ಲಯನ್ಸ್‌ ಕ್ಲಬ್‌ನಿಂದ ಪರಿಸರಸ್ನೇಹಿ ಗಣೇಶೋತ್ಸವ ಅಭಿಯಾನ ಆರ್.ಎಲ್.ಜಾಲಪ್ಪ ಲಯನ್ಸ್‌ ಸಂಸ್ಥೆಯಿಂದ ಜೇಡಿಮಣ್ಣಿನ ಬಣ್ಣರಹಿತ 108 ಗೌರಿ, 108 ಗಣೇಶ ವಿಗ್ರಹಗಳ ಉಚಿತ ವಿತರಣೆ

ದೊಡ್ಡಬಳ್ಳಾಪುರ: ಈ ಬಾರಿಯ ಸ್ವರ್ಣಗೌರಿ ವ್ರತ ಮತ್ತು ಗಣೇಶ ಚತುರ್ಥಿಯನ್ನು ಪರಿಸರಸ್ನೇಹಿಯಾಗಿ ಆಚರಿಸುವ ಅಭಿಯಾನಕ್ಕೆ ಇಲ್ಲಿನ ಲಯನ್ಸ್‌ ಕ್ಲಬ್ ಆಫ್‌ ದೊಡ್ಡಬಳ್ಳಾಪುರ ಆರ್.ಎಲ್.ಜಾಲಪ್ಪ ಇನ್ಸ್‌ಟಿಟ್ಯೂಷನ್ಸ್‌ನ ನೇತೃತ್ವದಲ್ಲಿ ಮಂಗಳವಾರ ಚಾಲನೆ ನೀಡಲಾಯಿತು. ಅಭಿಯಾನದ ಭಾಗವಾಗಿ ಜೇಡಿಮಣ್ಣಿನಿಂದ ತಯಾರಿಸಿದ ಬಣ್ಣರಹಿತ 108 ಗೌರಿ ಹಾಗೂ 108 ಗಣೇಶ ವಿಗ್ರಹಗಳನ್ನು ವಿಜಯಲಕ್ಷ್ಮಿ ಎಂಟರ್‌ ಪ್ರೈಸಸ್‌ ಸಹಯೋಗದಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ವಿತರಣೆ ಮಾಡಲಾಯಿತು. ಈ ವೇಳೆ ಮಾತನಾಡಿದ ಲಯನ್ಸ್‌ ಜಿಎಂಟಿ ಸಂಯೋಜಕ ಎಂ.ಆರ್.ಶ್ರೀನಿವಾಸ್‌, ಧಾರ್ಮಿಕ ಆಚರಣೆಗಳು ಪರಿಸರಸ್ನೇಹಿಯಾಗಿದ್ದಾಗ ಹೆಚ್ಚಿ ಅರ್ಥಪೂರ್ಣವಾಗುತ್ತವೆ. ಈ ನಿಟ್ಟಿನಲ್ಲಿ […]

Continue Reading

ಕೌಶಲ್ಯಾಭಿವೃದ್ದಿ ತರಬೇತಿಗೆ ಅರ್ಜಿ ಆಹ್ವಾನ

ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಎಸ್.ಸಿ.ಎಸ್.ಪಿ/ಟಿ.ಎಸ್.ಪಿ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಪ್ರವಾಸೋದ್ಯಮ/ಆತಿಥ್ಯ ಕ್ಷೇತ್ರದಲ್ಲಿ ಕೌಶಲ್ಯಾಭಿವೃದ್ದಿ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲು ಅರ್ಜಿ ಆಹ್ವಾನಿಸಲಾಗಿದೆ.   ಕಾರ್ಯಕ್ರಮದಲ್ಲಿ ಪರಿಶಿಷ್ಟ ಜಾತಿಯ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಆತಿಥ್ಯ ಕ್ಷೇತ್ರದ ಸಂಸ್ಥೆಗಳಾದ ಫುಡ್ ಕ್ರಾಫ್ಟ್ ಇನ್ಸ್ಟಿಟ್ಯೂಟ್ (FCI) ಹಾಗೂ ಇನ್ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್ಮೆಂಟ್ (IHM) ಬೆಂಗಳೂರು ರವರ ಮೂಲಕ ವಸತಿ ಸಹಿತ ಕಾರ್ಯಕ್ರಮವನ್ನು ಜಾರಿಗೊಳಿಸಲು ಉದ್ದೇಶಿಸಲಾಗಿದೆ.   ತರಬೇತಿ ಹಂತದಲ್ಲಿ […]

Continue Reading

ದೊಡ್ಡಬಳ್ಳಾಪುರದಲ್ಲಿ ಮಹಿಳಾ ಸಹಾಯವಾಣಿ ಕೇಂದ್ರ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಸಖಿ ಒನ್ ಸ್ಟಾಪ್ ಸೆಂಟರ್ ನಲ್ಲಿ ಮಹಿಳಾ ಸಹಾಯವಾಣಿ ಕೇಂದ್ರ ತೆರದಿದ್ದು, ಇದು ದಿನದ 24/7 ಕಾರ್ಯನಿರ್ವಹಿಸಲಿದೆ.     ಒತ್ತಡ ಮತ್ತು ಹಿಂಸೆಯಿಂದ ಬಾಧಿತಾರದ ಮಹಿಳೆಯರು ರಾಷ್ಟ್ರೀಯ ಟೋಲ್ ಫ್ರೀ ಸಂಖ್ಯೆ 181 ಕ್ಕೆ ಕರೆ ಮಾಡುವ ಮೂಲಕ ಸಖಿ ಒನ್ ಸ್ಟಾಪ್ ಸೆಂಟರ್ ನ ಸೇವೆ ಪಡೆಯಬಹುದಾಗಿದೆ.   ಸಖಿ ಒನ್ ಸ್ಟಾಪ್ ಸೆಂಟರ್ ಕೇಂದ್ರದಲ್ಲಿ ವೈದ್ಯಕೀಯ ನೆರವು, ಆಪ್ತ ಸಮಾಲೋಚನೆ, ಪೊಲೀಸ್ […]

Continue Reading

ದೊಡ್ಡಬಳ್ಳಾಪುರ : ರಾಜಘಟ್ಟ ಗ್ರಾಮ ವಿಶ್ವ ಪಾರಂಪರಿಕ ತಾಣವಾಗುವ ಎಲ್ಲಾ ಸಾಧ್ಯತೆಗಳು ಇವೆ : ಡಾ.ಎಲ್ ಹನುಮಂತಯ್ಯ

ದೊಡ್ಡಬಳ್ಳಾಪುರ : ತಾಲ್ಲೂಕಿನ ರಾಜಘಟ್ಟ ವಿಶ್ವ ಪಾರಂಪರಿಕ ತಾಣವಾಗುವ ಎಲ್ಲಾ ಸಾಧ್ಯತೆಗಳೂ ಇವೆ ಎಂದು ಹಿರಿಯ ಸಾಹಿತಿಗಳು ಹಾಗೂ ಮಾಜಿ ರಾಜ್ಯಸಭಾ ಸದಸ್ಯ ಡಾ ಎಲ್ ಹನುಮಂತಯ್ಯ ಅವರು ಅಭಿಪ್ರಾಯಪಟ್ಟರು.   ಇಂದು ನಗರದ ಪ್ರವಾಸಿ ಮಂದಿರದಲ್ಲಿ ರಾಜಘಟ್ಟದಲ್ಲಿ ನಡೆಯಲಿರುವ ಬೌದ್ಧ ನೆಲೆಯ ಉತ್ಖನನದ ಬಗ್ಗೆ ಬುದ್ಧನ ಅನುಯಾಯಿಗಳು, ಸಾಹಿತಿಗಳು, ಪತ್ರಕರ್ತರು ಹಾಗೂ ಸಂಶೋಧಕರ ಸಭೆಯಲ್ಲಿ ಅವರು ಮಾತನಾಡಿದರು ರಾಜಘಟ್ಟದಲ್ಲಿ ಉತ್ಖನನ ನಡೆದ ಇಪ್ಪತ್ತು ವರ್ಷಗಳ ನಂತರ ನಾವು ಮತ್ತೆ ಎಚ್ಚೆತ್ತಿದ್ದೇವೆ. ಉತ್ಖನನದ ರೂವಾರಿಗಳಾದ ಮೈಸೂರಿನ ಕೃಷ್ಣಮೂರ್ತಿ […]

Continue Reading

ಆಸ್ಪತ್ರೆಗೆ ಭೇಟಿ ನೀಡಿ ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಕೆಹೆಚ್ ‌. ಮುನಿಯಪ್ಪ

ದೇವನಹಳ್ಳಿ ಪಟ್ಟಣದ ಕೋಟೆ ಸರ್ಕಾರಿ ಬಾಲಕರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಟ್ಟಡದ ಕಿಟಕಿಯ ಸಜ್ಜಾ ಕುಸಿದು ಮೂವರು ವಿಧ್ಯಾರ್ಥಿಗಳು ಗಾಯಗೊಂಡಿದ್ದರು. Ad Ad ಮೂವರು ವಿಧ್ಯಾರ್ಥಿಗಳಲ್ಲಿ ಭುವನ್ ಎಂಬ ವಿದ್ಯಾರ್ಥಿ ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ,ದರ್ಶನ್ ಎಸ್ ಎಂ. ಎಂಬ ವಿದ್ಯಾರ್ಥಿ ಹಾಸ್ಮಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಆಸ್ಪತ್ರೆಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಹೆಚ್ ಮುನಿಯಪ್ಪ ಅವರು ಭೇಟಿ ನೀಡಿ ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿದರು. Ad ನಂತರ ವೈದ್ಯರೊಂದಿಗೆ ಚರ್ಚಿಸಿ ಸಂಪೂರ್ಣ ಮಾಹಿತಿ […]

Continue Reading

ಬಾಶೆಟ್ಟಿಹಳ್ಳಿ : ಗಣೇಶ ವಿಸರ್ಜನೆಗೆ ಕೃತಕ ಹೊಂಡ ನಿರ್ಮಾಣ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳುವಂತೆ ಮುಖ್ಯ ಆಡಳಿತ ಅಧಿಕಾರಿ ನರಸಿಂಹಮೂರ್ತಿ ಮನವಿ

ದೊಡ್ಡಬಳ್ಳಾಪುರ : ಪ್ರತಿ ಬಾರಿಯೂ ಗಣೇಶ ವಿಸರ್ಜನೆ ಸಂದರ್ಭದಲ್ಲಿ ಸಾರ್ವಜನಿಕರು ಕೆರೆ ಕುಂಟೆಗಳ ಬಳಿ ಹೋಗಿ ಅಪಾಯಕ್ಕೆ ಸಿಲುಕುವುದು ಸರ್ವೇಸಾಮಾನ್ಯವಾಗಿದೆ ಇದನ್ನು ತಪ್ಪಿಸಲು ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಅಧಿಕಾರಿಗಳು ವಿಶೇಷ ಕ್ರಮಕ್ಕೆ ಮುಂದಾಗಿದ್ದು. ಸಾರ್ವಜನಿಕರ ಅನುಕೂಲಕ್ಕಾಗಿ ಕೃತಕ ಗಣಪತಿ ವಿಸರ್ಜನಾ ಹೊಂಡ ನಿರ್ಮಿಸಲಾಗಿದೆ. ಬಾಶೆಟ್ಟಿಹಳ್ಳಿ ಕೆರೆ ಪಕ್ಕದಲ್ಲಿ 11 ಗ್ರಾಮಗಳ ಗಣಪತಿ ವಿಸರ್ಜನೆಗಾಗಿ ಪಟ್ಟಣ ಪಂಚಾಯಿತಿ ವತಿಯಿಂದ ಕೃತಕ ಹೋಂಡ ನಿರ್ಮಿಸಿದ್ದು, ಈ ವಿಸರ್ಜನಾ ಪ್ರಕ್ರಿಯೆಗೆ ಸತತ 9 ದಿನಗಳ ಕಾಲ ಸಾರ್ವಜನಿಕರ ಬಳಕೆಗೆ ಅನುವು […]

Continue Reading

ನಿರಂತರ ಅನ್ನದಾಸೋಹ ಸಮಿತಿಯೊಟ್ಟಿಗೆ ವಿಶೇಷ ದಿನಗಳನ್ನು ಆಚರಿಸಿ : ಸಂತೃಪ್ತಿಯ ಸಂಭ್ರಮಾಚರಣೆ ಮಾಡಿ – ವರುಣ್

ದೊಡ್ಡಬಳ್ಳಾಪುರ : 1981ನೇ ದಿನದ ನಿರಂತರ ಅನ್ನದಾಸೋಹ ಸಮಿತಿಯ ದಾನಿಗಳಾಗಿ ಬೀಡಿಕೆರೆ ವರುಣ್ ರವರು ಸಹಾಯ ಹಸ್ತ ನೀಡಿದ್ದು , ಹಸಿದವರಿಗೆ ಆಹಾರ ವಿತರಣೆ ಮಾಡುವ ಮೂಲಕ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಈ ಕುರಿತು ಮಾತನಾಡುತ್ತಾ ನಮ್ಮ ಜೀವನದ ವಿಶೇಷ ದಿನಗಳಲ್ಲಿ ನಾವು ಹಲವಾರು ಉತ್ತಮ ಕಾರ್ಯಗಳನ್ನು ಮಾಡಬೇಕೆಂದುಕೊಳ್ಳುತ್ತೇವೆ ಆದರೆ ಅದು ಕೇವಲ ಯೋಚನೆ ಎಷ್ಟು ಸೀಮಿತವಾಗುತ್ತದೆ ಆದರೆ ವಿಶೇಷ ದಿನಗಳನ್ನು ಮಲ್ಲೇಶ್ ನೇತೃತ್ವದ ನಿರಂತರ ಅನ್ನ ದಾಸೋಹ ಸಮಿತಿಯೊಟ್ಟಿಗೆ ಆಚರಣೆ ಮಾಡುವುದರಿಂದ ನೂರಾರು ಹಸಿದ ಬಡವರಿಗೆ […]

Continue Reading

ಕಲಾವಿದ ಸೂರ್ಯಕುಮಾರ್ ಹಲವರಿಗೆ ಮಾರ್ಗದರ್ಶಕರಾಗಿ, ಗುರುಗಳಾಗಿ ತಮ್ಮ ಬದುಕಿನಲ್ಲಿ ಸಾಕಷ್ಟು ಜನ ಕಲಾವಿದರಿಗೆ ಬದುಕು ಕಟ್ಟಿ ಕೊಟ್ಟ ಮಹಾನ್‌ ಮಾನವತಾವಾದಿ – ಚಂದ್ರಶೇಖರ್.ಡಿ.ಉಪ್ಪಾರ್

ದೊಡ್ಡಬಳ್ಳಾಪುರ: ಇತ್ತೀಚೆಗಷ್ಟೇ ಹೃದಯಾ ಘಾತ ದಿಂದ ಸಾವನ್ನಪ್ಪಿದ ಹೆಸರಾಂತ ಕಲಾವಿದ ಸೂರ್ಯಕುಮಾರ್ ರವರಿಗೆ ನುಡಿ ನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ನಾಮಫಲಕ ಕಲಾವಿದರ ಸಂಘದ ರಾಜ್ಯಾಧ್ಕಕ್ಷ ಗುರುರಾಜ್ ಕೃಷ್ಣಪ್ಪ ಭಾಗವಹಿಸಿ ಹಿರಿಯ ಕಲಾವಿದರು ಸಂಘಟನೆಯ ಮಾರ್ಗದರ್ಶಕರು ಆದ ಸೂರ್ಯಕುಮಾರ್ ರವರ ಸಾವು ನಮ್ಮ ಸಂಘಟನೆ ತುಂಬಲಾರದ ನಷ್ಟ, ಸಂಘಟನೆ ಪ್ರಾರಂಭದ ದಿನಗಳಿಂದಲೂ ಸಕ್ರಿಯರಾಗಿದ್ದ ಹಿರಿಯರು ಮತ್ತು ಕಲಾವಿದರ ಶ್ರೇಯೋಭಿಲಾಷಿಗಳು ನಮ್ಮಿಂದ ಭೌತಿಕವಾಗಿ ದೂರವಾದರೂ ಕಲಾವಿದರ ಬಗ್ಗೆ ಅವರಿಗಿದ್ದ ಕಾಳಜಿ ಮತ್ತು ದೇಯೋದ್ದೇಶಗಳು ಸದಾ ಜೀವಂತ […]

Continue Reading

ಬಹುತ್ವಕ್ಕಾಗಿ ನಾಗರಿಕ ಪ್ರಜ್ಞೆಯನ್ನು ಹೆಚ್ಚಿಸಬೇಕು – ಚಿಂತಕ ಡಾ.ರಹಮತ್ ತರೀಕೆರೆ

ಬಹುತ್ವ ಕರ್ನಾಟಕವನ್ನು ಸಮಾನತೆ ಮತ್ತು ಪ್ರಜಾಸತ್ತಾತ್ಮಕ ಪ್ರಜ್ಞೆಯ ಮೂಲಕ ಕಟ್ಟಬೇಕಾಗಿದೆ. ಏಕರೂಪೀಕರಣದ ಆತಂಕದ ಪ್ರಸ್ತುತ ಈ ಕಾಲಘಟ್ಟದಲ್ಲಿ ಬಹುತ್ವದ ಅಗತ್ಯವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಮತ್ತು ಸಂಸ್ಕೃತಿ ಚಿಂತಕ ಡಾ.ರಹಮತ್ ತರೀಕೆರೆ ತಿಳಿಸಿದರು.   ಅವರು ದೊಡ್ಡಬಳ್ಳಾಪುರ ನಗರದ ಆರ್.ಡಿ.ಕನ್ವೆನ್ಷನ್ ಹಾಲ್ ನಲ್ಲಿ ದೊಡ್ಡಬಳ್ಳಾಪುರ ಡಾ.ಡಿ.ಆರ್.ನಾಗರಾಜ್ ಬಳಗ ಮತ್ತು ಬೆಂಗಳೂರಿನ ಆಕೃತಿ ಪುಸ್ತಕ ಇವರ ಸಹಯೋಗದಲ್ಲಿ ಬಹುತ್ವ ಕರ್ನಾಟಕ ಲೇಖಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ನಮ್ಮ ಸಂಸ್ಕೃತಿ, ಪರಂಪರೆ ದೊರೆಯುವ […]

Continue Reading

ನಿಧನ ವಾರ್ತೆ : ದೇವನಹಳ್ಳಿ THO ಡಾ. ಸಂಜಯ್ ಇನ್ನಿಲ್ಲ

ದೇವನಹಳ್ಳಿ ತಾಲೂಕು ಆರೋಗ್ಯಧಿಕಾರಿ   (THO) ಡಾ.ಸಂಜಯ್ ( 52 ವರ್ಷ ) ಹೃದಯಾಘಾತದಿಂದ ವಿಧಿವಶರಾಗಿದ್ದಾರೆ     ವೈದ್ಯರ ಸಮಾವೇಶದಲ್ಲಿ ಭಾಗವಹಿಸಲು ಚನ್ನೈಗೆ ತೆರಳಿದ್ದ ಅವರಿಗೆ ಇಂದು ಸಂಜೆ 7.30 ರ ಸುಮಾರಿಗೆ ತೀವ್ರ ಸ್ವರೂಪದ ಹೃದಯಾಘಾತ ಸಂಭವಿಸಿದೆ ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.   ಪ್ರಸ್ತುತ ದೇವನಹಳ್ಳಿಯ ತಾಲ್ಲೂಕು ಆರೋಗ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಅವರು ಜಿಲ್ಲೆಯ ವೈದ್ಯಾಧಿಕಾರಿ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು ಡಾ.ಸಂಜಯ್ ಸದಾ ವೈದ್ಯರು, […]

Continue Reading