಿಸಿ, ಹಿಂದೂಗಳಿಗೆ ರಕ್ಷಣೆ ನೀಡಿ ಹಾಗೂ ಸಂತ್ರಸ್ಥರ ನೆರವಿಗೆ ವಿಶ್ವಸಂಸ್ಥೆ ಧಾವಿಸಲಿ ಎಂದು ಹಿಂದೂ ಹಿತ ರಕ್ಷಣಾ ಸಮಿತಿಯ ಮುಖಂಡ ಕೆ ಎಂ ಹನುಮಂತರಾಯಪ್ಪ ಒತ್ತಾಯಿಸಿದರು. ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ಆಕ್ರಮಣವನ್ನು ತಡೆಯುವ ನಿಟ್ಟಿನಲ್ಲಿ ವಿಶ್ವಸಂಸ್ಥೆ ಮುಂದಾಗ ಬೇಕಿದೆ. ಹಾಗೂ ಭಾರತ ದೇಶದ ರಾಷ್ಟ್ರಪತಿಗಳು ಹಾಗೂ ಪ್ರಧಾನ ಮಂತ್ರಿಗಳು ಬಾಂಗ್ಲಾದೇಶದ ಹಿಂದುಗಳ ನೆರವಿಗೆ ನಿಲ್ಲಬೇಕಿದೆ ಎಂದರು. […]

Continue Reading

*ದೊಡ್ಡಬಳ್ಳಾಪುರದಲ್ಲಿ ನಾದ ಧ್ಯಾನ ಯಜ್ಞ 3 : ಇದೇ ಆಗಸ್ಟ್ 15ರಂದು ಶ್ರೀ ನಾರಾಯಣ ಪಿರಮಿಡ್ ಧ್ಯಾನ ಮಂದಿರಕ್ಕೆ ಚಾಲನೆ*

ದೊಡ್ಡಬಳ್ಳಾಪುರ: ತಾಲ್ಲೂಕಿನ ಜನತೆಯ ಮಾನಸಿಕ ಹಾಗೂ ದೈಹಿಕ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಆಗಸ್ಟ್ 15 ರಂದು ಬ್ರಹ್ಮಶ್ರೀ ಪತ್ರೀಜಿ ರವರ ಮಾರ್ಗದರ್ಶನದೊಂದಿಗೆ ದೊಡ್ಡಬಳ್ಳಾಪುರ ನಾದ ಧ್ಯಾನ ಯಜ್ಞ 3ರ ಅಡಿಯಲ್ಲಿ ಶ್ರೀ ನಾರಾಯಣ ಪಿರಮಿಡ್ ಧ್ಯಾನ ಮಂದಿರದ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ ಎಂದು ಶ್ರೀ ನಾರಾಯಣ ಪಿರಮಿಡ್ ಧ್ಯಾನ ಮಂದಿರದ ಮುಖ್ಯಸ್ಥ ಬಿ.ಎನ್. ಅಶ್ವಥ್ ನಾರಾಯಣ ತಿಳಿಸಿದರು. ನಗರದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರಸ್ತುತ ಸಮಾಜದಲ್ಲಿ ಸಾಮಾನ್ಯ ಜನತೆ ಹಲವಾರು ತೊಂದರೆಗಳಿಂದ ಬಳಲುತ್ತಿದ್ದು ಸರ್ವ […]

Continue Reading

*ಕೆರೆ ಕುಂಟೆ ಸೇರುತ್ತಿರುವ ಕಲುಷಿತ ನೀರು : ಮಳೆ ನೀರಿನ ಜೊತೆ ತಾಜ್ಯ ನೀರು ಹರಿಬಿಟ್ಟ ಕಾರ್ಖಾನೆ*

ದೊಡ್ಡಬಳ್ಳಾಪುರ : ತಾಲ್ಲೂಕಿನ ಕೆರೆಕುಂಟೆಗಳು ಈಗಾಗಲೇ ನಶಿಸಿಹೋಗಿವೆ , ಕಾರ್ಖಾನೆಗಳು ಹೊರಸೂಸುವ ತ್ಯಾಜ್ಯ ನೀರು ಸ್ಥಳೀಯ ಜಲ ಮೂಲಗಳನ್ನು ಸೇರಿ ಅಂತರ್ಜಾಲ ಸಂಪೂರ್ಣ ಹಾಳಾಗುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ ನಗರಕ್ಕೆ ಕೂಗಳತೆ ದೂರದಲ್ಲಿರುವ ಬಾಂಬೆ ರಯಾನ್ ಫ್ಯಾಷನ್ (ಬಟನ್ ತಯಾರಿಕ ಘಟಕ )ಕಾರ್ಖಾನೆಯಿಂದ ಮಳೆ ಬಂದ ಸಮಯದಲ್ಲಿ ತಮ್ಮ ಕಾರ್ಖಾನೆಯಲ್ಲಿ ಇರುವ ವಾಷಿಂಗ್ ಮಾಡಲಾದ ತ್ಯಾಜ್ಯದ ನೀರು ಕಾರ್ಖಾನೆ ಪಕ್ಕದಲ್ಲಿ ಇರುವ ಕಾಲುವೆಗೆ ಹರಿಸಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ಕಾಲುವೆಯ ನೀರು ( ಕಲುಷಿತ ನೀರು […]

Continue Reading

*ದಲಿತರ ಜಮೀನಿಗೆ ಅತಿಕ್ರಮ ಪ್ರವೇಶ ಆರೋಪ : ರಕ್ಷಣೆ ನೀಡುವಂತೆ ಕೋರಿ ಡಿವೈಎಸ್ಪಿ ಕಚೇರಿ ಮುಂದೆ ಧರಣಿ ಕುಳಿತ ರೈತ ಕುಟುಂಬ*

ದೊಡ್ಡಬಳ್ಳಾಪುರ : ತಾಲ್ಲೂಕಿನ ನಂದಿಬೆಟ್ಟದ ತಪ್ಪಲಿನ ದಲಿತ ಮಹಿಳೆ‌ ಮುನಿನಾರಾಯಣಮ್ಮ ಅವರಿಗೆ ಸೇರಿದ 5ಎಕ್ಕರೆ 3ಗುಂಟೆ ಜಾಗವನ್ನು ಪ್ರಭಾವಿಗಳು ಅಕ್ರಮವಾಗಿ ವಶಪಡಿಸಿಕೊಳ್ಳಲು ಯತ್ನಿಸುತ್ತಿದ್ದು , ಸದರಿ ಜಾಗಕ್ಕೆ ಅತಿಕ್ರಮ ಪ್ರವೇಶ ಮಾಡಿದ್ದಾರೆ ಎಂದು ಆರೋಪಿಸಿ ನ್ಯಾಯ ಕೊಡಿಸುವಂತೆ ಒತ್ತಾಯಿಸಿ ದಲಿತ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ನಗರದ ಡಿವೈಎಸ್ಪಿ ಕಚೇರಿ ಎದುರು ಧರಣಿ ಸತ್ಯಾಗ್ರಹ ಮಾಡಲಾಯಿತು. ನಗರದ ಡಾ.ಬಿಆರ್.ಅಂಬೇಡ್ಕರ್ ವೃತ್ತ(ಪ್ರವಾಸಿ ಮಂದಿರ)ದಿಂದ ಮೆರವಣಿಗೆ ಮೂಲಕ ತೆರಳಿದ ಪ್ರತಿಭಟನಾಕಾರರು ಸ್ಥಳಕ್ಕೆ ಡಿವೈಎಸ್ಪಿ ಬರುವವರೆಗೂ ಧರಣಿ ಮುಂದುವರಿಸುವುದಾಗಿ ಪಟ್ಟುಹಿಡಿದರು.     […]

Continue Reading

*ಕರ್ನಾಟಕ ಸುವರ್ಣ ಸಂಭ್ರಮ : ಕನ್ನಡ ಜ್ಯೋತಿ ರಥಕ್ಕೆ ತಾಲ್ಲೂಕಿನಲ್ಲಿ ಅದ್ದೂರಿ ಸ್ವಾಗತ*

ದೊಡ್ಡಬಳ್ಳಾಪುರ ಆಗಸ್ಟ್ 07 ( ವಿಜಯ ಮಿತ್ರ ) : ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಮರುನಾಮಕರಣವಾಗಿ 50 ವರ್ಷ ಪೂರ್ಣಗೊಂಡಿದೆ.   “ಹೆಸರಾಯಿತು  ಕರ್ನಾಟಕ ಉಸಿರಾಗಲಿ ಕನ್ನಡ” ಎಂಬ ಧ್ಯೇಯವಾಕ್ಯದ ಅಡಿಯಲ್ಲಿ ರಾಜ್ಯದ ಎಲ್ಲೆಡೆ ಕರ್ನಾಟಕ ಸುವರ್ಣ ಸಂಭ್ರಮದ ಆಚರಣೆ ನಡೆಯುತ್ತಿದೆ ಎಂದು ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪಿ.ಗೋವಿಂದರಾಜು ತಿಳಿಸಿದರು. ಅವರು  ದೊಡ್ಡಬಳ್ಳಾಪುರ ತಾಲ್ಲೂಕಿಗೆ  ಆಗಮಿಸಿದ ಕರ್ನಾಟಕ ಸಂಭ್ರಮ 50 ರ  ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ  ಅಭಿಯಾನದ   ಕನ್ನಡ ಜ್ಯೋತಿ ರಥದ […]

Continue Reading

*ಕರ್ನಾಟಕ ಭೀಮ್ ಸೇನೆ ಪ್ರತಿಭಟನೆ : ಗ್ರಾಮಗಳ ಸಮಸ್ಯೆಬಗೆಹರಿಸಿ,ದಲಿತರ ಮೇಲಿನ ದೌರ್ಜನ್ಯ ನಿಲ್ಲಿಸಿ – ಶಂಕರ್ ರಾಮಲಿಂಗಯ್ಯ*

ಬೆಂಗಳೂರು ಗ್ರಾಮಾಂತರ ಜಿಲ್ಲೆ, ಆಗಸ್ಟ್ 07 (ವಿಜಯ ಮಿತ್ರ): ಜಿಲ್ಲೆ ಹಾಗೂ ತಾಲ್ಲೂಕಿನ ಹಲವು ಸಮಸ್ಯೆಗಳನ್ನು ಬಗೆಹರಿಸುವಂತೆ ಅಗ್ರಹಿಸಿ ಕರ್ನಾಟಕ ಭೀಮ್ ಸೇನೆ ವತಿಯಿಂದ ಜಿಲ್ಲಾಧಿಕಾರಿಗಳ ಕಛೇರಿ ಮುಂಭಾಗ ಪ್ರತಿಭಟನೆ ನೆಡೆಸಲಾಯಿತು.   ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಶಂಕರ್ ರಾಮಲಿಂಗಯ್ಯ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಜೈ ಭೀಮ್ ಮಂಜುನಾಥ್ ನೇತೃತ್ವದಲ್ಲಿ ನಡೆದ ಜಿಲ್ಲಾಪ್ರತಿಭಟನೆಯಲ್ಲಿ ತಾಲೂಕಿನ ಹಲವು ಸಮಸ್ಯೆಗಳನ್ನು ಒಳಗೊಂಡಂತೆ ಹಾಡೋನಹಳ್ಳಿ ಗ್ರಾಮ ಪಂಚಾಯಿತಿಯ ಐಯ್ಯಮ್ಮನಹಳ್ಳಿ,ದುರ್ಗೇನಹಳ್ಳಿಯಲ್ಲಿ ಮತ್ತು ನೆಲ್ಲುಗುದಿಗೆ ಗ್ರಾಮಗಳ ಸಮಸ್ಯೆಗಳನ್ನು ಕೂಡಲೇ ಬಗೆಹರಿಸುವಂತೆ ಒತ್ತಾಯಿಸಲಾಯಿತು.   […]

Continue Reading

*ಪ್ರೊ.ಬಿ. ಕೃಷ್ಣಪ್ಪರವರು ಸ್ಥಾಪಿಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿಗೆ 50ರ ಸಂಭ್ರಮೋತ್ಸವ : ಕಾರ್ಯಕ್ರಮದಲ್ಲಿ 10000ಕ್ಕೂ ಅಧಿಕ ಮಂದಿ ಭಾಗಿಯಾಗುವ ಸಾಧ್ಯತೆ*

ದೊಡ್ಡಬಳ್ಳಾಪುರ ಆಗಸ್ಟ್ 07 ( ವಿಜಯಮಿತ್ರ) : ಬೆಂಗಳೂರಿನ ವಸಂತ ನಗರದ ಮಿಲ್ಲರ್ಸ್ ರಸ್ತೆಯ ಡಾ.ಅಂಬೇಡ್ಕರ್‌ಭವನದಲ್ಲಿ ನೆಡೆಯಲಿರುವ ಕರ್ನಾಟಕದ ದಲಿತ ಚಳವಳಿಯ 50 ವರ್ಷದ ಸಂಭ್ರಮೋತ್ಸವಕ್ಕೆ ಯುವ ದಲಿತ ಮುಖಂಡ ರಾಮಾಮೂರ್ತಿ (ರಾಮು)ನೇರಳಘಟ್ಟ ನೇತೃತ್ವದಲ್ಲಿ ನೂರಾರು ದಲಿತ ಮುಖಂಡರು ತಾಲ್ಲೂಕಿನಿಂದ ಕಾರ್ಯಕ್ರಮಕ್ಕೆ ತೆರಳಿದರು.   ಈ ಸಂದರ್ಭದಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕು ಶಾಖೆ ಸಂಚಾಲಕ ರಾಮಾಮೂರ್ತಿ (ರಾಮು)ನೇರಳಘಟ್ಟ ಮಾತನಾಡಿ ಪ್ರೊಫೆಸರ್ ಬಿ ಕೃಷ್ಣಪ್ಪರವರು ಸ್ಥಾಪಿಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ(ರಿ. ಸಂಖ್ಯೆ. 47/74-75) ಯ ಚಳವಳಿಗೆ 50 ವರ್ಷಗಳು […]

Continue Reading