ಕಾಶ್ಮೀರದಲ್ಲಿ ನೆಡೆದಿರುವ ಉಗ್ರರ ದಾಳಿಯನ್ನು ನಾವು ಖಂಡಿಸುತ್ತೇವೆ – ಮುಖ್ಯಮಂತ್ರಿ ಸಿದ್ದರಾಮಯ್ಯ

ಬಿಜೆಪಿ ಪಕ್ಷದವರು ನಮ್ಮ ಸರ್ಕಾರದ ವಿರುದ್ಧ ಜನಕ್ರೋಶ ಪ್ರತಿಭಟನೆ ಮಾಡುವ ಬದಲು 11ವರ್ಷಗಳಿಂದ ನಿರಂತರ ಬೆಲೆ ಏರಿಕೆ ಮಾಡುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಬಿಜೆಪಿ ಮಾಡಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.   ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ವತಿಯಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಕುಂದಾಣ ಹೋಬಳಿಯ ಭೈರದೇನಹಳ್ಳಿ ಕೈಗಾರಿಕಾಭಿವೃದ್ಧಿ ಪ್ರದೇಶದಲ್ಲಿ ಆಯೋಜನೆ ಮಾಡಲಾಗಿದ್ದ ಸರ್ಕಾರದ ಎರಡು ವರ್ಷದ ಸಾಧನೆ ಸಮಾವೇಶ ಆಯೋಜನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು ಬಿಜೆಪಿ ಪಕ್ಷದವರು ಸದಾ ಹೇಳ್ತಾರೆ ನಮ್ಮ ಕಾಂಗ್ರೆಸ್ […]

Continue Reading

ರಾಜ್ಯದಲ್ಲಿರುವ ಪಾಕಿಸ್ತಾನಿ ಪ್ರಜೆಗಳನ್ನು ವಾಪಸ್ಸು ಕಳಿಸಲು ಕ್ರಮ ಕೈಗೊಳ್ಳಲಾಗುವುದು : ನಾವು ಯುದ್ಧದ ಪರ ಇಲ್ಲ – ಮುಖ್ಯಮಂತ್ರಿ ಸಿದ್ದರಾಮಯ್ಯ

ಮೈಸೂರು : ಕೇಂದ್ರ ಸರ್ಕಾರದ ಸೂಚನೆಯಂತೆ, ಕರ್ನಾಟಕ ರಾಜ್ಯದಲ್ಲಿರಬಹುದಾದ ಪಾಕಿಸ್ತಾನಿ ಪ್ರಜೆಗಳ ಬಗ್ಗೆ ಮಾಹಿತಿ ಕಲೆಹಾಕಿ, ಅವರನ್ನು ವಾಪಸ್ಸು ಕಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.   ಅವರು ಇಂದು ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು ರಾಜ್ಯದ ವಿವಿಧ ನಗರಗಳಲ್ಲಿ ಪಾಕಿಸ್ತಾನಿಗಳ ಸಂಖ್ಯೆ ಬಗ್ಗೆ ಹಾಗೂ ಬೆಂಗಳೂರಿನಲ್ಲಿ ಪಾಕಿಸ್ತಾನಿಗಳ ಹೆಚ್ಚಿನ ಸಂಖ್ಯೆಯಲ್ಲಿದ್ದು, ಈ ಬಗ್ಗೆ ಮಾಹಿತಿ ಪಡೆಯಲಾಗವುದು ಎಂದರು.     *ಕಾಶ್ಮೀರದಲ್ಲಿ ಭದ್ರತೆ ಹೆಚ್ಚಿಸಬೇಕಿತ್ತು* ಕಾಶ್ಮೀರದ ಉಗ್ರರ ದಾಳಿ ಘಟನೆಯಲ್ಲಿ ಭದ್ರತಾ ವೈಫಲ್ಯವನ್ನು ಕೇಂದ್ರ […]

Continue Reading

ದೊಡ್ಡಬಳ್ಳಾಪುರ ನಗರಸಭೆ : ಜನನ ಪ್ರಮಾಣ ವಿತರಿಸಲು ಫೋನ್ ಪೇಯಲ್ಲಿ ಹಣ ಪಡೆದ ಅಧಿಕಾರಿ ವಿರುದ್ಧ ಕೆ ಆರ್ ಎಸ್ ಆಕ್ರೋಶ

ದೊಡ್ಡಬಳ್ಳಾಪುರ : ನಗರಸಭೆಯಲ್ಲಿ ಜನನ ಪ್ರಮಾಣ ವಿತರಿಸಲು ಹೆಲ್ತ್ ಇನ್ಸ್ಪೆಕ್ಟರ್ ಒಬ್ಬರು ಫೋನ್ ಪೇ ಮುಕಾಂತರ ₹1400 ರೂಗಳನ್ನು ಪಡೆದು ಯಾವುದೇ ರಸೀದಿ ನೀಡದೆ ತಮ್ಮ ವಯಕ್ತಿಕ ಖಜಾನೆ ತುಂಬಿಸಿ ಕೊಳ್ಳುತ್ತಿದ್ದಾರೆ, ಸಂಬಂಧಪಟ್ಟ ಅಧಿಕಾರಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೊಡ್ಡಬಳ್ಳಾಪುರ ಕರ್ನಾಟಕ ರಾಷ್ಟ್ರ ಸಮಿತಿ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ. ನಗರದ ನಗರಸಭೆ ಕಚೇರಿಯಲ್ಲಿ ಜನನ ಹಾಗೂ ಮರಣ ಪ್ರಮಾಣ ಪತ್ರಗಳ ವಿತರಣೆ ಮಾಡುವ ಅಧಿಕಾರಿಯೊಬ್ಬರು ನೆನ್ನೆ ಮಧ್ಯಾಹ್ನದ ಸುಮಾರಿಗೆ ಫೋನ್ ಪೇ ಮೂಲಕ 1400 ಪಡೆದಿದ್ದು, […]

Continue Reading

ನನಗೆ ಹೆಂಡತಿ ಮಗು ಬೇಡವೆಂದು ಎರಡನೇ ಮದುವೆಯಾದ ಭೂಪ : ನ್ಯಾಯಕ್ಕಾಗಿ ಠಾಣೆ ಮೆಟ್ಟಿಲೇರಿದ ಸಂತ್ರಸ್ತೆ ಕುಟುಂಬ

ದೊಡ್ಡಬಳ್ಳಾಪುರ : ಅಣ್ಣ ಮದುವೆಯಾಗಿದ್ದ ಮನೆಗೆ ಬಂದು ಹೋಗುತ್ತಿದ್ದ ಆತ, ಬಂದು ಹೋಗುವ ಸಮಯದಲ್ಲಿ ನನ್ನನು ಪ್ರೀತಿಸಿ ಮದುವೆಯಾದ, ಆದರೆ ಈಗ ನನ್ನನ್ನು ಮುತ್ತು ನನ್ನ ಮಗನನ್ನು  ಬಿಟ್ಟು  ಮತ್ತೊಬ್ಬಳನ್ನು ಮದುವೆಯಾಗಿ ನನಗೆ ಮೋಸ ಮಾಡುತ್ತಿದ್ದಾರೆ ಎಂದು ಸಂತ್ರಸ್ತೆ ಶಿಲ್ಪ ಆರೋಪಿಸಿದ್ದಾರೆ .   ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ನಗರಗೆರೆ ಗ್ರಾಮದ ಶಿಲ್ಪಾ 10 ವರ್ಷಗಳ ಹಿಂದೆ ನಗರಗೆರೆ ಗ್ರಾಮದವನೇ ಆದ ರಘು ಎಂಬಾತನ್ನು ಪ್ರೀತಿಸಿ ಮದುವೆಯಾಗಿದ್ರು. ಅಂದಹಾಗೇ ಈ ರಘು ಶಿಲ್ಪಾಳ ಅಕ್ಕ ಪ್ರೇಮ […]

Continue Reading

ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ದೆಹಲಿಯಲ್ಲಿ ನಡೆದ ಕ್ಯಾಬಿನೆಟ್​ ಕಮಿಟಿ ಆನ್ ಸೆಕ್ಯೂರಿಟಿ (ಸಿಸಿಎಸ್) ಸಭೆಯಲ್ಲಿ ಕೈಗೊಂಡ ನಿರ್ಧಾರಗಳೇನು…ಗೊತ್ತಾ…???

ದೆಹಲಿ : ಏಪ್ರಿಲ್​ 22 ರಂದು ಭಯೋತ್ಪಾಕದರು ಜಮ್ಮುಕಾಶ್ಮೀರದ ಪಹಲ್ಗಾಮ್​ನಲ್ಲಿ ಅಟ್ಟಹಾಸ ಮೆರೆದಿದ್ದರು.ಬರೋಬ್ಬರಿ 26 ಪ್ರಾಣಗಳನ್ನು ಬಲಿ ಪಡೆದಿದ್ದರು. ಈ ಕೃತ್ಯವನ್ನು ತೀವ್ರವಾಗಿ ಖಂಡಿಸಿದ್ದ ಪ್ರಧಾನಿ ಮೋದಿಯವರು ದಾಳಿಗೆ ಮೊದಲ ಪ್ರತ್ಯುತ್ತರವಾಗಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಣಯಗಳನ್ನು ಕೈಗೊಳ್ಳುವ ಮೂಲಕ ಪಾಕಿಸ್ತಾನಕ್ಕೆ ಬಿಸಿ ಮುಟ್ಟಿಸಿದ್ದಾರೆ. ಪ್ರಮುಖವಾಗಿ ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ದೆಹಲಿಯಲ್ಲಿ ನಡೆದ ಕ್ಯಾಬಿನೆಟ್​ ಕಮಿಟಿ ಆನ್ ಸೆಕ್ಯೂರಿಟಿ (ಸಿಸಿಎಸ್) ಸಭೆಯಲ್ಲಿ ವಿಶ್ವಬ್ಯಾಂಕ್ ಮಧ್ಯಸ್ಥಿಕೆಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ದೀರ್ಘಕಾಲದ ನೀರು ಹಂಚಿಕೆ ಒಪ್ಪಂದವಾದ […]

Continue Reading

ನಟನೆ ಮತ್ತು ಗಾಯನ ಎರಡರಲ್ಲೂ  ಪ್ರಬುದ್ಧ ಕಲಾವಿದರಾದ ಡಾ.ರಾಜ್ ಕುಮಾರ್ – ಶ್ರೀಕಾಂತ್

ದೊಡ್ಡಬಳ್ಳಾಪುರ : ಡಾ.ರಾಜಕುಮಾರ್  ಅವರ ಕನ್ನಡ ನಾಡು, ನುಡಿಯ  ಪ್ರೀತಿ ಅನನ್ಯವಾದದ್ದು. ಐತಿಹಾಸಿಕ ಪಾತ್ರಗಳ ಮೂಲಕ ಕರ್ನಾಟಕ ಇತಿಹಾಸದ ವೈಭವವನ್ನು ಮರುಸೃಷ್ಟಿ ಮಾಡಿದವರು ಎಂದು  ಕನ್ನಡ ಸಾಹಿತ್ಯ ಪರಿಷತ್ತು ಕಸಬಾ ಹೋಬಳಿ ಘಟಕದ ಕೋಶಾಧ್ಯಕ್ಷ ಜಿ.ಸುರೇಶ್ ತಿಳಿಸಿದರು.   ಅವರು‌ ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಡಾ.ರಾಜ್ ಕುಮಾರ್ ಕಲಾಮಂದಿರದಲ್ಲಿ ಡಾ.ರಾಜ್ ಕುಮಾರ್ ಜನ್ಮದಿನಾಚರಣೆ ಅಂಗವಾಗಿ ನಡೆದ  ಕನ್ನಡ ಅಭಿಮಾನ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಡಾ.ರಾಜ್ ಕುಮಾರ್  ಗೋಕಾಕ್ ಚಳುವಳಿಯಲ್ಲಿ ಭಾಗವಹಿಸಿ ಕನ್ನಡಿಗರಲ್ಲಿ […]

Continue Reading

ವೃದ್ಧಾಶ್ರಮದ ನಿರ್ವಹಣೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ದಿಂದ 1 ಲಕ್ಷ ಅನುದಾನ ಮಂಜೂರಾತಿ ಅನುದಾನ ವಿತರಣೆ

ದೊಡ್ಡಬಳ್ಳಾಪುರ : ತಾಲ್ಲೂಕಿನ ವಾತ್ಸಲ್ಯ ಕಾರ್ಯಕ್ರಮದಡಿಯಲ್ಲಿ ಪವಿತ್ರ ನಿರಾಶ್ರಿತರ ವೃದ್ಧಾಶ್ರಮ ದೊಡ್ಡಬಳ್ಳಾಪುರ ಇದರ ವೃದ್ಧಾಶ್ರಮದ ನಿರ್ವಹಣೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ದಿಂದ 1 ಲಕ್ಷ ಅನುದಾನ ಮಂಜೂರಾತಿ ಮಾಡಲಾಗಿದೆ.   ತಾಲ್ಲೂಕಿನ ಯೋಜನಾಧಿಕಾರಿಗಳಾದ ಸುಧಾ ಬಾಸ್ಕರ್ ಸಮಿತಿ ಸದಸ್ಯರಿಗೆ 1ಲಕ್ಷ ಮೌಲ್ಯದ ಅನುದಾನವನ್ನು ಹಸ್ತಾಂತರ ಮಾಡಿದರು   ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಶ್ರೀಯುತ ಆನಂದ್,ಶಾಕಿರ್(ಬಾಬಿ)ವೃದ್ಧಾಶ್ರಮದ ಕಾರ್ಯದರ್ಶಿ ಲಕ್ಷ್ಮಮ್ಮ, ಸಿದ್ದಲಿಂಗಯ್ಯ,ಉಮಾ ಕೃಷಿ ಮೇಲ್ವಿಚಾರಕರಾದ ಲೋಹಿತ್ ಗೌಡ, ವಲಯ ಮೇಲ್ವಿಚಾರಕರಾದ ಸವಿತಾ, ವಲಯದ ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು.

Continue Reading

ದೊಡ್ಡಬಳ್ಳಾಪುರ : ಸೆವೆನ್ ಹಿಲ್ಸ್ ಆಸ್ಪತ್ರೆ ಮುಂಭಾಗ ಇಂಗ್ಲಿಷ್ ಬಳಕೆ ವಿರುದ್ಧ ಕರಾವೇ ಹೋರಾಟ : ಇಂಗ್ಲೀಷ್ ನಾಮಫಲಕದ ಬೆಳಕನ್ನು ಬಂದ್ ಮಾಡಿದ ಆಸ್ಪತ್ರೆ ಸಿಬ್ಬಂದಿ

ದೊಡ್ಡಬಳ್ಳಾಪುರ : ನಗರದ ಖಾಸಗಿ ಒಡೆತನದ ಸವೆನ್ ಹಿಲ್ಸ್ ಆಸ್ಪತ್ರೆ ತನ್ನ ನಾಮಫಲಕದಲ್ಲಿ ಇಂಗ್ಲಿಷ್ ಬಳಕೆ ಮಾಡಿದ್ದ ಹಿನ್ನೆಲೆ ಕರ್ನಾಟಕ ರಕ್ಷಣಾ ವೇದಿಕೆ (ಟಿ ಏ ನಾರಾಯಣಗೌಡರ ಬಣ )ದ ವತಿಯಿಂದ ಆಸ್ಪತ್ರೆ ಮುಂಭಾಗ ಪ್ರತಿಭಟನೆ ಮಾಡಲಾಯಿತು . ಈ ಸಂದರ್ಭದಲ್ಲಿ ಕರವೇ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಪುರುಷೋತ್ತಮ್ ಗೌಡ ಮಾತನಾಡಿ ಈಗಾಗಲೇ ಹಲವು ಬಾರಿ ಎಚ್ಚರಿಕೆ ನೀಡಿದ್ದರು ಸಹ ಆಸ್ಪತ್ರೆ ಸಿಬ್ಬಂದಿ ಯಾವುದೇ ಕ್ರಮ ಕೈಗೊಂಡಿಲ್ಲ , ಕನ್ನಡಕ್ಕೆ ಅವಮಾನಿಸಿದವರ ವಿರುದ್ಧ ನಮ್ಮ ಕರ್ನಾಟಕ ರಕ್ಷಣಾ […]

Continue Reading

ದ್ವಿತೀಯ ಪಿಯುಸಿ ಪರೀಕ್ಷೆ 2 : ಜಿಲ್ಲೆಯ  4 ಪರೀಕ್ಷಾ ಕೇಂದ್ರಗಳಲ್ಲಿ  ಪರೀಕ್ಷೆ ಬರೆಯಲಿರುವ 2641 ವಿದ್ಯಾರ್ಥಿಗಳು

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ  ದ್ವಿತೀಯ ಪಿಯುಸಿ ಪರೀಕ್ಷೆ 2 ಏಪ್ರಿಲ್ 24 ರಿಂದ ಪ್ರಾರಂಭಗೊಳ್ಳುತ್ತಿದೆ.   ಜಿಲ್ಲೆಯ  4 ಪರೀಕ್ಷಾ ಕೇಂದ್ರಗಳಲ್ಲಿ  ಒಟ್ಟು 2641 ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆ 2 ಅನ್ನು ತೆಗೆದುಕೊಂಡಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ   ಶಾಲಾ ಶಿಕ್ಷಣ ಇಲಾಖೆ ( ಪದವಿಪೂರ್ವ) ಉಪನಿರ್ದೇಶಕ ಎನ್. ಮೋಹನ್ ಕುಮಾರ್‌ ತಿಳಿಸಿದ್ದಾರೆ.   ಅವರು    ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನಡೆಯುವ ದ್ವಿತೀಯ ಪಿಯುಸಿ ಪರೀಕ್ಷೆ 2 ಕುರಿತು     ಕುರಿತು ಮಾಹಿತಿ […]

Continue Reading

ಇದು ಕೇವಲ ಪುತ್ಥಳಿಯಲ್ಲ ವಿದ್ಯೆ ಸಂಘರ್ಷ ಹೋರಾಟ ಸಮಾನತೆಯ ಪ್ರತಿರೂಪವಾಗಿದೆ – ಮಹೇಶ್

ದೊಡ್ಡಬಳ್ಳಾಪುರ : ತಾಲ್ಲೂಕಿನ ವಡ್ಡರಪಾಳ್ಯದಲ್ಲಿ ಸ್ಥಳೀಯ ಯುವಕರು ಹಾಗೂ ನಿವಾಸಿಗಳು ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ರವರ 134ನೇ ಜಯಂತಿಯ ಅಂಗವಾಗಿ ಪುತ್ಥಳಿ ಅನಾವರಣ ಮಾಡುವ ಮೂಲಕ ವಿಶೇಷವಾಗಿ ಆಚರಿಸಿದರು. ಕಾರ್ಯಕ್ರಮಕ್ಕೆ ಆಗಮಿಸಿದ ಕೆ ಆರ್ ಎಸ್ ಪಕ್ಷದ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಬಿ. ಶಿವಶಂಕರ್ , ದಲಿತ ಮುಖಂಡರಾದ ರಾಜಗೋಪಾಲ್,ರಾಜುಸಣ್ಣಕ್ಕಿ,ಸ್ಥಳೀಯ ಮುಖಂಡ ಮಹೇಶ್ ಸೇರಿದಂತೆ ಹಲವು ಗಣ್ಯರು ನೂತನ ಪುತ್ಥಳಿಗೆ ಪುಷ್ಪ ನಮನ ಹಾಗೂ ಮಾಲಾರ್ಪಣೆ ಮಾಡುವ ಮೂಲಕ ಅನಾವರಣ ಮಾಡಿದರು. ಈ […]

Continue Reading