*ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ*

“ನಿರಂತರ ಯೋಗಾಭ್ಯಾಸ ನಮ್ಮೆಲ್ಲರ ಜೀವನದಲ್ಲಿ ಅನುಷ್ಠಾನಗೊಂಡರೆ, ನಾವೆಲ್ಲರೂ 100 ವರ್ಷದವರೆಗೂ ಬದುಕಲು ಸಾಧ್ಯವಿದೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಸದಾಶಿವ ರಾಮಚಂದ್ರಗೌಡ ತಿಳಿಸಿದರು. ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಇತ್ತೀಚಿನ ಕಾಲಮಾನದಲ್ಲಿ ಯುವಕರು ಉತ್ಸಾಹ ಪೀಡಿತರಾಗಿ ಜೀವನ ಸಾಗಿಸುತ್ತಿದ್ದು ಅವರನ್ನು ಉತ್ಸಾಹಶೀಲಾರನ್ನಾಗಿ ಮಾಡಲು ಅರೋಗ್ಯಕರ ಯೋಗಭ್ಯಾಸ ಬಹಳ ಮುಖ್ಯವಾಗಿದೆ.ವಿದ್ಯಾರ್ಥಿಗಳು ದಿನನಿತ್ಯದ ಜೀವನದಲ್ಲಿ ದೈಹಿಕ,ಮಾನಸಿಕ,ಸಾಮಾಜಿಕ, ಹಾಗೂ ಆದ್ಯಾತ್ಮಿಕವಾಗಿ ಅರೋಗ್ಯವನ್ನು ಸುಸ್ಥಿರದಲ್ಲಿಡಬೇಕಂದರೆ ಯೋಗಭ್ಯಾಸ […]

Continue Reading

*ರಾಜಾನುಕುಂಟೆ ಯಲ್ಲಿ ಬೆಂಗಳೂರು ಆಟೋ ಸೇನೆಯ ನೂತನ ಕಛೇರಿ ಉದ್ಘಾಟನಾ ಕಾರ್ಯಕ್ರಮ*

ಪ್ರತಿನಿತ್ಯ ಆಟೋ ಚಾಲಕರು ನೂರಾರು ಸಮಸ್ಯೆಯನ್ನು ಎದುರಿಸುತ್ತಿದ್ದು. ಆಟೋ ಚಾಲಕರ ಶಕ್ತಿಯಾಗಿ ಬೆಂಗಳೂರು ಆಟೋ ಸೇನೆ ಶ್ರಮಿಸಲಿದೆ ಎಂದು ಸಂಘಟನೆ ರಾಜ್ಯಾಧ್ಯಕ್ಷ ಚೇತನ್ ತಿಳಿಸಿದರು   ರಾಜಾನುಕುಂಟೆ ವ್ಯಾಪ್ತಿಯಲ್ಲಿ ಬೆಂಗಳೂರು ಆಟೋ ಸೇನೆ ನೂತನ ಘಟಕದ ಕಛೇರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಮಳೆ ಏನದೇ ಬಿಸಿಲಿನದೇ ಪ್ರತಿನಿತ್ಯ ಸಾರ್ವಜನಿಕರ ಸೇವೆಗಾಗಿ ದುಡಿಯುವ ಆಟೋ ಚಾಲಕರು, ತಮ್ಮ ಕರ್ತವ್ಯದ ಅವಧಿಯಲ್ಲಿ ಹಲವಾರು ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಆಟೋ ಚಾಲಕರು ಅಸಂಘಟಿತರಲ್ಲ,ನಾವು ಸಂಘಟಿತರು ಎಂದು ಸಾರುವ ನಿಟ್ಟಿನಲ್ಲಿ ಬೆಂಗಳೂರು […]

Continue Reading

*ಆಹಾರ, ವಿದ್ಯೆ ಪ್ರತಿ ಮನುಷ್ಯನಿಗೂ ಅತ್ಯವಶ್ಯಕ – ಮುನಿರಾಜು ಎಸ್ ವಿ ( ಎಸ್ ಎಲ್ ವಿ )*

ದೊಡ್ಡಬಳ್ಳಾಪುರ :ನಿರಂತರವಾಗಿ ಹಸಿದವರ ಹೊಟ್ಟೆಯನ್ನು ತುಂಬಿಸುವ ಕಾರ್ಯವನ್ನು ಮಲ್ಲೇಶ್ ಮತ್ತು ತಂಡ ಮಾಡುತ್ತಿದ್ದು. ಇಂದು ನನ್ನ ವಿಶೇಷ ದಿನವನ್ನು ಅನ್ನದಾಸೋಹ ಸಮಿತಿಯೊಂದಿಗೆ ಆಚರಿಸಲು ನಿರ್ಧರಿಸಿ ಈ ಕಾರ್ಯಕ್ರಮದ ಆಯೋಜನೆ ಮಾಡಲಾಗಿದೆ ಎಂದು ಎಸ್ ವಿ ಮುನಿರಾಜು( ಎಸ್ ಎಲ್ ವಿ ) ತಿಳಿಸಿದರು. 1546 ನೇ ದಿನದ ನಿರಂತರ ಅನ್ನದಾಸೋಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಹಲವಾರು ದಿನಗಳಿಂದ ನನ್ನ ಪರಿಚಯಸ್ಥರು ತಮ್ಮ ವಿಶೇಷ ದಿನಗಳನ್ನು ಅನ್ನದಾಸೋಹ ಸಮಿತಿಯೊಂದಿಗೆ ಆಚರಿಸಿಕೊಂಡು ಬರುತ್ತಿದ್ದಾರೆ. ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಹಸಿದವರಿಗೆ […]

Continue Reading

*ನಟ ದರ್ಶನ್ ಅಭಿಮಾನಿಗಳಿಂದ ಜೀವ ಬೆದರಿಕೆ ಆರೋಪ : ಪೊಲೀಸ್ ಠಾಣೆ ಮೊರೆಹೋದ ನಟ ಒಳ್ಳೆಹುಡ್ಗ ಪ್ರಥಮ್*

ಬೆಂಗಳೂರು : ನಟ ದರ್ಶನ್ ಅಭಿಮಾನಿಗಳಿಂದ ತನಗೆ ಜೀವ ಬೆದರಿಕೆ ಬಂದಿದೆ ಎಂದು ನಟ ಪ್ರಥಮ್ ಅವರು ಬೆಂಗಳೂರಿನ ಜ್ಞಾನಭಾರತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.   ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿರುವ ಪ್ರಥಮ್, ಜೀವನ ಬಹಳ ದೊಡ್ಡದು. ಯಾರಿಗೋಸ್ಕರವೋ ನೀವು ಅದನ್ನ ಹಾಳು ಮಾಡಿಕೊಳ್ಳಬೇಡಿ, ನಾನು ತುಂಬಾ ಶಾಂತಿಯಿಂದಲೇ ಇದ್ದೆ:ನೀವು ಅತೀಯಾಗಿ ನಮ್ಮ ಕರ್ನಾಟಕದ ಅಳಿಯ ತಂಡದ ಗೆ ಕಾಲ್ ಮಾಡಿ ಬೆದರಿಕೆ ಹಾಕುತ್ತಲೆ ಬಂದಿದ್ದೀರಾ, ಇನ್ನೇಲೆ ನನಗೆ ಬರೋ ಕಾಲ್ ಅಥವಾ […]

Continue Reading

*ನಾಳೆ ದೊಡ್ಡಬಳ್ಳಾಪುರಕ್ಕೆ ಬರಲಿದೆ ‘ ವೆಲ್ ನೆಸ್ ಆನ್ ವೀಲ್ಸ್ ‘ : ಸಾರ್ವಜನಿಕರು ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ವೈದ್ಯರ ಮನವಿ*

ದೊಡ್ಡಬಳ್ಳಾಪುರ :- ವೋಲ್ವೋ ಗ್ರೂಪ್ ಹಾಗೂ ನಾರಾಯಣ ಹೆಲ್ತ್ ಸಹಯೋಗದಲ್ಲಿ ಸಿಎಸ್ ಆರ್ ಯೋಜನೆಯಡಿ ಒದಗಿಸಿರುವ ಸoಚಾರಿ ಆರೋಗ್ಯ ವಾಹನ ಜೂನ್ 20 ರಂದು ದೊಡ್ಡಬಳ್ಳಾಪುರ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಸೇವೆ ಸಲ್ಲಿಸಲಿದೆ ಎಂದು ಮೂಲಗಳು ತಿಳಿಸಿವೆ. ‘ವೆಲ್ ನೆಸ್ ಆನ್ ವ್ಹೀಲ್ಸ್’ ಎಂಬ ಪರಿಕಲ್ಪನೆಯಲ್ಲಿ ಪ್ರಾರಂಭಗೊಂಡಿರುವ ಸಂಚಾರಿ ಸಮುದಾಯ ಆರೋಗ್ಯ ಕೇಂದ್ರವು ನಾಳೆ ತಾಲ್ಲೂಕಿನ ಸಾರ್ವಜನಿಕ ಆಸ್ಪತ್ರೆ ಯಲ್ಲಿ ಬೆಳ್ಳಿಗೆ 8: 30 ರಿಂದ ಉಚಿತ ವೈದ್ಯಕೀಯ ಸೇವೆಗಳನ್ನು ಸಲ್ಲಿಸಲಿದೆ. ಏಕೋ ( ECHO), […]

Continue Reading

*ಬೀದಿ ನಾಟಕದ ಮೂಲಕ ಮಾನಸಿಕ ಆರೋಗ್ಯದ ಸುಧಾರಣೆ ಕುರಿತು ಅರಿವು ಮೂಡಿಸುತ್ತಿರುವ ವಿದ್ಯಾರ್ಥಿಗಳು*

ಕಳೆದ ಒಂದು ವಾರದಿಂದ ಮೆಳೇಕೋಟೆ ಪಂಚಾಯತ್ ವ್ಯಾಪ್ತಿಯ ಗ್ರಾಮಗಳಲ್ಲಿ ಬೀದಿ ನಾಟಕದ ಮುಖಾಂತರ ಗ್ರಾಮದ ಪ್ರತಿ ಮನೆ ಮನೆಗೆ ಭೇಟಿ ನೀಡಿ ಜಾಗೃತಿ ಮೂಡಿಸುತಿದ್ದಾರೆ ಎಂದು ನವೋದಯ ಚಾರಿಟಬಲ್ ಟ್ರಸ್ಟ್ ನ ಅಧ್ಯಕ್ಷ ಚೇತನ್ ತಿಳಿಸಿದರು. ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಮತ್ತು ಸುರಾನಾ ಕಾಲೇಜು,ಬೆಂಗಳೂರು ಇವರ ಸಹಯೋಗದೊಂದಿಗೆ ಗ್ರಾಮೀಣ ಮಾನಸಿಕ ಆರೋಗ್ಯದ ಕಳಂಕದ ಬಗ್ಗೆ ಪ್ರಿ ಅಸೆಸ್ಮೆಂಟ್ ಮತ್ತು ಪೋಸ್ಟ್ ಅಸೆಸ್ಮೆಂಟ್ ಅನ್ನು ವೈಜ್ಞಾನಿಕವಾಗಿ ಮಾಡುವ ಮೂಲಕ ಮಾಡ್ಯೂಲ್ ಅಭಿವೃದ್ಧಿಪಡಿಸುತ್ತಿದ್ದು, ಈ […]

Continue Reading

*ನಾಡಪ್ರಭು ಕೆಂಪೇಗೌಡ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲು ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಸಚಿವ ಕೆ.ಹೆಚ್ ಮುನಿಯಪ್ಪ ಸೂಚನೆ*

ಬೆಂಗಳೂರು ಗ್ರಾಮಾಂತರ ಜಿಲ್ಲೆ, ಜೂನ್ 19 : ಜೂನ್ 27 ರಂದು ಜಿಲ್ಲೆಯ ಮೂರು ಪ್ರಮುಖ ಸ್ಥಳಗಳಲ್ಲಿ ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಗಿದ್ದು ಇದಕ್ಕಾಗಿ ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಹೆಚ್ ಮುನಿಯಪ್ಪ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.     ದೇವನಹಳ್ಳಿ ಟೌನ್ ನಲ್ಲಿರುವ ತಾಲ್ಲೂಕು ಪಂಚಾಯಿತಿ ಕಚೇರಿ ಸಭಾಂಗಣದಲ್ಲಿಂದು ನಡೆದ ಕೆಂಪೇಗೌಡ ಜಯಂತಿ ಆಚರಣೆಯ […]

Continue Reading

*ತಂಬಾಕು ಉತ್ಪನ್ನಗಳಿಂದ ಮಕ್ಕಳನ್ನು ದೂರವಿಡಿ: ಜಿಲ್ಲಾಧಿಕಾರಿ ಡಾ. ಎನ್ ಶಿವಶಂಕರ್ ಸಲಹೆ*

ತಂಬಾಕು ಉತ್ಪನ್ನಗಳಿಂದ ಆಗುವಂತ ದುಷ್ಪರಿಣಾಮಗಳ ಕುರಿತು ಮಕ್ಕಳಲ್ಲಿ ಹೆಚ್ಚಾಗಿ ಜಾಗೃತಿಯ ಕಾರ್ಯಕ್ರಮ ಮೂಡಿಸುವದು ಅತ್ಯವಶ್ಯವಿದೆ. ಅಲ್ಲದೇ ಪ್ರತಿಯೊಬ್ಬ ವ್ಯಕ್ತಿಗೂ ತಂಬಾಕು ಉತ್ಪನ್ನಗಳಿಂದ ಸಂಭವಿಸುವಂತ ಅನಾರೋಗ್ಯಗಳ ಕುರಿತು ಅರಿವು ಇರಬೇಕು, ದೂರವೀರಬೇಕು ಎಂದು ಜಿಲ್ಲಾಧಿಕಾರಿ ಡಾ. ಎನ್. ಶಿವಶಂಕರ್ ಅವರು ಹೇಳಿದರು. ದೇವನಹಳ್ಳಿ ತಾಲೂಕಿನ ಬೀರಸಂದ್ರ ಗ್ರಾಮದ ಜಿಲ್ಲಾಡಳಿತ ಭವನದ ನ್ಯಾಯಾಲಯ ಸಭಾಂಗಣದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಾಹಿತಿ ಶಿಕ್ಷಣ ಸಂವಹನ ವಿಭಾಗ ಹಾಗೂ ಜಿಲ್ಲಾ ತಂಬಾಕು […]

Continue Reading

*ಏನಿದು ಲೋಕ್ ಅದಾಲತ್..??? ಈ ಕುರಿತು ಸಂಪೂರ್ಣ ಮಾಹಿತಿಗಾಗಿ ಓದಿ..(ಕಿರುಪರಿಚಯ)*

ಲೋಕ್ ಅದಾಲತ್‌ನ ಮೂಲ ಉದ್ದೇಶವೇನೆಂದರೇ ಯಾವುದೇ ಪಕ್ಷಗಾರರು ರಾಜೀ ಸಂಧಾನದ ಮೂಲಕ ತಮ್ಮ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಂಡು ಸೌರ್ಹಾಧಯುತವಾದ ಜೀವನವನ್ನು ನಡೆಸಲು ಸಾಧ್ಯವಾಗಬೇಕು, ರಾಜೀ ಸಂಧಾನದ ಮೂಲಕ ತಮ್ಮ ಪ್ರಕರಣಗಳನ್ನು ಸುಲಭವಾಗಿ ಶೀಘ್ರವಾಗಿ ಯಾವುದೇ ಶುಲ್ಕವಿಲ್ಲದೆ ಖರ್ಚು ವೆಚ್ಚವಿಲ್ಲದೇ ತೀರ್ಮಾನ ಮಾಡಿಕೊಳ್ಳಬಹುದಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆಯಾದ ಕೆ.ಬಿ ಗೀತಾ ತಿಳಿಸಿದರು.   ಈ ಕುರಿತು ಮಾತನಾಡಿದ ಅವರು ಲೋಕ್ ಅದಾಲತ್‌ನ ಬಗ್ಗೆ […]

Continue Reading

*ಸಾರ್ವಜನಿಕರ ಸಮಸ್ಯೆ ಬಗೆಹರಿಸಲು ಜನಸ್ಪಂದನ ಸಹಕಾರಿ: ಶಾಸಕ ಧೀರಜ್ ಮುನಿರಾಜು*

ದೊಡ್ಡಬಳ್ಳಾಪುರ : ಸರ್ಕಾರಿ ಕಚೇರಿಗಳಿಗೆ ಸಾರ್ವಜನಿಕರ ಅಲೆದಾಟ ತಪ್ಪಿಸಲು ಹಾಗೂ ಸಾರ್ವಜನಿಕ ಸಮಸ್ಯೆಗಳಿಗೆ ಶೀಘ್ರ ಸ್ಪಂದಿಸಲು ಜನಸ್ಪಂದನಾ ಕಾರ್ಯಕ್ರಮ ಸಹಕಾರಿಯಾಗಲಿದೆ. ಜನಸ್ಪಂದನದಲ್ಲಿ ಸ್ವೀಕರಿಸಿದ ದೂರು, ಅಹವಾಲುಗಳನ್ನು ಶೀಘ್ರವಾಗಿ ಸಂಬಂಧಪಟ್ಟ ಇಲಾಖೆಗಳು ಬಗೆಹರಿಸಬೇಕು ಎಂದು ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರ ಶಾಸಕರಾದ ಧೀರಜ್ ಮುನಿರಾಜು ಅವರು ಹೇಳಿದರು. ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ವತಿಯಿಂದ ದೊಡ್ಡಬಳ್ಳಾಪುರ ತಾಲ್ಲೂಕಿನ ಮಧುರೆ ಹೋಬಳಿಯ ಕನಸವಾಡಿ ಗ್ರಾಮದ ಡಾ‌.ಬಿ.ಆರ್ ಅಂಬೇಡ್ಕರ್ ಭವನದಲ್ಲಿಂದು ಎರ್ಪಡಿಸಲಾಗಿದ್ದ “ಜನಸ್ಪಂದನಾ” ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಜನರು ಪ್ರತಿ ದಿನ ಸರ್ಕಾರಿ […]

Continue Reading