*ಕರ್ನಾಟಕ ವಿಧಾನ ಪರಿಷತ್ ಚುನಾವಣೆ : ತಾಲ್ಲೂಕಿನ ಮುಖಂಡರೊಂದಿಗೆ ಪೂರ್ವಭಾವಿ ಸಭೆ ನಡೆಸಿದ ಕಾಂಗ್ರೆಸ್ ಅಭ್ಯರ್ಥಿ ರಾಮೋಜಿ ಗೌಡ*

ದೊಡ್ಡಬಳ್ಳಾಪುರ ಮೇ 05 : ವಿಧಾನ ಪರಿಷತ್ ಚುನಾವಣೆಯ ಹಿನ್ನೆಲೆಯಲ್ಲಿ ಪೂರ್ವಭಾವಿ ಸಭೆ ನಡೆಸಿದ್ದೇವೆ. ಮುಖಂಡರು ಹಾಗೂ ಪದವೀಧರರ ಉತ್ತಮ ಸ್ಪಂದನೆ ದೊರೆತಿದ್ದು ಈ ಬಾರಿ ಚುನಾವಣೆಯಲ್ಲಿ ಗೆಲ್ಲುವ ಭರವಸೆ ಇದೆ ಎಂದು ಬೆಂಗಳೂರು ಪದವೀಧರ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಾಮೋಜಿ ಗೌಡ ತಿಳಿಸಿದರು .     ನಗರದ ಖಾಸಗಿ ಭವನದಲ್ಲಿ ಆಯೋಜನೆ ಮಾಡಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಈಗಾಗಲೇ 2012 ಮತ್ತು 2018 ರಲ್ಲಿ ಬೆಂಗಳೂರು ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಕೆಪಿಸಿಸಿ […]

Continue Reading

*ದೊಡ್ಡಬಳ್ಳಾಪುರ : ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ*

ದೊಡ್ಡಬಳ್ಳಾಪುರ ಮೇ 05 ( ವಿಜಯಮಿತ್ರ ) : ಕನ್ನಡ ಭಾಷೆ ಮತ್ತು  ಸಾಹಿತ್ಯದ  ಅನನ್ಯತೆಯನ್ನು  ಉಳಿಸುವ, ಬೆಳೆಸುವ  ಮಹಾದಾಸೆಯಿಂದ ಸ್ವಾತಂತ್ರ್ಯ ಪೂರ್ವದಲ್ಲೆ  ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆಯಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಪ್ರೊ.ಕೆ.ಆರ್.ರವಿಕಿರಣ್ ತಿಳಿಸಿದರು.   ‌‌ಅವರು  ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ  ಡಾ.ರಾಜ್ ಕುಮಾರ್ ಕಲಾಮಂದಿರದಲ್ಲಿ  ನಡೆದ *ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ* ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.  ಕನ್ನಡ ಭಾಷಿಕರು  ಆಡಳಿತಾತ್ಮಕವಾಗಿ […]

Continue Reading

*ರೈತರ ಹೋರಾಟಕ್ಕೆ ಮಣಿದ ಕೆಐಎಡಿಬಿ : ನ್ಯಾಯಾಲಯದಲ್ಲಿ ಭೂ ಪರಿಹಾರವನ್ನು ಠೇವಣಿ ಮಾಡಲು ಒಪ್ಪಿದ ಕೆಐಎಡಿಬಿ*

ಬೆಂಗಳೂರು,ಮೇ 04 (ವಿಜಯಮಿತ್ರ ): ದೇವನಹಳ್ಳಿ ತಾಲ್ಲೂಕು, ಕುಂದಾಣ ಹೋಬಳಿಗೆ ಸೇರಿದ ದೊಡ್ಡಗೊಲ್ಲಹಳ್ಳಿ ಮತ್ತು ಚಪ್ಪರದಹಳ್ಳಿ ಗ್ರಾಮಗಳ ವ್ಯಾಪ್ತಿಯಲ್ಲಿ ಕೈಗಾರಿಕೆ ಸ್ಥಾಪನೆಗಾಗಿ ಫಾಕ್ಸ್ ಕಾನ್ ಕಂಪನಿಗೆ ಭೂಮಿ ಮಂಜೂರಾಗಿದ್ದು, ಸಂಬಂಧಿಸಿದ ಭೂ ಪರಿಹಾರವನ್ನು ನ್ಯಾಯಾಲಯದಲ್ಲಿ ಠೇವಣಿ ಇರಿಸಲಾಗುವುದು ಎಂದು ಕೆಐಎಡಿಬಿ ಸಿಇಓ ಡಾ. ಮಹೇಶ ಅವರು ಶುಕ್ರವಾರ ತಿಳಿಸಿದ್ದಾರೆ. ಈ ಗ್ರಾಮಗಳಲ್ಲಿ ಕಂಪನಿಗೆ ಮಂಜೂರಾಗಿರುವ ಭೂಮಿಗೆ ಭೂಸ್ವಾಧೀನ ಅಧಿಕಾರಿಗಳು ಮತ್ತು ಪೊಲೀಸ್ ಇಲಾಖೆಯ ಸಹಕಾರ ಪಡೆದು ಫೆನ್ಸಿಂಗ್ ಮಾಡಲು ಕ್ರಮ ತೆಗೆದುಕೊಳ್ಳಲಾಗುವುದು ಎಂದೂ ಅವರು ಹೇಳಿದ್ದಾರೆ. ದೇವನಹಳ್ಳಿ […]

Continue Reading

*ಕೆಐಎಡಿಬಿ ವಿರುದ್ಧ ರೈತರ ಹೋರಾಟ : ಪರಿಹಾರ ಧನ ಬಿಡುಗಡೆಗೊಳಿಸುವಂತೆ ಅಗ್ರಹ*

ಮೇ 03 ( ವಿಜಯಮಿತ್ರ ) : ದೇವನಹಳ್ಳಿ ತಾಲ್ಲೂಕಿನ ದೊಡ್ಡಗೊಲ್ಲಹಳ್ಳಿ ಬಳಿ ನಿರ್ಮಾಣವಾಗುತ್ತಿರುವ ಬೃಹತ್ ಐಟಿ ಪಾರ್ಕ್ ಗೆ ಕೆಐಎಡಿಬಿ ನೂರಾರು ಎಕರೆ ಜಮೀನನ್ನು ವಶಕ್ಕೆ ಪಡೆದಿದೆ. ಆದರೆ 30 ಎಕರೆಗಳ ಫಲವತ್ತಾದ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡಿರುವ ಕೆಐಎಡಿಬಿ ಪರಿಹಾರದ ಹಣ ನೀಡದೆ ವಂಚಿಸುತ್ತಿದೆ ಎಂದು ಆರೋಪಿಸಿ ರೈತರು ಜಮೀನಿನಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.   ದೇವನಹಳ್ಳಿ ಗಡಿಭಾಗದ ದೊಡ್ಡ ಗೊಲ್ಲಹಳ್ಳಿ ಗ್ರಾಮದ ರೈತರಾದ ಶ್ರೀನಿವಾಸ್ ಮತ್ತು ಕುಟುಂಬಸ್ಥರು ಕೆಐಎಡಿಬಿ ಅಧಿಕಾರಿಗಳ ದೌರ್ಜನ್ಯ ಖಂಡಿಸಿ ಪ್ರತಿಭಟನೆ […]

Continue Reading

**ಇಂಡೇನ ಕಾರ್ಖಾನೆ ವಿರುದ್ಧ ಯುವಕರ ಪ್ರತಿಭಟನೆ : ಗ್ರಾಮಸ್ಥರ ಅರೋಗ್ಯ ಕಾಪಾಡುವಂತೆ ಅಧಿಕಾರಿಗಳಲ್ಲಿ ಮನವಿ**

*ದೊಡ್ಡಬಳ್ಳಾಪುರ ಮೇ 03 ವಿಜಯಮಿತ್ರ* : ಕಾರ್ಖಾನೆಯಿಂದ ಬರುವ ವಿಷ ಅನಿಲವು ದುರ್ವಸನೆಯಿಂದ ಕೂಡಿದ್ದು ಜನರ ಆರೋಗ್ಯದ ಮೇಲೆ ದುಷ್ಟಪರಿಣಾಮ ಬಿರುತ್ತಿದೆ. ಇಂಡೇನ ಕಾರ್ಖಾನೆ ನಮ್ಮ ಗ್ರಾಮದ ಸಂಪತ್ತನ್ನು ಹಾಳುಮಾಡುತ್ತಿದೆ ಎಂದು ಸಾಮಾಜಿಕ ಹೋರಾಟ ಕೃಷ್ಣಪ್ರಸಾದ್ ತಿಳಿಸಿದರು.     ತಾಲ್ಲೂಕಿನ ರಘುನಾಥಪುರ ಸಮೀಪದ ಇಂಡೇನ ಕಾರ್ಖಾನೆ ಮುಂಭಾಗ ಸ್ಥಳೀಯ ಯುವ ಹೋರಾಟಗಾರರು ಪ್ರತಿಭಟನೆ ನೆಡೆಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು ಗ್ರಾಮದ ಉಳಿವಿಗಾಗಿ ಯುವಕರು ಹೋರಾಟ ನೆಡೆಸುತ್ತಿದ್ದು. ಇಂಡೇನಾ ಕಾರ್ಖಾನೆಯಿಂದ ಗ್ರಾಮಸ್ಥರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ.ದ್ರವರೂಪದ ತಾಜ್ಯವನ್ನು ಹಿಂಗು […]

Continue Reading

*ಹಣಬೆ ಗ್ರಾಮದಲ್ಲಿ ಭೀಮೋತ್ಸವ : ಡಾ. ಬಿ ಆರ್ ಅಂಬೇಡ್ಕರ್ ರವರ 133ನೇ ಜನ್ಮದಿನಾಚರಣೆ*

*ದೊಡ್ಡಬಳ್ಳಾಪುರ ಮೇ 03 ( ವಿಜಯಮಿತ್ರ )* : ವಿಶ್ವಜ್ಞಾನಿ, ಸಂವಿಧಾನ ಶಿಲ್ಪಿ, ಮಹಾ ಮಾನವತಾವಾದಿ, ಮಹಾನಾಯಕ ಡಾಕ್ಟರ್ ಅಂಬೇಡ್ಕರ್ ರವರು ಹಗಲಿರುಳು ಶ್ರಮವಹಿಸಿ ರಚಿಸಿರುವ ಈ ದೇಶದ ಸಂವಿಧಾನಕ್ಕೆ ಬಿಕ್ಕಟ್ಟಿನ ಪರಿಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ 104 ತಿದ್ದುಪಡಿಗಳಾಗಿರುವ ನಮ್ಮ ಬೃಹತ್ ಸಂವಿಧಾನ ಮುಂದಿನ ದಿನಗಳಲ್ಲಿ ತೆರೆಮರೆಗೆ ಸರಿಸುವ ಹುನ್ನಾರವನ್ನು ನಮ್ಮನ್ನ ಆಳುವ ಸರ್ಕಾರಗಳು ನಿರಂತರವಾಗಿ ಮಾಡುತ್ತಾ ಬಂದಿವೆ. ಎಂದು ದೊಡ್ಡಬಳ್ಳಾಪುರ ತಾಲ್ಲೂಕು ಛಲವಾದಿ ಮಹಾಸಭಾ ಅಧ್ಯಕ್ಷರಾದ ಗುರುರಾಜಪ್ಪ ನವರು ಅಭಿಪ್ರಾಯಪಟ್ಟರು. ಅವರು ಮೇ ದಿನಾಂಕ 1ರಂದು […]

Continue Reading

*ಸುಟ್ಟು ಕರಕಲಾದ ಸ್ಥಿತಿಯಲ್ಲಿ ವೀಣಾ ಮೃತ ದೇಹ ಪತ್ತೆ : ಪತಿ ರವಿಯಿಂದಲೇ ಪತ್ನಿಯ ಕೊಲೆ*

*ದೊಡ್ಡಬಳ್ಳಾಪುರ ಏಪ್ರಿಲ್ 04 ( ವಿಜಯ ಮಿತ್ರ )* : ಗಾರ್ಮೆಂಟ್ಸ್ ಕೆಲಸಕ್ಕೆ ಎಂದು ಹೋದ ವೀಣಾ ಸಂಪೂರ್ಣ ಸುಟ್ಟ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಪತಿ ರವಿ ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.         ದೊಡ್ಡಬಳ್ಳಾಪುರದ ಕರನೇಹಳ್ಳಿಯ ನಿವಾಸಿ 19 ವರ್ಷದ ವೀಣಾ ಏಪ್ರಿಲ್ 22ರ ಸೋಮವಾರ ನಾಪತ್ತೆಯಾಗಿದ್ದು ಆಕೆಯ ಗಂಡ ರವಿ ಹೆಂಡತಿಯ ಮಿಸ್ಸಿಂಗ್ ಕೇಸ್ ಅನ್ನು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಿಸಿ ಬಂದಿದ್ದ, ಅದಾದ ಒಂದು […]

Continue Reading

*ಅಂತರರಾಷ್ಟ್ರೀಯ ವಿಶ್ವ ಕಾರ್ಮಿಕ ದಿನದ ಆಚರಣೆ : ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಕಟ್ಟಡ ಕಾರ್ಮಿಕ ಮಕ್ಕಳಿಗೆ ಪ್ರತಿಭಾ ಪುರಸ್ಕಾರ*

*ದೊಡ್ಡಬಳ್ಳಾಪುರ ಮೇ 01 (ವಿಜಯಮಿತ್ರ)* : ಪ್ರಸ್ತುತ ಸಮಾಜದಲ್ಲಿ ಕಾರ್ಮಿಕರ ಹಕ್ಕುಗಳನ್ನು ಕಸಿಯುವ ಹುನ್ನಾರ ನೆಡೆಯುತ್ತಿದೆ ಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸಿ ಅವರ ಜೊತೆಗೆ ನಿಲ್ಲಬೇಕಾದ ಸರ್ಕಾರಗಳು ಬಂಡವಾಳಶಾಹಿಗಳ ಜೊತೆ ನಿಂತಿರುವುದು ವಿಪರ್ಯಾಸವೇ ಸರಿ ಎಂದು ಹಿರಿಯ ನ್ಯಾಯವಾದಿಗಳಾದ ಎಂ ಕೃಷ್ಣಮೂರ್ತಿ ತಿಳಿಸಿದರು ನಗರದ ಕನ್ನಡ ಜಾಗೃತ ಭವನದಲ್ಲಿ ಶ್ರೀ ನೆಲದ ಆಂಜನೇಯ ಸ್ವಾಮಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಹಾಗೂ ಮೇಸ್ತ್ರಿಗಳ ಸಂಘ, ಕನ್ನಡ ಜಾಗೃತ ಪರಿಷತ್ ದೊಡ್ಡಬಳ್ಳಾಪುರ ಹಾಗೂ ಭಾಗ್ಯವಿಧಾತ ಕ್ರೆಡಿಟ್ […]

Continue Reading