ಈ ಸುಕ್ಷೇತ್ರವು ಮುಂದೆ ಸಾವಿರಾರು ಭಕ್ತಾದಿಗಳ ಬರುವಿಕೆಯಿಂದ ಪ್ರಕಾಶಮಾನವಾಗಿ ಬೆಳಗಲಿದೆ – ಗುರುದೇವ್ ಗುರೂಜಿ

ಪರಮ ಪೂಜ್ಯ ಶಾಂತಮುನಿ ದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಫೆಬ್ರವರಿ 15 ಮತ್ತು 16ರಂದು ಶ್ರೀ ಕ್ಷೇತ್ರ ಪುಣ್ಯಧಾಮದಲ್ಲಿ ಶ್ರೀ ಜಗದ್ಗುರು ಹಸರಂಗಿ ಅಜ್ಜಯ್ಯನವರ ಹಾಗೂ ಬಾಲ ತ್ರಿಪುರ ಸುಂದರಿ ಅಮ್ಮನವರ ವಿಗ್ರಹ ಪ್ರಾಣಾ ಪ್ರತಿಷ್ಠಾಪನಾ ಕಾರ್ಯಕ್ರಮವನ್ನು ರಾಜ್ಯದ ಹಲವು ಮಠಾಧಿಪತಿ ಹಾಗೂ ಸ್ವಾಮೀಜಿಗಳ ನೇತೃತ್ವದಲ್ಲಿ ನೆರವೇರಿಸಲಾಗಿದೆ ಎಂದು ಶ್ರೀ ಕ್ಷೇತ್ರ ಪುಣ್ಯಧಾಮದ ಪೀಠಾಧ್ಯಕ್ಷರಾದ ಗುರುದೇವ್ ಗುರೂಜಿ ತಿಳಿಸಿದರು ದೊಡ್ಡಬಳ್ಳಾಪುರ ತಾಲ್ಲೂಕಿನ ಲಕ್ಕಸಂದ್ರ ಶ್ರೀ ಕ್ಷೇತ್ರ ಪುಣ್ಯಧಾಮದಲ್ಲಿ ಆಯೋಜನೆ ಮಾಡಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಭಕ್ತರ […]

Continue Reading

ಕಾಡನೂರು ಕೈಮರ ಕ್ರಾಸ್ ಬಳಿ ಭೀಕರ ಅಪಘಾತ : ಗಾಯಾಳುಗಳು ಆಸ್ಪತ್ರೆಗೆ ದಾಖಲು

ದೊಡ್ಡಬಳ್ಳಾಪುರ ತಾಲೂಕಿನ ನೆಲಮಂಗಲ ಹೆದ್ದಾರಿಯ ಕಾಡನೂರು ಕೈಮರ ಮಾರ್ಗದಲ್ಲಿ ಸರಕು ಸಾಗಣೆ ಮಾಡುವ ಎರಡು ಟಾಟಾ ವಾಹನಗಳು ಮುಖಾಮುಖಿ ಡಿಕ್ಕಿಯಾಗಿವೆ . ವಾಹನಗಳ ರಭಸಕ್ಕೆ ಗಾಡಿಗಳ ಮುಂಭಾಗ ಸಂಪೂರ್ಣ ಹಾಳಾಗಿದ್ದು ಓರ್ವ ಚಾಲಕನಿಗೆ ಕಾಲು ಮುರಿದಿದೆ. ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದ ಚಾಲಕನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಸರಕು ಸಾಗಣೆ ಮಾಡುವ ವಾಹನಗಳು ಅತ್ಯಂತ ವೇಗವಾಗಿ ಚಲಾಯಿಸುತ್ತಿದ್ದ ಕಾರಣ ಚಾಲಕನ ನಿಯಂತ್ರಣ ತಪ್ಪಿ ಮುಖಮುಖಿ ಡಿಕ್ಕಿಯಾಗಿದೆ ಎಂದು ತಿಳಿದುಬಂದಿದೆ . ಸ್ಥಳೀಯ ಸಾರ್ವಜನಿಕರ ಸಮಯ […]

Continue Reading

ಮಾಜಿ ಯೋಧರಿಂದ ಪ್ರತ್ಯೇಕ ಸೈನಿಕ್ ಬೋರ್ಡ್ ಗೆ ಮನವಿ : ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಶೀಘ್ರ ಪರಿಹಾರಕ್ಕೆ ಚಿಂತನೆ – ಡಿಸಿಎಂ ಡಿಕೆ ಶಿವಕುಮಾರ್

ಯಲಹಂಕ : ಕೇಂದ್ರದ ಅಡಿಯಲ್ಲಿ ಶ್ರಮಿಸುವ ಯೋಧರು ಇಂದು ರಾಜ್ಯ ಸರ್ಕಾರಗಳಿಗೆ ಮನವಿ ಸಲ್ಲಿಸುವ ಪರಿಸ್ಥಿತಿ ಎದುರಾಗಿದೆ ಇದು ಕೇಂದ್ರ ಸರ್ಕಾರದ ವೈಫಲ್ಯ ,ದೇಶ ಕಾಯುವ ಯೋಧ ತನ್ನ ಸೌಲಭ್ಯಗಳಿಗಾಗಿ ಪರದಾಡುವ ಪರಿಸ್ಥಿತಿ ಎದುರಾಗಿದೆ . ಸದಾ ದೇಶ ಸೇವೆಯಲ್ಲಿ ಮುಳುಗಿರುವ ಯೋಧ ನಿವೃತ್ತಿ ನಂತರ ತನ್ನ ಸೌಲಭ್ಯಗಳನ್ನು ಬೇಡಿ ಪಡೆಯುವ ಈ ಪರಿಸ್ಥಿತಿ ಬದಲಾಗಬೇಕಿದೆ. ಬೆಂಗಳೂರು ನಗರ ಅಭಿವೃದ್ಧಿ ಜವಾಬ್ದಾರಿ ಹೊತ್ತಿರುವ ನಾನು ನಗರ ಅಭಿವೃದ್ಧಿ ಇಲಾಖೆಯಲ್ಲಿ ಯೋಧರಿಗೆ ನೀಡಬಹುದಾದ ಹುದ್ದೆಗಳನ್ನು ಕುರಿತು ಚರ್ಚಿಸಿ ಉತ್ತಮ […]

Continue Reading

ತಾಲ್ಲೂಕಿನ ಸಕ್ಕರೆ ಗೊಲ್ಲಹಳ್ಳಿ ತಲುಪಿದ ಸಂವಿಧಾನ ಜಾಗೃತಿ ಜಾಥಾ : ಗ್ರಾಮಸ್ಥರಿಂದ ಭರ್ಜರಿ ಸ್ವಾಗತ

75 ನೇ ಅಮೃತ ಮಹೋತ್ಸವ ಅಂಗವಾಗಿ ಕರ್ನಾಟಕ ಸರ್ಕಾರ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮವನ್ನು ಪ್ರತಿ ಪಂಚಾಯಿತಿ ಮಟ್ಟದಲ್ಲಿ ಆಯೋಜನೆ ಮಾಡಿದ್ದು ಸಾಂಕೇತಿಕವಾಗಿ ಸಂವಿಧಾನ ರಥದ ಆಯೋಜನೆ ಮಾಡಿದ್ದು. ಇಂದು ದೊಡ್ಡಬಳ್ಳಾಪುರ ತಾಲ್ಲೂಕಿನ ಸಕ್ಕರೆ ಗೊಲ್ಲಹಳ್ಳಿ ಗ್ರಾಮ ಪಂಚಾಯಿತಿಗೆ ಸಂವಿಧಾನ ಜಾಗೃತಿ ಜಾಥಾ ವಾಹನ ಬಂದಿದ್ದು ಸ್ಥಳೀಯರು ಕುಂಭ ಸಹಿತ, ವಾದ್ಯ ,ನೃತ್ಯ ಹಾಗೂ ವೇದಿಕೆ ಕಾರ್ಯಕ್ರಮದ ಮೂಲಕ ಅದ್ಧೂರಿ ಸ್ವಾಗತ ಕೋರಿದರು. ಈ ಸಂದರ್ಭದಲ್ಲಿ ಜೈ ಭೀಮ್ ಹರ್ಷೋದ್ಗಾರ ಮುಗಿಲು ಮುಟ್ಟಿತು. ಸಂವಿಧಾನ ಜಾಗೃತಿ ಕುರಿತು […]

Continue Reading

ಫೆಬ್ರವರಿ 14ರಂದು ಮಾಜಿ ಯೋಧರ ಬೃಹತ್ ಸಮಾವೇಶ : ಅರೆಸೇನಾ ಪಡೆಗಳ ಪ್ರತ್ಯೇಕ ಬೋಡ್ ಸ್ಥಾಪಿಸುವಂತೆ ಒತ್ತಾಯ

ಪುಲ್ವಾಮಾ ದಾಳಿಯಲ್ಲಿ ದೇಶಕ್ಕಾಗಿ ಮಡಿದ ಯೋಧರ ಸವಿನೆನಪಿನಲ್ಲಿ ಮಾಜಿ ಅರೇಸೇನಾಪಡೆಗಳ ಮಾಜಿ ಯೋಧರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಬೃಹತ್ ಸಮಾವೇಶ ಆಯೋಜನೆ ಮಾಡಿದ್ದು ಸದರಿ ಕಾರ್ಯಕ್ರಮಕ್ಕೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ,ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಸೇರಿದಂತೆ ರಾಜ್ಯದ ಹಲವು ನಾಯಕರಿಗೆ ಆಹ್ವಾನ ನೀಡಲಾಗಿದೆ ಎಂದು ಐಜಿ ಅರ್ಕೇಶ್ ತಿಳಿಸಿದರು. ಕೇಂದ್ರೀಯ ಅರಸೇನಾ ಪಡೆಗಳ ಮಾಜಿ ಯೋಧರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಯಲಹಂಕದಲ್ಲಿ ಆಯೋಜನೆ ಮಾಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೇಂದ್ರೀಯ ಅರಸೇನಾ ಪಡೆಗಳ ಮಾಜಿ ಯೋಧರ ಕ್ಷೇಮಾಭಿವೃದ್ಧಿ […]

Continue Reading

ನಮ್ಮೂರು ನಮ್ಮ ಕೆರೆ ಅಭಿಯಾನದ ಅಡಿಯಲ್ಲಿ ಅಂತರಹಳ್ಳಿ ಕೆರೆಗೆ ಮರುಜೀವ

ಎಲ್ಲೆಡೆಯೂ ನೀರಿನ ಅಭಾವ ತಾಂಡವವಾಡುತ್ತಿದ್ದು.ನಮ್ಮೂರು ನಮ್ಮ ಕೆರೆ ಅಭಿಯಾನದ ಅಡಿಯಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕಿನ ಅಂತರಹಳ್ಳಿ ಗ್ರಾಮದ ಕೆರೆ ಪೂರ್ಚೆತನಕ್ಕೆ ಯೋಜನೆ ರೂಪಿಸಲಾಗಿದೆ. ನೀರಿನ ಬವಣೆ ನೀಗಿಸಲು ಹಾಗೂ ಅಂತರ್ಜಲ ಮಟ್ಟವನ್ನು ಸುಧಾರಿಸುವ ಸಲುವಾಗಿ ಈ ಕಾರ್ಯಕ್ರಮವನ್ನು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಆಯೋಜನೆ ಮಾಡಲಾಗಿದೆ.ರೈತರ ವ್ಯವಸಾಯಕ್ಕೆ ಕೆರೆಗಳು ಅತ್ಯಂತ ಸಹಕಾರಿಯಾಗಲಿವೆ ಎಂದು ಜಿಲ್ಲಾ ನಿರ್ದೇಶಕರಾದ ಉಮರಬ್ಬ ತಿಳಿಸಿದರು .   ಕಾರ್ಯಕ್ರಮವನ್ನು ದೀಪ ಬೆಳಗುವ ಮೂಲಕ ಉದ್ಘಾಟಿಸಲಾಯಿತು .ಈ ಸಂದರ್ಭದಲ್ಲಿ ಮಾತನಾಡಿದ ಅವರು ಶ್ರೀ ಕ್ಷೇತ್ರ ಧರ್ಮಸ್ಥಳ […]

Continue Reading

ಬಿಜೆಪಿಯ 10 ವರ್ಷದ ಸಾಧನೆಯನ್ನು ಗೋಡೆ ಬರಹ ಹಾಗೂ ಕರಪತ್ರ ಮನೆ ಮನೆಗೆ ತಲುಪಿಸುವ ಮೂಲಕ ಗ್ರಾಮ ಚಲೋ ಅಭಿಯಾನ

ದೊಡ್ಡಬಳ್ಳಾಪುರ : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಸಾಧನೆಯನ್ನು ಗೋಡೆ ಬರಹ ಹಾಗೂ ಕರಪತ್ರ ಹಂಚುವ ಮೂಲಕ ಗ್ರಾಮಚಲೋ ಅಭಿಯಾನ ಪ್ರಾರಂಭಿಸಿದ್ದೇವೆ .ಸ್ಥಳೀಯವಾಗಿ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರೆಯುತ್ತಿರುವುದು ಸಂತಸ ತಂದಿದೆ ಎಂದು ಸ್ಥಳೀಯ ಮುಖಂಡರಾದ ರಮೇಶ್ ತಿಳಿಸಿದರು   ರಾಜೀವ್ ಗಾಂಧಿ ಆಶ್ರಯ ಬಡಾವಣೆ 72 ನೇ ಬೂತ್ ನಲ್ಲಿ ಕೇಂದ್ರ ಸರ್ಕಾರದಿಂದ ದೇಶದ ಜನತೆಗೆ ನೀಡಿರುವ ವಿವಿಧ ಯೋಜನೆ ಸೇರಿದಂತೆ ಪ್ರಧಾನಿ ನರೇಂದ್ರ ಮೋದಿ ಜೀ ಯವರು ತೆಗೆದುಕೊಂಡಿರುವ ಪ್ರಮುಖ ನಿರ್ಧಾರಗಳು ಮತ್ತು […]

Continue Reading

2ನೇ ವರ್ಷದ ವಾರ್ಷಿಕೋತ್ಸವ ಆಚರಣೆ : ವಿಶೇಷ ಅಲಂಕಾರದೊಂದಿಗೆ ಕಂಗೊಳಿಸಿದ ಹಾಡೋನಹಳ್ಳಿ ಚೌಡೇಶ್ವರಿ ದೇವಾಲಯ

Doddaballapur : ದೇವಾಲಯ ನಿರ್ಮಾಣ ಮಾಡಿ 2 ವರ್ಷವಾಗಿದೆ . ಸಾವಿರಾರು ಭಕ್ತಾದಿಗಳು ದಿನನಿತ್ಯ ತಾಯಿಯ ದರ್ಶನ ಪಡೆಯುತ್ತಿದ್ದಾರೆ .ನಿತ್ಯ ಅನ್ನದಾಸೋಹ ಕಾರ್ಯಕ್ರಮ ನಡೆಯುತ್ತಿದ್ದು ದಿನದಿಂದ ದಿನಕ್ಕೆ ಬರುವ ಭಕ್ತಾದಿಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ನಾರಾಯಣಪ್ಪ ತಿಳಿಸಿದರು ದೊಡ್ಡಬಳ್ಳಾಪುರ ತಾಲ್ಲೂಕಿನ ಆಡೋನಳ್ಳಿ ಗ್ರಾಮದಲ್ಲಿ ನಿರ್ಮಿಸಲಾಗಿರುವ ಚೌಡೇಶ್ವರಿ ದೇವಸ್ಥಾನದ ಎರಡನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ವಿಶೇಷವಾಗಿ ಸಾಮೂಹಿಕ ಕುಂಕುಮಾರ್ಚನೆ , ಭಜನೆ, ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ದೇವಾಲಯದ ಆಡಳಿತ ಮಂಡಳಿ ಹಮ್ಮಿಕೊಂಡಿದೆ ಈ ಕುರಿತು ಮಾತನಾಡಿದ ಅವರು ದೇವಾಲಯದ […]

Continue Reading

ಪೊಲೀಸ್ ಇಲಾಖೆ ವತಿಯಿಂದ ಶಾಂತಿ ಸಭೆ : ಸೌಹಾರ್ದಯುತ ಜೀವನ ಸಾಗಿಸಲು ಸ್ಥಳೀಯ ಮುಖಂಡರ ನಿರ್ಧಾರ

ದೊಡ್ಡಬಳ್ಳಾಪುರ: ಈ ಹಿಂದೆ ಸ್ಥಳೀಯವಾಗಿ ಹಾಕಲಾಗಿದ್ದ ಬ್ಯಾನರ್ ಹರಿದು ಕಿಡಿಗೇಡಿಗಳು ಪುಂಡಾಟ ಮೆರೆದಿದ್ದರು. ಈ ಹಿನ್ನಲೆ ಪೊಲೀಸ್ ಇಲಾಖೆ ವತಿಯಿಂದ ಸ್ಥಳೀಯವಾಗಿ ಶಾಂತಿ ಸಭೆ ಆಯೋಜನೆ ಮಾಡಲಾಗಿದ್ದು. ಸಭೆಯಲ್ಲಿ ಭಾಗವಹಿಸಿದ ಎಲ್ಲಾ ಮುಖಂಡರು ಇನ್ನು ಮುಂದೆ ಸೌಹಾರ್ದಯುತವಾಗಿ ಜೀವನ ಸಾಗಿಸಲು ನಿರ್ಧರಿಸಿದ್ದಾರೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ತಾಲ್ಲೂಕು ಘಟಕದ ಅಧ್ಯಕ್ಷ ರಾಮು ತಿಳಿಸಿದರು   ದೊಡ್ಡಬಳ್ಳಾಪುರ ತಾಲ್ಲೂಕು ಕಸಬಾ ಹೋಬಳಿಯ ನೆರಳೇಘಟ್ಟ ಗ್ರಾಮದಲ್ಲಿ ಪೊಲೀಸ್ ಇಲಾಖೆ ವತಿಯಿಂದ ಶಾಂತಿ ಸಭೆ ಆಯೋಜನೆ ಮಾಡಲಾಗಿತ್ತು. ಈ […]

Continue Reading

ಶ್ರೀ ಕ್ಷೇತ್ರ ಪುಣ್ಯಧಾಮದಲ್ಲಿ ಶ್ರೀ ಗುರುದೇವ್ ಗುರೂಜಿ ದಿವ್ಯ ಸಾನಿಧ್ಯದಲ್ಲಿ ಕಾರ್ಯಕ್ರಮ : ಫೆಬ್ರವರಿ 15 ಮತ್ತು 16ರಂದು ವಿಗ್ರಹಗಳ ಪ್ರಾಣ ಪ್ರತಿಷ್ಠಾಪನೆ

ಪರಮ ಪೂಜ್ಯ ಶಾಂತಮುನಿ ದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಫೆಬ್ರವರಿ 15 ಮತ್ತು 16ರಂದು ಶ್ರೀ ಕ್ಷೇತ್ರ ಪುಣ್ಯಧಾಮದಲ್ಲಿ ಶ್ರೀ ಜಗದ್ಗುರು ಹಸರಂಗಿ ಅಜ್ಜಯ್ಯನವರ ಹಾಗೂ ಬಾಲ ತ್ರಿಪುರ ಸುಂದರಿ ಅಮ್ಮನವರ ವಿಗ್ರಹ ಪ್ರಾಣಾ ಪ್ರತಿಷ್ಠಾಪನಾ ಕಾರ್ಯಕ್ರಮ ನೆರವೇರಲಿದೆ ಎಂದು ಶ್ರೀ ಕ್ಷೇತ್ರ ಪುಣ್ಯಧಾಮದ ಪೀಠಾಧ್ಯಕ್ಷರಾದ ಗುರುದೇವ್ ಗುರೂಜಿ ತಿಳಿಸಿದರು ದೊಡ್ಡಬಳ್ಳಾಪುರ ತಾಲ್ಲೂಕಿನ ಲಕ್ಕಸಂದ್ರ ಶ್ರೀ ಕ್ಷೇತ್ರ ಪುಣ್ಯಧಾಮದಲ್ಲಿ ಆಯೋಜನೆ ಮಾಡಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಭಕ್ತರ ಉದ್ಧಾರಕ್ಕಾಗಿಯೇ ಇರುವ ಜಗದ್ಗುರು ಶ್ರೀ ಹಸರಂಗಿ ಅಜ್ಜಯ್ಯನವರ […]

Continue Reading