ರೈತರ ಭೂಮಿಗೆ ವೈಜ್ಞಾನಿಕ ಬೆಲೆ ನಿಗದಿ ಪಡಿಸಲು ಅಗ್ರಹ : ರೈತರ ಭೂಮಿಗೆ ಉತ್ತಮ ಬೆಲೆ ನೀಡದೇ ಇದ್ದಲ್ಲಿ ಭೂಮಿ ಮಾರಾಟ ಮಾಡುವುದಿಲ್ಲ – ಜಿ. ಲಕ್ಷ್ಮೀಪತಿ

ದೊಡ್ಡಬಳ್ಳಾಪುರ : ಕೆಐಡಿಬಿ ಅಧಿಕಾರಿಗಳು ರೈತರಿಗೆ ಹಲವಾರು ಭೂ ದಾಖಲೆಗಳನ್ನು ನೀಡುವಂತೆ ಸೂಚಿಸುವ ಮೂಲಕ ಮಧ್ಯವರ್ತಿಗಳ ಹಾವಳಿಗೆ ಅವಕಾಶ ಮಾಡಿಕೊಡುತ್ತಿದ್ದಾರೆ. ಭೂಮಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳು ತಾಲ್ಲೂಕು ಕಚೇರಿಯಲ್ಲೇ ಇರುವಾಗ ದಾಖಲೆ ನೀಡುವಂತೆ ರೈತರಿಗೆ ನೋಟಿಸ್ ನೀಡುವ ಅಗತ್ಯವಾದರು ಏನಿದೆ ಎಂದು ಕೆಪಿಸಿಸಿ ವಕ್ತಾರ ಜಿ. ಲಕ್ಷ್ಮೀಪತಿ ಆಗ್ರಹಿಸಿದರು ಅವರು ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೈಗಾರಿಕೆ ಸೇರಿದಂತೆ ಇತರೆ ಉದ್ದೇಶಗಳಿಗೆ ಸರ್ಕಾರ ರೈತರ ಕೃಷಿ ಭೂಮಿ ಸ್ವಾಧೀನ ಮಾಡಿಕೊಳ್ಳುವಾಗ ಕೇಂದ್ರ […]

Continue Reading

ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲ್ಲೂಕು ಪದಾಧಿಕಾರಿಗಳ ಆಯ್ಕೆ : ದೊಡ್ಡಬಳ್ಳಾಪುರ ತಾಲ್ಲೂಕು ಅಧ್ಯಕ್ಷರಾಗಿ ದಲಿತ ಮುಖಂಡರಾದ ರಾಮು ಆಯ್ಕೆ

ದೊಡ್ಡಬಳ್ಳಾಪುರ : ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕಿನ ನಗರ ಭಾಗದ ಪ್ರವಾಸಿ ಮಂದಿರದಲ್ಲಿ ಪ್ರೊಫೆಸರ್ ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದ ವತಿಯಿಂದ ತಾಲ್ಲೂಕು ಹಾಗೂ ಹೋಬಳಿ ಮಟ್ಟದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು ಕಾರ್ಯಕ್ರಮವನ್ನು ಬಾಬಾಸಾಹೇಬ್ ಅಂಬೇಡ್ಕರ್ ಹಾಗೂ ಪ್ರೊಫೆಸರ್ ಬಿ. ಕೃಷ್ಣಪ್ಪ ರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಉದ್ಘಾಟಿಸಲಾಯಿತು ಕರ್ನಾಟಕ ದಲಿತ ಸಂಘರ್ಷ ಸಮಿತಿ ದೊಡ್ಡಬಳ್ಳಾಪುರ ತಾಲ್ಲೂಕು ಘಟಕದ ನೂತನ ಅಧ್ಯಕ್ಷರಾಗಿ ತಾಲ್ಲೂಕಿನ ದಲಿತ ಮುಖಂಡ ರಾಮು […]

Continue Reading

ಮುನಿರಾಜು (ಚಿಕ್ಕಪ್ಪಿ)ಸಾರಥ್ಯದಲ್ಲಿ ಕರ್ನಾಟಕ ರಾಜ್ಯ ಮಹರ್ಷಿ ವಾಲ್ಮೀಕಿ ಎಸ್ ಟಿ ಸಮಿತಿ ರಚನೆ : ರಾಜ್ಯಾದ್ಯಂತ ನೊಂದವರ ಸಮಸ್ಯೆಗಳಿಗೆ ಸ್ಪಂದಿಸುವ ಭರವಸೆ ನೀಡಿದ ಸಮಿತಿ

ದೊಡ್ಡಬಳ್ಳಾಪುರ : ರಾಜ್ಯಾದ್ಯಂತ ಸಮಿತಿ ವತಿಯಿಂದ ಪರ್ಯಟನೆ ಮಾಡಿ ಸಮುದಾಯದ ಸಮಸ್ಯೆಗಳಿಗೆ ತ್ವರಿತವಾಗಿ ಸ್ವಂದಿಸಲಾಗುವುದು ಹಾಗೂ ನಗರಸಭೆ ಸದಸ್ಯ ಮುನಿರಾಜು (ಚಿಕ್ಕಪ್ಪಿ) ನೇತೃತ್ವದಲ್ಲಿ ಕರ್ನಾಟಕ ರಾಜ್ಯ ವಾಲ್ಮೀಕಿ ಮಹರ್ಷಿ ಎಸ್‌ಟಿ ಸಮಿತಿಯನ್ನು ನೋಂದಣಿ ಮಾಡಲಾಗಿದ್ದು, ಇಂದು ಅಧಿಕೃತವಾಗಿ ಘೋಷಣೆ ಮಾಡಲಾಗಿದೆ.   ಈ ಸಮಿತಿಯ ರಾಜ್ಯಾಧ್ಯಕ್ಷರಾಗಿ ಮುನಿರಾಜು (ಚಿಕ್ಕಪ್ಪಿ), ರಾಜ್ಯ ಉಪಾಧ್ಯಕ್ಷ ಕೇಬಲ್ ರಾಮಚಂದ್ರ, ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಕುಮಾರ್, ರಾಜ್ಯ ಖಜಾಂಚಿ ರಾಜಣ್ಣ, ಸಂಘಟನಾ ಕಾರ್ಯದರ್ಶಿ ಗಂಗರಾಜು, ಕಾನೂನು ಸಲಹೆಗಾರರಾಗಿ ಅಂಬರೀಶ್, ರಾಜ್ಯ ಸದಸ್ಯರನ್ನಾಗಿ ರಾಜಣ್ಣ, […]

Continue Reading

ನಾವು ಮಾಡುವ ಉತ್ತಮ ಕಾರ್ಯಗಳಿಂದಲೇ ನಮ್ಮನ್ನು ಗುರುತಿಸಬೇಕು – ದೀಪು ಗೌಡ

ಸೇವೆಯೇ ನಮ್ಮ ಗುರಿಯಾಗಿದ್ದು ನಾವು ಮಾಡುವ ಕಾರ್ಯದಿಂದಲೇ ಜನತೆ ನಮ್ಮನ್ನು ಗುರುತಿಸಬೇಕು.ಸದಾ ನನ್ನೊಂದಿಗೆ ಶ್ರಮಿಸುವ ನನ್ನ ಸ್ನೇಹಿತರೇ ನನ್ನ ಶಕ್ತಿ ಎಂದು ದೀಪು ಗೌಡ ತಿಳಿಸಿದರು ಯುವ ಜನತಾದಳ ಕಸಬಾ ಹೋಬಳಿ ಅಧ್ಯಕ್ಷರು, ಕರುನಾಡು ವಿಜಯ ಸೇನೆ ಬೆಂಗಳೂರು ಗ್ರಾಮಾಂತರ ಯುವ ಘಟಕದ ಜಿಲ್ಲಾಧ್ಯಕ್ಷರು , ಎನ್ ವಿ ಡಿ ಡೆವಲಪರ್ಸ್ ಅಂಡ್ ರಿಯಲ್ ಎಸ್ಟೇಟ್ ನ ಮಾಲೀಕರು ಹಾಗೂ ದೀಪು ಮಸಾಲಾ ಕಂಪನಿ ಸಂಸ್ಥಾಪಕರಾದ ದೀಪು ಗೌಡ ರವರ ಹುಟ್ಟು ಹಬ್ಬವನ್ನು ಸ್ನೇಹಿತರು ಹಾಗೂ ಅಭಿಮಾನಿಗಳ […]

Continue Reading

ಪ್ರಸಿದ್ಧ ಘಾಟಿ ಸುಬ್ರಮಣ್ಯ ಜಾತ್ರಾ ಮಹೋತ್ಸವ ಜನವರಿ 16 ಕ್ಕೆ ಫಿಕ್ಸ್ : ರಾತ್ರಿ 8:30ರವರೆಗೂ ಭಕ್ತರಿಗೆ ದೇವರ ದರ್ಶನ ಪಡೆಯಲು ವ್ಯವಸ್ಥೆ

ದೊಡ್ಡಬಳ್ಳಾಪುರ : ದಕ್ಷಿಣ ಭಾರತದ ಸುಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ದೊಡ್ಡಬಳ್ಳಾಪುರ ತಾಲ್ಲೂಕಿನ ತೂಬಗೆರೆ ಹೋಬಳಿಯ ಶ್ರೀ ಘಾಟಿ ಕ್ಷೇತ್ರದಲ್ಲಿ ನೆಲೆಸಿರುವ ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಪ್ರಸಿದ್ಧ ಬ್ರಹ್ಮರಥೋತ್ಸವ ಕಾರ್ಯಕ್ರಮವು ಜನವರಿ 16 ರಂದು ಮಂಗಳವಾರ ಮಧ್ಯಾಹ್ನ 12-15ರಿಂದ 12-30 ಗಂಟೆಗೆ ಈ ಸಲ್ಲುವ ಶುಭ ಮೇಷ ಲಗ್ನದ ಮುಹೂರ್ತದಲ್ಲಿ ನಡೆಯಲಿದೆ.   ಷಷ್ಠಿಯ ದಿನದಂದು ದೇವಸ್ಥಾನದಲ್ಲಿ ಮುಂಜಾನೆ 3ರಿಂದ ಪೂಜಾ ಕಾರ್ಯಗಳು ಆರಂಭವಾಗೊಳ್ಳಲಿವೆ. ಅಭಿಷೇಕ ಕಾರ್ಯಗಳು ನೆರವೇರಲಿದೆ. ಗರ್ಭಗುಡಿಯಲ್ಲಿನ ಸುಬ್ರಹ್ಮಣ್ಯ ಸ್ವಾಮಿ ಹಾಗೂ ಲಕ್ಷ್ಮೀನರಸಿಂಹಸ್ವಾಮಿ ಮೂರ್ತಿಗಳಿಗೆ ಪ್ರಾತಃ […]

Continue Reading

ಭೈರಸಂದ್ರಪಾಳ್ಯ ಗ್ರಾಮದಲ್ಲಿ ಟೊಮೊಟೊ ಕಳ್ಳತನ : ಬರೋಬ್ಬರಿ 2 ಟನ್ ಟೊಮೊಟೊ ಕದ್ದ ಕಳ್ಳರು

ದೊಡ್ಡಬಳ್ಳಾಪುರ : ಟೊಮೆಟೊ ದರ ಮತ್ತೆ ಏರಿಯಾಗುತ್ತಿದೆ, ಇದರ ಜೊತೆಗೆ ಮತ್ತೆ ಟೊಮೊಟೊ ಕಳವು ಸಹ ಪ್ರಾರಂಭವಾಗಿದೆ, ತಾಲ್ಲೂಕಿನ ಬೈರಸಂದ್ರ ಪಾಳ್ಯದ ರೈತ ದಿವಾಕರ್ ರವರ ತೋಟದಲ್ಲಿ ಘಟನೆ ಸಂಭವಿಸಿದೆ. ರೈತ ದಿವಾಕರ್ ಖಾಸಗಿ ಕಂಪನಿಯಿಂದ ಅರ್ಡರ್ ಪಡೆದಿದ್ದರು ಇಂದು ಬೆಳಗ್ಗೆ ಹಣ್ಣುಗಳನ್ನು ಕಿತ್ತು ಮಾರುಕಟ್ಟೆಗೆ ಹಾಕಲು ಸಿದ್ಧತೆ ನಡೆಸಿದ್ದರು ಆದರೆ ರಾತ್ರೋ ರಾತ್ರಿ ತೋಟಕ್ಕೆ ನುಗ್ಗಿದ ಕಳ್ಳರು ಟೊಮೊಟೊ ಗಿಡಗಳಿಂದ 2 ಟನ್ ಟೊಮೆಟೊ ಕಿತ್ತು ಹಣ್ಣಿನ್ನೊಂದಿಗೆ ಪರಾರಿಯಾಗಿದ್ದಾರೆ. ಟೊಮೆಟೊ ಬೆಳೆಯ ತೋಟಕ್ಕೆ ನುಗ್ಗಿದ ಕಳ್ಳರ […]

Continue Reading