ರಾಜ್ಯ ಯೋಗ ಚಾಂಪಿಯನ್ ಷಿಪ್ ಸ್ಪರ್ಧೆಯಲ್ಲಿ ನಿಸರ್ಗ ಯೋಗ ಕೇಂದ್ರದ ಪಟುಗಳಿಂದ ಅದ್ಬುತ ಸಾಧನೆ

ಕರ್ನಾಟಕ ರಾಜ್ಯ ಯೋಗಾಸನ ಕ್ರೀಡಾ ಚಂಪಿಯನ್‌ಷಿಪ್,2025 ರಲ್ಲಿ ನಡೆದ ಯೋಗಾ ಚಾಂಪಿಯನ್ ಶಿಪ್ ಪಂದ್ಯದಲ್ಲಿ ದೊಡ್ಡಬಳ್ಳಾಪುರದ ನಿಸರ್ಗ ಯೋಗ ಕೇಂದ್ರ ಯೋಗಪಟುಗಳು ಅತಿ ಹೆಚ್ವು ಬಹುಮಾನಗಳನ್ನು ಗೆಲ್ಲುವ ಮೂಲಕ ಅದ್ಬುತ ಸಾಧನೆ ಮಾಡಿದ್ದಾರೆ‌.     ಕರ್ನಾಟಕ ರಾಜ್ಯ ಅಮೆಚ್ಯೂರ್ ಯೋಗ ಸ್ಪೋರ್ಟ್ಸ್ ಅಸೋಸಿಯೇಷನ್ ಮತ್ತು ಶಿವಮೊಗ್ಗ ಜಿಲ್ಲಾ ಯೋಗಾಸನ ಕ್ರೀಡಾ ಸಂಸ್ಥೆ ಮತ್ತು ಗುರುಕುಲಮ್ ಯೋಗ ವಿದ್ಯಾ ಶಾಲಾ ಆಶ್ರಯದಲ್ಲಿ ಸಾಗರದ ಈಡಿಗರ ಸಮೂದಾಯ ಭವನದಲ್ಲಿ ನಡೆದ ಯೋಗಾ ಸ್ಪರ್ದೆಯಲ್ಲಿ ನಿಸರ್ಗ ಯೋಗ ಕೇಂದ್ರದ ಯೋಗಪಟುಗಳು […]

Continue Reading

ಘಾಟಿ ಸುಬ್ರಮಣ್ಯ : ಸಂಪೂರ್ಣ ಪ್ಲಾಸ್ಟಿಕ್ ಬ್ಯಾನ್ ಗೆ ಘಾಟಿ ಸುಬ್ರಮಣ್ಯ ಸಜ್ಜು ಪ್ಲಾಸ್ಟಿಕ್ ಬಳಸದಂತೆ ಭಕ್ತಾದಿಗಳಲ್ಲಿ ಮನವಿ ಮಾಡಿದ ಕಾರ್ಯದರ್ಶಿ- ಪಿ ದಿನೇಶ್

ದೊಡ್ಡಬಳ್ಳಾಪುರ : ಶ್ರೀ ಘಾಟಿ ಸುಬ್ರಮಣ್ಯ ಕ್ಷೇತ್ರದ ಸಂಪೂರ್ಣ ಅಭಿವೃದ್ಧಿ ಹಾಗೂ ದೇವಾಲಯದ ಪ್ರಸಿದ್ದಿಯನ್ನು ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗೊಳಿಸುವ ನಿಟ್ಟಿನಲ್ಲಿ ಶ್ರೀಘಾಟಿ ಸುಬ್ರಹ್ಮಣ್ಯ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರವನ್ನ ರಚನೆ ಮಾಡಲಾಗಿದೆ ಎಂದು ಪ್ರಾಧಿಕಾರದ ಕಾರ್ಯದರ್ಶಿ ಪಿ.ದಿನೇಶ್ ತಿಳಿಸಿದರು.   ಈ ಕುರಿತು ಮಾತನಾಡಿದ ಅವರು ದೇವಾಲಯದ ಸಮಗ್ರ ಅಭಿವೃದ್ಧಿಗಾಗಿ ಆಕ್ಷನ್ ಪ್ಲ್ಯಾನ್ ಸಿದ್ದಪಡಿಸಿ ಹಂತ ಹಂತವಾಗಿ ಅನುಷ್ಟಾನಗೊಳಿಸಲು ಯೋಜನೆಗಳನ್ನು ರೂಪಿಸಿದ್ದು, ಮೊದಲನೆಯದಾಗಿ ಮಾಸ್ಟರ್ ಪ್ಲ್ಯಾನ್ ಸಿದ್ದಪಡಿಸಿ ದೇವಾಲಯದ ವ್ಯಾಪ್ತಿಯ 10 ಎಕರೆ 23 ಗುಂಟೆ […]

Continue Reading

ಜೂನ್ 21 ರಂದು 11ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ: ಜಿಲ್ಲಾಧಿಕಾರಿ ಎ.ಬಿ ಬಸವರಾಜು

ಜಿಲ್ಲಾ ಮಟ್ಟದ 11 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಜೂನ್ 21 ರಂದು ದೇವನಹಳ್ಳಿ ಟೌನ್ ನಲ್ಲಿರುವ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಎ.ಬಿ ಬಸವರಾಜು ಅವರು ಹೇಳಿದರು.   ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ “11 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸುವ ಸಂಬಂಧ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ 11 ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು “ಒಂದು ಭೂಮಿ ಒಂದು ಆರೋಗ್ಯಕ್ಕಾಗಿ ಯೋಗ ಎಂಬ ಘೋಷವಾಕ್ಯದೊಂದಿಗೆ ಆಚರಿಸಲಾಗುವುದು. ಆ […]

Continue Reading

ಎಲ್ಲಾ ಸಣ್ಣ ಸಣ್ಣ ಸಮಾಜಗಳೂ ಆರ್ಥಿಕವಾಗಿ ಮೇಲೆ ಬರಬೇಕು: ಸಿ.ಎಂ.ಸಿದ್ದರಾಮಯ್ಯ

ಬೆಂಗಳೂರು : ಕಾಂಗ್ರೆಸ್ ಪಕ್ಷದ ಸಂಸ್ಕೃತಿ ಕೂಡ ಸರ್ವರಿಗೂ ಸಮಾನವಾಗಿ ಕಾಣುವುದಾಗಿದೆ. ಎಲ್ಲಾ ಜಾತಿ, ಎಲ್ಲಾ ಧರ್ಮದವರನ್ನೂ ಭಾರತೀಯರು, ಭಾರತೀಯ ಪ್ರಜೆಗಳು ಎಂದು ಕಾಂಗ್ರೆಸ್ ಪರಿಗಣಿಸುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.   ವಸಂತನಗರದ ಕೊಡವ ಸಭಾಂಗಣದಲ್ಲಿ ಕೊಡವ ಸಮಾಜದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಕೊಡವ ಸಮಾಜ ಸಂಖ್ಯೆಯಲ್ಲಿ ಅಲ್ಪಸಂಖ್ಯಾತರಾದರೂ ದೇಶ ಸೇವೆಯಲ್ಲಿ ಇವರಿಗೆ ಸರಿಸಮಾನವಾದವರು ಬೇರೆ ಇಲ್ಲ. ಸಂಸ್ಕೃತಿ, ಶಿಸ್ತಿನಲ್ಲಿ ಕೊಡವರು ಮುಂಚೂಣಿಯಲ್ಲಿದ್ದಾರೆ. ಸೈನ್ಯಕ್ಕೆ, ದೇಶ ರಕ್ಷಣೆಗೆ, ಕ್ರೀಡೆಗೆ, ರಾಜಕಾರಣಕ್ಕೆ ಕೊಡವರ ಕೊಡವರ ಕೊಡುಗೆ […]

Continue Reading

ಶಾಸಕ, ಸಂಸದ ಆಗೋದು ನನ್ನ ಗುರಿಯಲ್ಲ : ಪಕ್ಷವನ್ನ ಬಲಿಷ್ಠವಾಗಿ ಸಂಘಟಿಸಲು ಬೂತ್ ಮಟ್ಟದಲ್ಲಿ ತಂಡ ರಚಿಸಿ ಎಂದು ನಿಖಿಲ್ ಕರೆ

ತುಮಕೂರು : ನಡೆದಾಡುವ ದೇವರು ಶ್ರೀ ಶ್ರೀ ಶ್ರೀ ಡಾ. ಶಿವಕುಮಾರ ಮಹಾಸ್ವಾಮಿಗಳ ಗದ್ದುಗೆಗೆ ಪೂಜೆ ಸಲ್ಲಿಸಿ ತುಮಕೂರು ಪ್ರವಾಸ ಆರಂಭಿಸಿದ ನಿಖಿಲ್ ಕುಮಾರಸ್ವಾಮಿ ಅವರು ಗುಬ್ಬಿ ಮತ್ತು ಕುಣಿಗಲ್ ಕ್ಷೇತ್ರದಲ್ಲಿ ಜನರೊಂದಿಗೆ ಜನತಾದಳ ರಾಜ್ಯ ಪ್ರವಾಸ ಹಾಗೂ ಮಿಸ್ ಕಾಲ್ ಸದಸ್ಯತ್ವ ಅಭಿಯಾನಕ್ಕೆ ಅವರು ಚಾಲನೆ ನೀಡಿದರು. ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು; ಇವತ್ತಿಂದ ರಾಜ್ಯ ಪ್ರವಾಸ ಮಾಡುತ್ತಿರುವುದು ನನ್ನ ಸೌಭಾಗ್ಯ ಇದು. ನಾನು ಇಡೀ ರಾಜ್ಯ ಪ್ರವಾಸ ಮಾಡುತ್ತಿರುವುದು ನಿಮ್ಮ ಜತೆಗೆ ಸಂಬಂಧ […]

Continue Reading

ಹೊಸಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅತ್ಯಾಧುನಿಕ ಸುಮಾರು 23 ಸೋಲಾರ್ ಸಿಸಿ ಟಿವಿಗಳ ಅಳವಡಿಕೆ

ಹೊಸಹಳ್ಳಿ: ಅಪರಾಧ ಪತ್ತೆಹಚ್ಚುವ ಮತ್ತು ಅಪರಾಧಗಳನ್ನು ತಡೆಯುವ ಸಲುವಾಗಿ ಹೊಸಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ವಿವಿಧ ಕೂಡು ರಸ್ತೆ, ಮುಖ್ಯ ಸರ್ಕಲ್, ಶಾಲಾ ಆವರಣ, ಕವಲು ರಸ್ತೆ ಮತ್ತು ಅರಣ್ಯ ಪ್ರದೇಶಗಳಲ್ಲಿ ಸುಮಾರು 23 ಸೋಲಾರ್ ಸಿಸಿ ಟಿವಿಗಳನ್ನು ಇನ್ಸ್ಪೆಕ್ಟರ್ ರಾವ್ ಗಣೇಶ್ ಜನಾರ್ಧನ್ ನೇತೃತ್ವದಲ್ಲಿ ಅಳವಡಿಸಲಾಗಿದೆ.     ಸುಮಾರು 23 ಸೋಲಾರ್ ಸಿಸಿ ಟಿವಿ ಗಳನ್ನು ದಾನಿಗಳು ಮತ್ತು ಸ್ಥಳೀಯ ಮುಖಂಡರ ನೆರವಿನಿಂದ ಹೊಸಹಳ್ಳಿ ಗ್ರಾಮ ಪಂಚಾಯಿತಿ, ಅರೂಢಿ ಗ್ರಾಮ ಪಂಚಾಯಿತಿಗಳಲ್ಲಿ ಅಳವಡಿಸಿಲಾಗಿದೆ.ಈ ಸೋಲಾರ್ […]

Continue Reading

ಬೆಂಗಳೂರಿಗೆ ಕಾವೇರಿ ನೀರು ದೊಡ್ಡಬಳ್ಳಾಪುರಕ್ಕೆ ಬಿಬಿಎಂಪಿ ಕಸದ ನೀರು ಇದು ಯಾವ ನ್ಯಾಯ – ಶಾಸಕ ಧೀರಜ್ ಮುನಿರಾಜು

ಸಭೆಯಲ್ಲಿ ಪ್ರಮುಖವಾಗಿ ವೃಷಭಾವತಿ ನೀರು ತಾಲೂಕಿಗೆ ಹರಿಸುವ ಕುರಿತು ಹಾಗೂ ಎಂ ಎಸ್ ಜಿ ಪಿ ಕಸ ವಿಲೇವಾರಿ ಘಟಕದ ವಿರುದ್ಧ ಹೋರಾಟ ಕುರಿತಂತೆ ತಾಲೂಕಿನ ಎಲ್ಲಾ ಹಂತದ ಜನಪ್ರತಿನಿಧಿಗಳು ಮತ್ತು ವಿವಿಧ ಸಂಘ ಸಂಸ್ಥೆಗಳ ಮುಖಂಡರೊಂದಿಗೆ ಸಮಾಲೋಚನಾ ಸಭೆ ನಡೆಸಲಾಗಿದೆ ಎಂದು ರಾಜ್ಯ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರು ಹಾಗೂ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಧೀರಜ್ ಮುನಿರಾಜು ತಿಳಿಸಿದರು. ನಗರದ ಡಾ.ಬಾಬುಜಗಜೀವನ್ ರಾಂ ಭವನದಲ್ಲಿ ಶನಿವಾರ ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ, ನಗರ ಸಭೆ, […]

Continue Reading

ಬಮೂಲ್ ಚುನಾವಣೆ : ಸ್ಥಳೀಯ ಬಮೂಲ್ ನಿರ್ದೇಶಕ ಸ್ಥಾನಕ್ಕೆ ಇನ್ನೂ 6 ತಿಂಗಳಲ್ಲಿ ಮರುಚುನಾವಣೆ ನೆಡೆಯಲಿದೆ – ಹುಸ್ಕೂರ್ ಟಿ ಆನಂದ್

ದೊಡ್ಡಬಳ್ಳಾಪುರ : ನ್ಯಾಯಾಲಯದಲ್ಲಿ ಈಗಾಗಲೇ ತಡೆಯಾಗದೆ ಇದ್ದರೂ, ಚುನಾವಣೆಯಲ್ಲಿ ಸ್ಪರ್ಧಿಸಿ ಜಯಗಳಿಸಿರುವ ಅಭ್ಯರ್ಥಿಯು ನ್ಯಾಯಾಲಯದ ತೀರ್ಪಿನ ಬಳಿಕ ಅನರ್ಹವಾಗಲಿದ್ದಾರೆ ನಮ್ಮ ಕ್ಷೇತ್ರದ ನಿರ್ದೇಶಕ ಸ್ಥಾನಕ್ಕೆ ಮರುಚುನಾವಣೆ ನಡೆಯಲಿದೆ ಎಂದು ಜೆಡಿಎಸ್ ರಾಜ್ಯ ಕಾರ್ಯದರ್ಶಿ ಹುಸ್ಕೂರು ಟಿ ಅನಂದ್ ತಿಳಿಸಿದ್ದಾರೆ.   ಹೌದು ಮೇ ತಿಂಗಳ 25ರಂದು ನಡೆದ ಬಮೂಲ್ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲು ಕಂಡಿದ್ದ ಕಾಂಗ್ರೆಸ್ ಬೆಂಬಲಿತ ಜೆಡಿಎಸ್ ಅಭ್ಯರ್ಥಿ ಹುಸ್ಕೂರು ಟಿ ಆನಂದ್ ಹೊಸ ಬಾಂಬ್ ಸಿಡಿಸಿದ್ದಾರೆ. ಈಗಾಗಲೇ ಬಮುಲ್ ನಿರ್ದೇಶಕರನ್ನು ನ್ಯಾಯಾಲಯವು ಅನರ್ಹಗೊಳಿಸಿ ಆದೇಶ […]

Continue Reading

ಫಾದರ್ಸ್ ಡೇ ಪ್ರಯುಕ್ತ ವಿಶೇಷ ಕಾರ್ಯಕ್ರಮ ಆಯೋಜಿಸಿ ಸಂಭ್ರಮಿಸಿದ ಕಿಡ್ಜೀ ( KIDZEE ) ತಂಡ

ದೊಡ್ಡಬಳ್ಳಾಪುರ : ಮಗುವಿನ ಜೀವನದ ಪ್ರತಿ ಹಂತದಲ್ಲೂ ಶಕ್ತಿಯಾಗಿ ನಿಲ್ಲುವ ತಂದೆಯನ್ನು ಗೌರವಿಸಿ, ಸಂಭ್ರಮಿಸುವ ನಿಟ್ಟಿನಲ್ಲಿ ಫಾದರ್ಸ್ ಡೇ ಪ್ರಯುಕ್ತ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ ಎಂದು ಕಿಡ್ಜೀ ( KIDZEE )ಆಡಳಿತ ಮಂಡಳಿ ಮುಖ್ಯಸ್ಥರಾದ ಡಾ. ಸಂದೀಪ್ ತಿಳಿಸಿದರು. ನಗರದ ಖಾಸಗಿ ಭವನದಲ್ಲಿ ಸೌಭಾಗ್ಯ ಟ್ರಸ್ಟ್ ಸಹಯೋಗದೊಂದಿಗೆ ಕಿಡ್ಜೀ ( KIDZEE ) ಆಡಳಿತ ಮಂಡಳಿ ಆಯೋಜಿಸಿದ್ದ “ಫಾದರ್ಸ್ ಡೇ” ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಪ್ರತಿ ಮಗುವಿಗೂ ತನ್ನ ತಂದೆಯ ಹೀರೋ ಆಗಿರುತ್ತಾರೆ , ಸಾವಿರಾರು […]

Continue Reading

ಮಜರಾಹೊಸಹಳ್ಳಿ ಪಂಚಾಯತಿಯ ನೂತನ ಅಧ್ಯಕ್ಷರಾಗಿ ಕೆ ಸಿ ರುದ್ರಣಮ್ಮ ಮಂಜುನಾಥ್ ಆಯ್ಕೆ

ದೊಡ್ಡಬಳ್ಳಾಪುರ : ತಾಲೂಕಿನ ಮಜರಾಹೊಸಹಳ್ಳಿಪಂಚಾಯತಿ ಅಧ್ಯಕ್ಷರ ಚುನಾವಣೆ ನಡೆದಿದ್ದು ನೂತನ ಅಧ್ಯಕ್ಷರಾಗಿ ಕೆ ಸಿ ರುದ್ರಣಮ್ಮ ಮಂಜುನಾಥ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ .   18 ಸದಸ್ಯರ ಬಲ ಹೊಂದಿರುವ ಮಜರಾ ಹೊಸಹಳ್ಳಿ ಪಂಚಾಯಿತಿಯಲ್ಲಿ ಇಂದು ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿದ್ದು, ಬಿಜೆಪಿ ಬೆಂಬಲಿತ ಅಭ್ಯರ್ಥಿ ಕೆ ಸಿ ರುದ್ರಣಮ್ಮ ಮಂಜುನಾಥ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.     ನೂತನ ಅಧ್ಯಕ್ಷರಿಗೆ ಪುಷ್ಪಮಾಲೆ ನೀಡಿ ಸಿಹಿ ತಿನಿಸುವ ಮೂಲಕ ಸದಸ್ಯರು, ಸರ್ವ ಪಕ್ಷಗಳ ಮುಖಂಡರು ಶುಭ ಕೋರಿದರು. ಪಟಾಕಿ ಸಿಡಿಸುವ […]

Continue Reading