ಏಳ್ಳುಪುರ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಕನಕದಾಸ ಜಯಂತಿ ಸಂಭ್ರಮ

ದೊಡ್ಡಬಳ್ಳಾಪುರ: ಕನಕದಾಸರು  ತಮ್ಮ ಕೀರ್ತನೆಗಳ  ಮೂಲಕ ಜನರಲ್ಲಿ ಅರಿವು ಮೂಡಿಸುವ ಕಾರ್ಯ ಮಾಡಿದರು . ಹಲವು ಕೀರ್ತನೆಗಳ ಮೂಲಕ ಸಮಾಜದಲ್ಲಿನ  ಜಾತಿ ವ್ಯವಸ್ಥೆಯ ನ್ಯೂನತೆಯನ್ನು  ಹೋಗಲಾಡಿಸಲು ಶ್ರಮಿಸಿದ್ದರು.   ಕನಕದಾಸರು ಸಾಹಿತ್ಯಕ್ಕೆ ನೀಡಿದ ಕೊಡುಗೆ ಅಪಾರ, ಸಮಾಜದ ಪರಿವರ್ತನೆ ಕನಕದಾಸರ ಸಾಹಿತ್ಯ ಸಹಕಾರಿಯಾಗಿದೆ ಎಂದು ಮುಖಂಡರಾದ ಮಹೇಶ್ ತಿಳಿಸಿದರು.   ತಾಲ್ಲೂಕಿನ ಬಾಶೆಟ್ಟಹಳ್ಳಿ ಪಟ್ಟಣ ಪಂಚಾಯತಿ ವ್ಯಾಪ್ತಿಯ ಏಳ್ಳುಪುರ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ನೆಡೆದ ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ದಾಸ ಶ್ರೇಷ್ಠ ಕನಕದಾಸರ ಕೀರ್ತನೆಗಳನ್ನು […]

Continue Reading

ಕನಕದಾಸರು ಸಾಹಿತ್ಯಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ – ಜಿ.ಎಂ.ನಾಗರಾಜು

ದೊಡ್ಡಬಳ್ಳಾಪುರ : ಕನಕದಾಸರು ತಮ್ಮ ಕೀರ್ತನೆಗಳು ಮತ್ತು ಕಾವ್ಯಗಳ ಮೂಲಕ ಜೀವನಪರ ಸಂದೇಶ, ನಿತ್ಯ ಬದುಕಿನಲ್ಲಿ  ಅಳವಡಿಸಿಕೊಳ್ಳುವ ಉಪದೇಶಗಳನ್ನು ನೀಡಿದ್ದಾರೆ  ಎಂದು ಕನ್ನಡ ಸಾಹಿತ್ಯ ಪರಿಷತ್ತು  ಸಾಸಲು ಹೋಬಳಿ ಘಟಕದ ಅಧ್ಯಕ್ಷ ಜಿ.ಎಂ.ನಾಗರಾಜು ತಿಳಿಸಿದರು.     ಅವರು ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಡಾ.ರಾಜ್ ಕುಮಾರ್ ಕಲಾಮಂದಿರದಲ್ಲಿ ನಡೆದ  ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.  . ಕನಕದಾಸರು ಮೂಲತಃ ಬಾಡ ಪ್ರಾಂತ್ಯದ  ದಂಡನಾಯಕರಾಗಿದ್ದರು. ಯುದ್ಧವೊಂದರಲ್ಲಿ ಸೋತ ಅವರಿಗೆ ವೈರಾಗ್ಯ ಉಂಟಾಗಿ ಹರಿಭಕ್ತರಾಗಿದರು.  […]

Continue Reading

ನಮ್ಮ ಭೂಮಿ ನಮ್ಮ ಹಕ್ಕು” ಎಂಬ ಹೋರಾಟಕ್ಕೆ ಮುಂದಾದ ಕರ್ನಾಟಕ ಭೂ ಹಕ್ಕುದಾರರ ವೇದಿಕೆ : ಬಡ ರೈತರನ್ನು ಉಳಿಸುವಂತೆ ಅಗ್ರಹ

ದೊಡ್ಡಬಳ್ಳಾಪುರ : ಬಗ‌ರ್ ಹುಕ್ಕುಂ ಸಾಗುವಳಿ ಸಮಿತಿ ರಚನೆಯಾಗಿದ್ದು, ಕಂದಾಯ ಸಚಿವರು, ನಮ್ಮ ಪರವಾಗಿ ಇದ್ದರು, ಸಾಗುವಳಿ ಸಮಿತಿಯು ನಿಗದಿತ ಸಮಯಕ್ಕೆ ಸಭೆಯನ್ನು ನಡೆಸದೆ ಮಾನ್ಯ ಶಾಸಕರು ಮತ್ತು ಅಧಿಕಾರಿಗಳು ಸಮಯವನ್ನು ಕಾಲಹರಣ ಮಾಡುತ್ತಿದ್ದಾರೆ ಎಂದು ಕರ್ನಾಟಕ ಭೂ ಹಕ್ಕುದಾರರ ವೇದಿಕೆಯ ಜಿಲ್ಲಾ ಸಂಚಾಲಕರಾದ ನಾಗರತ್ನ ಆರೋಪಿಸಿದರು.     ನಗರದ ಪ್ರವಾಸಿಮಂದಿರದಲ್ಲಿ ಕರ್ನಾಟಕ ಭೂ ಹಕ್ಕುದಾರರ ವೇದಿಕೆ ವತಿಯಿಂದ ನೆಡೆದ ಸುದ್ದಿ ಗೋಷ್ಠಿಯಲ್ಲಿ ಅವರು ಮಾತನಾಡಿದರು ನಾವುಗಳು ನಮ್ಮ ಪೂರ್ವಿಕರ ಕಾಲದಿಂದಲೂ ಸರ್ಕಾರಿ ಭೂಮಿಯಲ್ಲಿ ಸಾಗುವಳಿ […]

Continue Reading

ಹಳೆಯ ದ್ವೇಷ ಹಿನ್ನಲೆ ಪತ್ರಕರ್ತನ ಮೇಲೆ ಹಲ್ಲೆ : ಗ್ರಾಮಾಂತರ ಠಾಣೆಯಲ್ಲಿ ದೂರು

ದೊಡ್ಡಬಳ್ಳಾಪುರ : ಹಳೇ ದ್ವೇಷದ ಹಿನ್ನಲೆ ಪತ್ರಕರ್ತನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದು, ಹಲ್ಲೆಗೊಳಗಾದ ಪತ್ರಕರ್ತ ದೊಡ್ಡಬಳ್ಳಾಪುರ ಸಾರ್ವಜನಿಕರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.   ದೊಡ್ಡಬಳ್ಳಾಪುರ ತಾಲೂಕು ತೂಬಗೆರೆಯ ರಥದಬೀದಿಯಲ್ಲಿ ನಿನ್ನೆ ರಾತ್ರಿ ಘಟನೆ ನಡೆದಿದ್ದು, ಘಟನೆಯಲ್ಲಿ ಪತ್ರಕರ್ತರಾದ ಶಿವಕುಮಾರ್ ಸ್ವಾಮಿ ಎಂಬುವರು ಹಲ್ಲೆಗೆ ತುತ್ತಾಗಿದ್ದಾರೆ, ನಿನ್ನೆ ರಾತ್ರಿ 8:30 ಸಮಯದಲ್ಲಿ ಶಿವಕುಮಾರ್ ಸ್ವಾಮಿ ಮನೆಯ ಬಳಿ ಇದ್ದಾಗ, ಏಕಾಏಕಿ ಬಂದ ಲೋಕೇಶ್ ಎಂಬ ವ್ಯಕ್ತಿ ಅವಾಚ್ಯ ಶಬ್ದಗಳಿಂದ […]

Continue Reading

ಇದು ಕ್ರೀಡೆಯೊಂದಿಗೆ ಕನ್ನಡ ಭಾಷಾಭಿಮಾನ ಬೆಳೆಸುವ ಕಾರ್ಯಕ್ರಮವಾಗಿದೆ – ತ ನಾ ಪ್ರಭುದೇವ್

ದೊಡ್ಡಬಳ್ಳಾಪುರ (  ವಿಜಯ ಮಿತ್ರ ): ಯುವ ಜನತೆಯಲ್ಲಿ ಕನ್ನಡ ಭಾಷೆಯ ಬಗ್ಗೆ ಅಭಿಮಾನಮೂಡಿಸುವುದೇ ಈ ಕಾರ್ಯಕ್ರದ ಮುಖ್ಯ ಉದ್ದೇಶ ಓಟದ ಮೂಲಕ ಕನ್ನಡ ರಾಜ್ಯೋತ್ಸವ ಆಚರಣೆ ವಿಶೇಷ ಈ ನಮ್ಮ ಕಾರ್ಯಕ್ರಮಕ್ಕೆ ತಾಲ್ಲೂಕಿನ ಡಿ ಟಿ ಎ ಎ ಸಹಯೋಗ ದೊರೆತಿದ್ದು ಮ್ಯಾರಥೋನ್ ಕಾರ್ಯಕ್ರಮವನ್ನು ಉತ್ತಮ ರೀತಿಯಲ್ಲಿ ರೂಪಿಸಲಾಗಿದೆ ಎಂದು ಕನ್ನಡ ಪರ ಹೋರಾಟಗಾರರು ಹಾಗೂ ನಗರಸಭಾ ಸದಸ್ಯ ತ ನಾ ಪ್ರಭುದೇವ್ ತಿಳಿಸಿದರು.     69ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಶ್ರೀ ಭುವನೇಶ್ವರಿ […]

Continue Reading

ಸಂಘಟನೆಯನ್ನು ಬಲಪಡಿಸುವ ಮೂಲಕ ದಲಿತರ ಧ್ವನಿಯಾಗಿ ಹೋರಾಟ ನಡೆಸಲಿದ್ದೇವೆ – ನಾಗಮಂಗಲ ವೆಂಕಟೇಶ್

ದೊಡ್ಡಬಳ್ಳಾಪುರ  ( ವಿಜಯಮಿತ್ರ) : ಪ್ರೊಫೆಸರ್ ಬಿ ಕೃಷ್ಣಪ್ಪ ರವರು ಸ್ಥಾಪಿರುವ ಕರ್ನಾಟಕ ದಲಿತ ಸಂಘರ್ಷ ಸಮಿತಿ(47/74/75) ಬೆಂಗಳೂರು ಗ್ರಾಮಾಂತರ ಜಿಲ್ಲೆಯಾದ್ಯಂತ ಅತಿ ವೇಗವಾಗಿ ಬೆಳೆಯುತ್ತಿದ್ದು . ಪ್ರತಿ ತಾಲೂಕಿನಲ್ಲೂ ಸಂಘಟನೆಯ ಬಲವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸಮಿತಿಯ ವಿವಿಧ ಸಹ ಸಮಿತಿಗಳನ್ನು ರಚಿಸುವ ಇಂದು ಚರ್ಚಿಸಲಾಗಿದೆ ಎಂದು ಸಮಿತಿಯ ರಾಜ್ಯ ಸಂಘಟನಾ ಸಂಚಾಲಕರಾದ ನಾಗಮಂಗಲ ವೆಂಕಟೇಶ್ ತಿಳಿಸಿದರು.   ನಗರದ ಪ್ರವಾಸಿ ಮಂದಿರದಲ್ಲಿ ಆಯೋಜನೆ ಮಾಡಲಾಗಿದ್ದ ಸಭೆಯಲ್ಲಿ ಭಾಗವಹಿಸಿ ನಂತರ ಮಾತನಾಡಿದ ಅವರು ಜಿಲ್ಲಾ ಸಂಚಾಲಕರಾದ ರಾಮಮೂರ್ತಿ […]

Continue Reading

ಸಿಪಿಐ(ಎಂ) ಪಕ್ಷದ ಮುಖಂಡರಿಂದ ಸುದ್ದಿಗೋಷ್ಠಿ : ಇ.ಎಸ್.ಐ. ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಶೀಘ್ರ ಉದ್ಘಾಟನೆ ಮಾಡಲು ಅಗ್ರಹಿಸಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ನವೆಂಬರ್ 19ರಂದು ಪ್ರತಿಭಟನೆ

ದೊಡ್ಡಬಳ್ಳಾಪುರ : ಕಾಮಗಾರಿ ಮುಗಿದು 2 ವರ್ಷ ಪೂರೈಸಿರುವ ಇ.ಎಸ್.ಐ. ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಶೀಘ್ರ ಉದ್ಘಾಟನೆ ಮಾಡಲು ಮತ್ತು ಕಾರ್ಮಿಕರ ಇ.ಎಸ್.ಐ/ಪಿಎಫ್‌ಗಳ ವೇತನ ಮಿತಿ ತೆಗೆಯಲು ಆಗ್ರಹಿಸಿ ಕೇಂದ್ರ-ರಾಜ್ಯ ಸರ್ಕಾರಗಳ ವಿರುದ್ಧ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳ ಕಚೇರಿ ಎದುರು ನವೆಂಬರ್ 19ರಂದು ಪ್ರತಿಭಟನೆ ಕೈಗೊಳ್ಳಲಾಗುವುದು ಎಂದು ಸಿಪಿಐ(ಎಂ)ಪಕ್ಷದ ಜಿಲ್ಲಾ ಕಾರ್ಯದರ್ಶಿ ನರಸಿಂಹಮೂರ್ತಿ ತಿಳಿಸಿದರು.   ತಾಲ್ಲೂಕಿನ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ ವಾದ) ಕಚೇರಿಯಲ್ಲಿ ನೆಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ತಾಲೂಕಿನ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ […]

Continue Reading

ಬಿರ್ಸಾ ಮುಂಡಾ ಅವರ ಸಾಹಸ, ಧೈರ್ಯ, ನಾಯಕತ್ವ ಯುವಕರಿಗೆ ಸ್ಫೂರ್ತಿ : ಅಪರ ಜಿಲ್ಲಾಧಿಕಾರಿ ಹೆಚ್.ಅಮರೇಶ್

ಬೆಂ.ಗ್ರಾ. ಜಿಲ್ಲೆ, ನ.15 : ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಬಿರ್ಸಾ ಮುಂಡಾ ಅವರು ಅತ್ಯಂತ ಚಿಕ್ಕ ವಯಸ್ಸಿನಲ್ಲೇ ಸ್ವಾತಂತ್ರ್ಯ ಹೋರಾಟದ ನಾಯಕತ್ವ ವಹಿಸಿಕೊಂಡು ಬ್ರಿಟಿಷರ ವಸಹಾತುಶಾಹಿ ಶೋಷಣೆಯ ವಿರುದ್ಧ ಸಿಡಿದೆದ್ದು ಹೋರಾಡಿದರು. ಇಂದಿನ ಯುವ ಸಮೂಹಕ್ಕೆ ಇವರ ಧೈರ್ಯ, ನಾಯಕತ್ವ ಗುಣಗಳು ಸ್ಪೂರ್ತಿಯಾಬೇಕು ಎಂದು ಅಪರ ಜಿಲ್ಲಾಧಿಕಾರಿ ಅಮರೇಶ್.ಹೆಚ್ ಅವರು ಹೇಳಿದರು. ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿಂದು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ ಭಗವಾನ್ ಬಿರ್ಸಾ ಮುಂಡಾ ಅವರ 150ನೇ […]

Continue Reading

ಅಂತರಹಳ್ಳಿ ಕೆರೆ ಹೂಳೆತ್ತುವ ಕಾಮಗಾರಿ ಮುಕ್ತಾಯ : ನಾಮಫಲಕ ಅನಾವರಣ ಹಾಗೂ ಕೆರೆ ಹಸ್ತಾಂತರ ಕಾರ್ಯಕ್ರಮದಲ್ಲಿ ನೂರಾರು ಗ್ರಾಮಸ್ಥರು ಭಾಗಿ

ದೊಡ್ಡಬಳ್ಳಾಪುರ ( ನ. 14) : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ದೊಡ್ಡಬಳ್ಳಾಪುರ ತಾಲ್ಲೂಕು ಇವರ ವತಿಯಿಂದ ಇಂದು(ನ. 14) ಕಂಟನಕುಂಟೆ ವಲಯದ ಅಂತರಹಳ್ಳಿ ಗ್ರಾಮದ ಸುಮಾರು 200 ವರ್ಷ ಇತಿಹಾಸವಿರುವ ಗ್ರಾಮದ ಕೆರೆಯನ್ನು ” ನಮ್ಮೂರು ನಮ್ಮ ಕೆರೆ ” ಕಾರ್ಯಕ್ರಮದ ಅಡಿಯಲ್ಲಿ ಹೂಳೆತ್ತುವ ಕಾಮಗಾರಿ ಯನ್ನು ಕೈಗೊಳ್ಳಲಾಗಿದ್ದು ಇಂದು ನಾಮಫಲಕ ಅನಾವರಣ ಹಾಗೂ ಕೆರೆ ಹಸ್ತಾಂತರ ಕಾರ್ಯಕ್ರಮ ನೆರವೇರಿಸಲಾಯಿತು ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ನಿರ್ದೇಶಕರಾದ ಉಮಾರಬ್ಬ, ತಾಲ್ಲೂಕಿನ ಯೋಜನಾಧಿಕಾರಿಗಳಾದ ಸುಧಾ ಭಾಸ್ಕರ್ ನಾಯಕ್,ಕೆರೆ […]

Continue Reading

ಶಾಸಕರು ಹಿಂಬಾಲಕರಿಗೆ ಬುಧ್ಧಿ ಹೇಳಲಿ: ದೊಡ್ಡತುಮಕೂರು ಕಾಂಗ್ರೆಸ್, ಜೆಡಿಎಸ್ ಮುಖಂಡರ ಆಗ್ರಹ.

ದೊಡ್ಡಬಳ್ಳಾಪುರ : ಚುನಾವಣೆಗಳಲ್ಲಿ ಮಾತ್ರ ರಾಜಕೀಯ ಮಾಡಿ ಮಾರನೇ ದಿನ ಅಣ್ಣತಮ್ಮಂದಿರಂತೆ ಇದ್ದ ದೊಡ್ಡತುಮಕೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಸ್ಥರಲ್ಲಿ ರಾಜಕೀಯ ದ್ವೇಷ, ಅಸೂಯೆ ಮೂಡುವಂತೆ ಮಾಡುವಲ್ಲಿ ಶಾಸಕರು ನೇರವಾಗಿ ಅಥವಾ ಅವರ ಕಾರ್ಯಕರ್ತರ ಮೂಲಕ ಮಾಡಿಸಿ ಅಶಾಂತಿಯ ವಾತವಾರಣಕ್ಕೆ ಕಾರಣರಾಗಿದ್ದಾರೆ ಎಂದು ವಿಎಸ್ಎಸ್ಎನ್ ಮಾಜಿ ಅಧ್ಯಕ್ಷ ಟಿಎನ್ ಪ್ರಭಾಕರ್ ಆಕ್ರೋಶ ವ್ಯಕ್ತಪಡಿಸಿದರು.   ದೊಡ್ಡತುಮಕೂರು ವಿಎಸ್ಎಸ್ಎನ್ ಸಹಕಾರ ಸಂಘದ ಚುನಾವಣೆಯಲ್ಲಿನ ಬೆಳವಣಿಗೆ ಬಗ್ಗೆ ನಗರದ ಪ್ರವಾಸಿ ಮಂದಿರದಲ್ಲಿ ಆಯೋಜನೆ ಮಾಡಲಾಗಿದ್ದ ಸುದ್ದಿಗೊಷ್ಟಿಯಲ್ಲಿ ಮಾತನಾಡಿ, ಕೆಲವರು ಜೆಡಿಎಸ್ […]

Continue Reading