ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರತಿಕೃತಿ ದಹಿಸುವ ಮೂಲಕ ಆಕ್ರೋಶ ಹೊರಹಾಕಿದ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟ

ದೊಡ್ಡಬಳ್ಳಾಪುರ : ಸಂವಿಧಾನ ಶಿಲ್ಪಿ ಡಾ.ಬಿಆರ್ ಅಂಬೇಡ್ಕರ್ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆ ಮಹಿಳೆಯರು, ಪರಿಶಿಷ್ಟ ಜಾತಿ, ಪಂಗಡಗಳು, ಒಬಿಸಿ ಇತರೆ ಹಿಂದುಳಿದ ವರ್ಗಗಳಿಗೆ ಘಾಸಿ ಉಂಟುಮಾಡಿದೆ. ಹಾಗಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಈ ಕೂಡಲೇ ಸಚಿವ ಸಂಪುಟದಿಂದ ವಜಾ ಮಾಡಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಹಿರಿಯ ಹೋರಾಟಗಾರ ಸಂಜೀವ್ ನಾಯಕ್ ತಮ್ಮ ಆಕ್ರೋಶ ವ್ಯಕ್ತ […]

Continue Reading

ರಾಜ್ಯ ವಿಜಯ ಕರ್ನಾಟಕ ರಕ್ಷಣಾ ವೇದಿಕೆವತಿಯಿಂದ ನಾಳೆ (ಡಿ. 22)ರಂದು ಕನ್ನಡ ರಾಜ್ಯೋತ್ಸವ ಸಂಭ್ರಮ: ಕನ್ನಡ ಹಬ್ಬಕ್ಕೆ ಅದ್ದೂರಿ ವೇದಿಕೆ ಸಜ್ಜು

ದೊಡ್ಡಬಳ್ಳಾಪುರ : ರಾಜ್ಯ ವಿಜಯ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಕನ್ನಡ ಪರ ಸಂಘಟನೆಗಳ ಒಕ್ಕೂಟದ ವತಿಯಿಂದ ನಾಳೆ ನಗರದ ಡಿ ಕ್ರಾಸ್ ಬಳಿಯ ಕೇಂದ್ರ ಕಛೇರಿ ಸಮೀಪ ೬೯ನೇ ಕನ್ನಡ ರಾಜ್ಯೋತ್ಸವ ಮತ್ತು ೫೧ನೇ ವರ್ಷದ ಸುವರ್ಣ ಮಹೋತ್ಸವದ ಸಂಭ್ರಮ ಕಾರ್ಯಕ್ರಮವನ್ನು “ಹೆಸರಾಯಿತು ಕರ್ನಾಟಕ, ಉಸಿರಾಗಿಲಿ ಕನ್ನಡ” ಘೋಷ ವಾಕ್ಯದ ಅಡಿಯಲ್ಲಿ ಆಚರಿಸಲಾಗುತ್ತಿದೆ.   ಈ ಕುರಿತು ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಎ. ನಂಜಪ್ಪ ಮಾತನಾಡಿ ನವೆಂಬರ್ ೧ ರಂದು ಮತ್ತು ನವೆಂಬರ್ ತಿಂಗಳ ಪರ್ಯಂತ […]

Continue Reading

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ : ವಾತ್ಸಲ್ಯ ಕಾರ್ಯಕ್ರಮದ ಅಡಿಯಲ್ಲಿ 1,15,000 ರೂ ಮೌಲ್ಯದ ಮನೆ ನಿರ್ಮಾಣಕ್ಕೆಚಾಲನೆ

ದೊಡ್ಡಬಳ್ಳಾಪುರ :ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಾತ್ಸಲ್ಯ ಯೋಜನೆ ಅಡಿಯಲ್ಲಿ 1,15,000 ರೂ ಮೌಲ್ಯದ ಮನೆ ನಿರ್ಮಾಣಕ್ಕೆ ಗುದ್ದಲಿ ಪೂಜೆಯನ್ನು ಆರೋಡಿ ವಲಯದ ಮಾಚೇನಹಳ್ಳಿ ಗ್ರಾಮದಲ್ಲಿ ನೆರವೇರಿಸಲಾಯಿತು. ತಾಲ್ಲೂಕಿನ ಆರೋಡಿ ವ್ಯಾಪ್ತಿಯ ಮಾಚೇನಹಳ್ಳಿ ಗ್ರಾಮ ನಿವಾಸಿ ಕಾಮಕ್ಕ ಅವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಈ ಹಿಂದೆ ಪ್ರತಿ ತಿಂಗಳ ಮಾಸಾಶನ ( ಪಿಂಚಣಿ) ಬರುವಂತ ವ್ಯವಸ್ಥೆ ಮಾಡಲಾಗಿದ್ದು.ಪ್ರಸ್ತುತ ಅವರಿಗೆ ವಾಸಿಸಲು ಮನೆ ಇಲ್ಲದ ಕಾರಣ ಯೋಜನೆಯ ವಾತ್ಸಲ್ಯ ಕಾರ್ಯಕ್ರಮದ ಅಡಿಯಲ್ಲಿ ಮನೆ […]

Continue Reading

ಬೆಂ.ಗ್ರಾ ಜಿಲ್ಲೆಯಲ್ಲಿ ಸಮ್ಮೇಳನ‌ ನಡೆಸಲು ದೊಡ್ಡಬಳ್ಳಾಪುರದ ಸಾಹಿತ್ಯಾಸಕ್ತರಿಂದ ಹಕ್ಕೊತ್ತಾಯ

ಮಂಡ್ಯದಲ್ಲಿ ನಡೆಯುತ್ತಿರುವ  87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು  ಉದ್ಘಾಟನೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಭಾಷಣದಲ್ಲಿ ದೊಡ್ಡಬಳ್ಳಾಪುರದವರಾದ ಸ್ವಾತಂತ್ರ್ಯ ಸೇನಾನಿ ಟಿ.ಸಿದ್ದಲಿಂಗಯ್ಯ ಮತ್ತು ಖ್ಯಾತ ವಿಮರ್ಶಕ ಡಾ.ಡಿ.ಆರ್.ನಾಗರಾಜ್ ಅವರನ್ನು ಉಲ್ಲೇಖ ಮಾಡಿದರು.   ಸ್ವಾತಂತ್ರ್ಯ ಹೋರಾಟದಲ್ಲಿ ಮಂಡ್ಯ ಜಿಲ್ಲೆಯ ಶಿವಪುರ ಧ್ವಜ ಸತ್ಯಾಗ್ರಹ ಘಟನೆಯನ್ನು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿ ಸ್ವಾತಂತ್ರ್ಯ ಹೋರಾಟಗಾರ ಟಿ.ಸಿದ್ದಲಿಂಗಯ್ಯ ಅವರ ನೇತೃತ್ವದ ಹೋರಾಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಖ್ಯಾತ ವಿಮರ್ಶಕ ಡಾ.ಡಿ.ಆರ್.ನಾಗರಾಜ್ ಅವರ ವಿಚಾರಧಾರೆಗಳನ್ನು ಸಹ ತಮ್ಮ ಭಾಷಣದಲ್ಲಿ […]

Continue Reading

‘ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ’ ಪುರಸ್ಕೃತ ರಂಗದಾಮಯ್ಯಗೆ ಕೊಡಿಗೆಹಳ್ಳಿ ಗ್ರಾಮ ಪಂಚಾಯತಿ ಮುಖಂಡರು ಮತ್ತು ಸಾರ್ವಜನಿಕರಿಂದ ಅಭಿನಂದನೆ

ದೊಡ್ಡಬಳ್ಳಾಪುರ : ಪ್ರಜಾಹಿತ ಚಾರಿಟೇಬಲ್ ಟ್ರಸ್ಟ್ ಸಹಯೋಗದೊಂದಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ತಾಲ್ಲೂಕಿನ ಕೊಡಿಗೆಹಳ್ಳಿ ಗ್ರಾಮದ ಎಸ್.ಡಿ ರಂಗಸ್ವಾಮಿಯರಿಗೆ ‘ನಾಲ್ವಡಿ ಕೃಷ್ಣರಾಜ ಒಡೆಯರ್’ ಪ್ರಶಸ್ತಿ ನೀಡಿ ಪುರಸ್ಕರಿಸಲಾಗಿದೆ.   ಇತ್ತಿಚೇಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿತರಣೆ ಮಾಡಲಾಯಿತು.   ಪ್ರಶಸ್ತಿ ಪುರಸ್ಕೃತ ಎಸ್.ಡಿ ರಂಗದಾಮಯ್ಯ ಅವರನ್ನ ಕೊಡಿಗೆಹಳ್ಳಿ ಗ್ರಾಮ ಪಂಚಾಯತಿ ಮುಖಂಡರು, ಸಾರ್ವಜನಿಕರು ಅಭಿನಂದಿಸಿದರು.   ಈ ವೇಳೆ ಮಾತನಾಡಿದ ತಾಲ್ಲೂಕು ಪಂಚಾಯತಿ ಮಾಜಿ ಸದಸ್ಯ ಹಸನಘಟ್ಟರವಿ ಮಾತನಾಡಿ ರಂಗದಾಮಯ್ಯ ಅವರು […]

Continue Reading

ಕುರಿ ಸಾಕಾಣಿಕೆ ಮತ್ತು ಫುಡ್ ಕಾರ್ಟ್ ಸಾಲ-ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ

ಬೆಂ.ಗ್ರಾ.ಜಿಲ್ಲೆ, ಡಿ. 20: ಡಾ.ಬಿ.ಆ‌ರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ 2024-25 ನೇ ಸಾಲಿನಲ್ಲಿ ಸ್ವಯಂ ಉದ್ಯೋಗ ನೇರಸಾಲ ಯೋಜನೆಗಳಡಿ ‘ಕುರಿ ಸಾಕಾಣಿಕೆ’ ಉದ್ದೇಶಕ್ಕೆ ರೂ. 1 ಲಕ್ಷ (ರೂ. 50000 ಸಾಲ ಮತ್ತು ರೂ.50000 ಸಹಾಯಧನ) ಹಾಗೂ ಉದ್ಯಮಶೀಲತಾ ಅಭಿವೃದ್ಧಿ ಯೋಜನೆಯಡಿ ‘ಫುಡ್ ಕಾರ್ಟ್’ ಉದ್ದೇಶಕ್ಕೆ ಬ್ಯಾಂಕ್‌ ಸಹಯೋಗದೊಂದಿಗೆ ಗರಿಷ್ಟ 4 ಲಕ್ಷದವರೆಗೂ ಸಾಲ ಸೌಲಭ್ಯ ಕಲ್ಪಿಸಲು ಅರ್ಹ ಫಲಾಪೇಕ್ಷಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.   ಅರ್ಜಿಯನ್ನು ಡಿಸೆಂಬರ್ 29 ರೊಳಗೆ ಗ್ರಾಮ ಓನ್ ಕರ್ನಾಟಕ, ಓನ್ ಬೆಂಗಳೂರು […]

Continue Reading

ಶ್ರೀ ಘಾಟಿ ಸುಬ್ರಹ್ಮಣ್ಯ ಅಂತರರಾಜ್ಯ ಮಟ್ಟದ ದನಗಳ ಜಾತ್ರೆ : ಜಾನುವಾರುಗಳಿಗೆ ಉಚಿತ ಮೇವು ಮತ್ತು ನೀರು ವಿತರಣೆ ಕಾರ್ಯಕ್ರಮದ ಉದ್ಘಾಟನೆಗೆ ಕ್ಷಣಗಣನೆ

ದೊಡ್ಡಬಳ್ಳಾಪುರ: ರೈತರ ಕಲ್ಯಾಣಕ್ಕಾಗಿ ಮತ್ತು ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಪ್ರಚಾರಕ್ಕಾಗಿ ಸಮರ್ಪಿತವಾಗಿರುವ ಕ್ರಿಯಾಶೀಲ ಸಂಘಟನೆ ನವ ಕರ್ನಾಟಕ ಯುವ ಶಕ್ತಿ ವೇದಿಕೆ, ವತಿಯಿಂದ ಘಾಟಿ ಸುಬ್ರಹ್ಮಣ್ಯ ಅಂತರರಾಜ್ಯ ಮಟ್ಟದ ದನಗಳ ಜಾತ್ರೆ ಭಾಗವಾಗಿ “ಉಚಿತ ಜಾನುವಾರು ಮೇವು ಮತ್ತು ನೀರು ವಿತರಣೆ” ಎಂಬ ಮಹತ್ವದ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಈ ಕಾರ್ಯಕ್ರಮವು ಡಿಸೆಂಬರ್ 21, 2024 ರ ಶನಿವಾರ ರಂದು ಉದ್ಘಾಟನೆಗೊಳ್ಳಲಿದೆ.   ಈ ಕಾರ್ಯಕ್ರಮವು ಮೂಲಕ ಜಾತ್ರೆಯಲ್ಲಿ ಪಾಲ್ಗೊಳ್ಳುವ ಜಾನುವಾರಗಳಿಗೆ ಅಗತ್ಯ ಉಚಿತವಾಗಿ ಮೇವು ಮತ್ತು […]

Continue Reading

ಕೊನಘಟ್ಟ ಗ್ರಾಮಪಂಚಾಯಿತಿ ನೂತನ ಅಧ್ಯಕ್ಷರಾಗಿ ಜ್ಯೋತಿರಮೇಶ್ ಹಾಗೂ ಉಪಾಧ್ಯಕ್ಷರಾಗಿ ಸುಮಂಗಳ ವೆಂಕಟೇಶ್ ಆಯ್ಕೆ

ದೊಡ್ಡಬಳ್ಳಾಪುರ: ತಾಲ್ಲೂಕಿನ ಕೊನಘಟ್ಟ ಗ್ರಾಮಪಂಚಾಯಿತಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆ ಇಂದು ನೆಡೆದಿದ್ದು ಅಧ್ಯಕ್ಷರಾಗಿ ಕಾಂಗ್ರೇಸ್ ಪಕ್ಷದ ಬೆಂಬಲಿತ ಸದಸ್ಯರಾದ ಕೊನಘಟ್ಟ ಜ್ಯೋತಿ ರಮೇಶ್ ಉಪಾಧ್ಯಕ್ಷರಾಗಿ ಹಮಾಮ್ ಗ್ರಾಮದ ಕಾಂಗ್ರೆಸ್ ಪಕ್ಷದ ಬೆಂಬಲಿತ ಸುಮಂಗಳ ವೆಂಕಟೇಶ್ ಅವಿರೋಧ ಆಯ್ಕೆಯಾಗಿದ್ದಾರೆ.   ಕೊನಘಟ್ಟ ಗ್ರಾಮಕ್ಕೆ ಸದಸ್ಯರೊಬ್ಬರಿಗೆ 25 ವರ್ಷಗಳ ನಂತರ ಗ್ರಾಮಪಂಚಾಯಿತಿ ಅಧ್ಯಕ್ಷ ಸ್ಥಾನ ದೊರಕಿದ ಕಾರಣ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.   ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ತಮ್ಮ ಆಯ್ಕೆ ಬಗ್ಗೆ ಸಂತಸ ವ್ಯಕ್ತಪಡಿಸುತ್ತಾ ಕಾಂಗ್ರೆಸ್ ಪಕ್ಷದ ವರಿಷ್ಟರಿಗೆ […]

Continue Reading

ಉತ್ತಮ ಆಡಳಿತ ಸಪ್ತಾಹ-2024: ಸಪ್ತಾಹದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ

ಬೆಂ.ಗ್ರಾ.ಜಿಲ್ಲೆ, ಡಿ.19 : ಉತ್ತಮ ಆಡಳಿತ ಸಪ್ತಾಹ-2024 ದ ಅಂಗವಾಗಿ ಅಧಿಕಾರಿಗಳು ಸಪ್ತಾಹದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸಾರ್ವಜನಿಕರ ಕುಂದುಕೊರತೆಗಳನ್ನು ಪರಿಹರಿಸಿ ಮತ್ತು ಸುಧಾರಿತ ಸೇವೆ ಒದಗಿಸಿ ಎಂದು ಜಿಲ್ಲಾಧಿಕಾರಿ ಡಾ.ಎನ್ ಶಿವಶಂಕರ್ ಅವರು ಸೂಚಿಸಿದರು.   ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಉತ್ತಮ ಆಡಳಿತ ಸಪ್ತಾಹ-2024 ಅನುಷ್ಠಾನಗೊಳಿಸಲು ಕರೆದಿದ್ದ ಸಭೆಯಲ್ಲಿ ಅವರು ಮಾತನಾಡಿದರು.   ಉತ್ತಮ ಆಡಳಿತ ಸಪ್ತಾಹ-2024 ವು 19.12.2024 ರಿಂದ 24.12.2024 ರವರೆಗೆ ನಡೆಯಲಿದೆ. “ಪ್ರಶಾಸನ್ ಗಾಂವ್ ಕಿ ಓರೆ(ಗ್ರಾಮದ ಕಡೆಗೆ […]

Continue Reading

ಉತ್ತಮ ಆಡಳಿತ ಸಪ್ತಾಹ-2024 : ಹಿರಿಯ ನಾಗರಿಕರಿಗೆ ಗುರುತಿನ ಚೀಟಿ ವಿತರಿಸಿದ ಜಿಲ್ಲಾಧಿಕಾರಿ ಡಾ. ಎನ್ ಶಿವಶಂಕರ

ಬೆಂ.ಗ್ರಾ.ಜಿಲ್ಲೆ, ಡಿ.19: ಉತ್ತಮ ಆಡಳಿತ ಸಪ್ತಾಹ-2024 ರ ಅಂಗವಾಗಿ “ಇಂದೇ ಸಕಾಲ”ದಲ್ಲಿ ಹಿರಿಯ ನಾಗರಿಕರ ಗುರುತಿನ ಚೀಟಿಗಾಗಿ ಅರ್ಜಿ ಸಲ್ಲಿಸಿದ ಕೆಲವೇ ನಿಮಿಷಗಳಲ್ಲಿ ಅನುಮೋದಿಸಿ ಜಿಲ್ಲಾಧಿಕಾರಿಗಳಿಂದ ಹಿರಿಯ ನಾಗರಿಕರಿಗೆ ಗುರುತಿನ ಚೀಟಿ ವಿತರಿಸಲಾಯಿತು.   ಉತ್ತಮ ಆಡಳಿತ ಸಪ್ತಾಹ-2024 ವು 19.12.2024 ರಿಂದ 24.12.2024 ರವರೆಗೆ ನಡೆಯಲಿದೆ. “ಪ್ರಶಾಸನ್ ಗಾಂವ್ ಕಿ ಓರೆ(ಗ್ರಾಮದ ಕಡೆಗೆ ಆಡಳಿತ)” ಎಂಬ ಅಭಿಯಾನದ ಮೂಲಕ ಜಿಲ್ಲೆಯಾದ್ಯಂತ ಸಾರ್ವಜನಿಕ ಕುಂದುಕೊರತೆಗಳಿಗೆ ತ್ವರಿತ ಪರಿಹಾರ ಮತ್ತು ಸೇವಾ ವಿತರಣೆಯನ್ನು ಸುಧಾರಿಸುವುದು ಸಪ್ತಾಹದ ಮುಖ್ಯ ಉದ್ದೇಶವಾಗಿದೆ. […]

Continue Reading