ಜಾಹೀರಾತುಗಳಲ್ಲಿ ಕನ್ನಡ ಭಾಷೆ ಬಳಸದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಿ – ರಾಜಘಟ್ಟ ರವಿ

ದೊಡ್ಡಬಳ್ಳಾಪುರ: ನಗರಸಭೆ ವ್ಯಾಪ್ತಿಯೊಳಗಿನ ಹೋರ್ಡಿಂಗ್ಸ್ ಗಳಲ್ಲಿ ಕನ್ನಡವನ್ನು ಸಂಪೂರ್ಣ ನಿರ್ಲಕ್ಷಿಸಲಾಗಿದೆ ಈ ಕುರಿತು ದೊಡ್ಡಬಳ್ಳಾಪುರ ವತಿಯಿಂದ ಕಠಿಣ ಕ್ರಮಕ್ಕೆ ಒತ್ತಾಯಿಸಿ ಕುರಿತು ಕರ್ನಾಟಕ ರಕ್ಷಣಾ ವೇದಿಕೆ ( ಪ್ರವೀಣ್ ಶೆಟ್ಟಿ ಬಣ ) ಯ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಘಟ್ಟ ರವಿ ನಗರಸಭೆ ಪೌರಾಯುಕ್ತರಿಗೆ ಮನವಿ ಸಲ್ಲಿಸಿದರು   ಈ ಕುರಿತು ಮಾತನಾಡಿದ ಅವರು ನಗರಸಭೆ ವ್ಯಾಪ್ತಿಯಲ್ಲಿ ಹಲವಾರು ಹೋರ್ಡಿಂಗಗಳಿದ್ದು ಅದರಲ್ಲಿ ಪ್ರದರ್ಶಿಸುವ ಜಾಹೀರಾತುಗಳಲ್ಲಿ ಪ್ರಮುಖವಾಗಿ ಕನ್ನಡ ಭಾಷೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದು, ಫಲಕದ ತುಂಬಾ ಆಂಗ್ಲ ಭಾಷೆ […]

Continue Reading

ಮೇ 25 ರಂದು ತಾಲ್ಲೂಕಿನಲ್ಲಿ ನೆಡೆಯಲಿದೆ ಇಷ್ಟಲಿಂಗ ಮಹಾಪೂಜೆ : ಕಾರ್ಯಕ್ರಮದಲ್ಲಿ ಶ್ರೀಮದ್ ರಂಭಾಪುರಿ ಜಗದ್ಗುರುಗಳು ಭಾಗಿ

ದೊಡ್ಡಬಳ್ಳಾಪುರ : ಇದೆ ಮೇ ತಿಂಗಳ 25ರಂದು ಇಷ್ಟಲಿಂಗ ಮಹಾಪೂಜೆ ಹಾಗೂ ಭಾವೈಕ್ಯ ಧರ್ಮಸಮಾರಂಭವನ್ನು ಬಾಳೆಹೊನ್ನೂರು ಶ್ರೀಮದ್ರಂಭಾಪುರಿ ವೀರಸಿಂಹಾಸನಾಧೀಶ್ವರ ಶ್ರೀ ಶ್ರೀ ಶ್ರೀ 1008 ಜಗದ್ಗುರು ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ ದಿವ್ಯ ಸಾನಿಧ್ಯದಲ್ಲಿ ಆಯೋಜಿಸಲಾಗಿದೆ ಎಂದು ತಾಲ್ಲೂಕು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಯುವ ಘಟಕದ ಅಧ್ಯಕ್ಷ ಲೋಕೇಶ್ ನಾಗಸಂದ್ರ ತಿಳಿಸಿದರು.   ನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕು ವೀರಶೈವ ಲಿಂಗಾಯತ ಸಮಾಜ […]

Continue Reading

ವಯಸ್ಕರ ಬಿಸಿಜಿ ಲಸಿಕಾ ಕಾರ್ಯಕ್ರಮದಲ್ಲಿ ನೀವೂ ಭಾಗವಹಿಸಿ TB ಸೋಲಿಸಿ – ದೊಡ್ಡಬಳ್ಳಾಪುರ ಕ್ಷಯರೋಗ ನಿರ್ಮೂಲನ ಘಟಕ

ದೊಡ್ಡಬಳ್ಳಾಪುರ : ತಾಲ್ಲೂಕಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಕ್ಷಯರೋಗ(TB) ತಡೆಗಟ್ಟುವ ನಿಟ್ಟಿನಲ್ಲಿ ವಯಸ್ಕರಿಗೆ ಬಿಸಿಜಿ ಲಸಿಕೆಯನ್ನು ಉಚಿತವಾಗಿ ನೀಡುತ್ತಿದ್ದು, ವಯಸ್ಕರು ಈ ಲಸಿಕೆಯನ್ನು ಪಡೆಯುವ ಮೂಲಕ ಕ್ಷಯರೋಗದಿಂದ ಉಂಟಾಗುವ ತೊಂದರೆ / ಅಡ್ಡಪರಿಣಾಮಗಳಿಂದ ಪಾರಾಗಬಹುದಾಗಿದೆ ಎಂದು ದೊಡ್ಡಬಳ್ಳಾಪುರ ಕ್ಷಯರೋಗ ನಿರ್ಮೂಲನ ಘಟಕ ತಿಳಿಸಿದೆ.   ಈಗಾಗಲೇ ರಾಜ್ಯದ ಬಾಗಲಕೋಟೆ, ಬೀದರ್, ದಕ್ಷಿಣ ಕನ್ನಡ, ಕಲಬುರಗಿ, ಉಡುಪಿ, ವಿಜಯಪುರ, ಬಿಬಿಎಂಪಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬೆಳಗಾವಿ, ಚಾಮರಾಜನಗರ, ಚಿಕ್ಕಮಗಳೂರು,ç ದಾವಣಗೆರೆ, ಧಾರವಾಡ, ಕೋಲಾರ ಮತ್ತು ಉತ್ತರಕನ್ನಡ 16 ಜಿಲ್ಲೆಗಳಲ್ಲಿ […]

Continue Reading

ಸರ್ಕಾರಿ ಜಾಗ ಉಳಿಸುವಂತೆ ಅಭಿಯಾನ ಪ್ರಾರಂಭಿಸಿದ ಕೆ ಆರ್ ಎಸ್ : ಉಪವಿಭಾಗಾಧಿಕಾರಿಗಳನ್ನು ಭೇಟಿ ಮಾಡಿ ಶೀಘ್ರ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ ಜಿಲ್ಲಾಧ್ಯಕ್ಷ ಬಿ. ಶಿವಶಂಕರ್

ದೊಡ್ಡಬಳ್ಳಾಪುರ : ನಮ್ಮ ತಾಲ್ಲೂಕಿನಲ್ಲಿ ಹಲವಾರು ಸರ್ಕಾರಿ ಸ್ಥಳಗಳನ್ನು ಪ್ರಭಾವಿಗಳು ಹುನ್ನಾರ ನೆಡೆಸಿ ಕಬಳಿಕೆ ಮಾಡಿದ್ದಾರೆ ಸದರಿ ಜಾಗಗಳನ್ನು ಉಳಿಸುವಂತೆ ನಮ್ಮ ಕೆ ಆರ್ ಎಸ್ ಪಕ್ಷವು ಅಧಿಕಾರಿಗಳನ್ನು ಭೇಟಿಮಾಡಿ ಒತ್ತಾಯಿಸಿದ್ದೇವೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಬಿ. ಶಿವಶಂಕರ್ ತಿಳಿಸಿದರು.   ನಗರದ ತಾಲ್ಲೂಕು ಕಚೇರಿ ಮುಂಭಾಗ ಮಧ್ಯಮಗಳೊಂದಿಗೆ ಮಾತನಾಡಿದ ಅವರು ಇತ್ತೀಚಿನ ದಿನಗಳಲ್ಲಿ ರಾಜ್ಯದ ಸರ್ಕಾರಿ ಗೋಮಾಳ, ಗುಂಡು ತೋಪು, ಇತರೆ ಸ್ಥಳಗಳು ಕಾಣೆಯಾಗುತ್ತಿವೆ, ಕೆಲ ಭ್ರಷ್ಟ ಅಧಿಕಾರಿಗಳ ಸಹಕಾರದಿಂದ ಕೆಲ ಪ್ರಭಾವಿಗಳು ಸರ್ಕಾರಿ […]

Continue Reading

ಕಾಂಗ್ರೆಸ್ ಜೆಡಿಎಸ್ ಜಂಟಿ ಪತ್ರಿಕಾಗೋಷ್ಠಿ : ಜೆಡಿಎಸ್ ಅಭ್ಯರ್ಥಿ ಹುಸ್ಕೂರ್ ಟಿ ಆನಂದ್ ರವರಿಗೆ ಬೇಷರತ್ ಬೆಂಬಲ ಸೂಚಿಸಿದ ಕಾಂಗ್ರೆಸ್ ನಾಯಕರು

ದೊಡ್ಡಬಳ್ಳಾಪುರ : ನೆನ್ನೆ ತಾನೇ ಜೆಡಿಎಸ್ ಜಿಲ್ಲಾ ಮತ್ತು ತಾಲ್ಲೂಕು ಘಟಕ ಪತ್ರಿಕಾ ಗೋಷ್ಠಿ ನೆಡೆಸಿ ತನ್ನ ಅಧಿಕೃತ ಅಭ್ಯರ್ಥಿಯಾಗಿ ಹುಸ್ಕೂರ್ ಟಿ ಆನಂದ್ ರವರನ್ನು ಘೋಷಣೆ ಮಾಡಿತ್ತು, ಕಾಂಗ್ರೆಸ್ ಬಮೂಲ್ ಚುನಾವಣೆಯಲ್ಲಿ ತನ್ನ ಪಕ್ಷದ ಅಭ್ಯರ್ಥಿಯನ್ನು ಹಾಕದೆ ಕುತೂಹಲ ಮೂಡಿಸಿತ್ತು ಇಂದು ಆ ಕುತೂಹಲಕ್ಕೆ ತೆರೆ ಬಿದಿದ್ದೆ. ಹೌದು ಸ್ಥಳೀಯ ಕಾಂಗ್ರೆಸ್ ಪಕ್ಷವು ತನ್ನ ಬಾಹ್ಯ ಬೆಂಬಲ ಸುಚಿಸುವ ಮೂಲಕ ಜೆಡಿಎಸ್ ಪಕ್ಷದ ಅಭ್ಯರ್ಥಿಗೆ ಯಾವುದೇ ಷರತ್ತು ವಿಧಿಸದೆ ಬೆಂಬಲ ಸೂಚಿಸಿದೆ. ನಗರದ ಕಾಂಗ್ರೆಸ್ ಕೇಂದ್ರ […]

Continue Reading

ಬಡ ರೋಗಿಗಳಿಗೆ ಕಿಟ್ ವಿತರಣೆ ಮಾಡುವ ಮೂಲಕ ಹುಟ್ಟು ಹಬ್ಬ ಆಚರಣೆ ಮಾಡಿಕೊಂಡ ರಾಜಘಟ್ಟ ಗ್ರಾಮಪಂಚಾಯತಿ ಸದಸ್ಯ ಶಿವ ಕುಮಾರ್

ದೊಡ್ಡಬಳ್ಳಾಪುರ : ಸಾರ್ವಜನಿಕರ ಆಸ್ಪತ್ರೆಗೆ ಭೇಟಿ ನೀಡಿ ಬಡ ರೋಗಿಗಳಿಗೆ ಹಣ್ಣು ಆಹಾರ ವಿತರಣೆ ಮಾಡುವ ಮೂಲಕ ರಾಜಘಟ್ಟ ಗ್ರಾಮಪಂಚಾಯತಿ ಸದಸ್ಯ ಶಿವಕುಮಾರ್ ತಮ್ಮ 35ನೇ ಹುಟ್ಟು ಹಬ್ಬವನ್ನು ವಿಶೇಷವಾಗಿ ಆಚರಿಸಿಕೊಂಡಿದ್ದಾರೆ.   ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು ಮತ್ತು ಇತರೆ ಪದಾರ್ಥಗಳು ಹೊಂದಿರುವ ಕಿಟ್ ವಿತರಣೆ ಮಾಡಿ ಮಾತನಾಡಿದ ಅವರು ಪ್ರತಿ ವರ್ಷದಂತೆ ಈ ವರ್ಷವೂ ಕೂಡ ನನ್ನ ಹುಟ್ಟುಹಬ್ಬವನ್ನು ಸ್ನೇಹಿತರ ಜೊತೆಗೂಡಿ ಬಡ ರೋಗಿಗಳಿಗೆ ಬ್ರೆಡ್ ಮತ್ತು ಹಣ್ಣು ಹಾಗೂ ಇತರೆ ಆಹಾರ ಪದಾರ್ಥಗಳು ಒಳಗೊಂಡ […]

Continue Reading

ಬಮೂಲ್ ಚುನಾವಣೆ : ಜೆಡಿಎಸ್ ಅಭ್ಯರ್ಥಿಯನ್ನಾಗಿ ಹುಸ್ಕೂರು ಟಿ ಆನಂದ್ ಘೋಷಣೆ : ಸ್ಥಳೀಯ ಚುನಾವಣೆಗಳಲ್ಲಿ ಮೈತ್ರಿ ಪಾಲಿಸಲೇಬೇಕೆಂಬ ನಿಯಮವಿಲ್ಲ ಎಂದ ಮುಖಂಡರು

ದೊಡ್ಡಬಳ್ಳಾಪುರ : ಇದೇ ಮೇ ತಿಂಗಳ 25 ರಂದು ನಡೆಯಲಿರುವ ಬಮೂಲ್ ಚುನಾವಣೆಗೆ ಸ್ಥಳೀಯವಾಗಿ ಜೆಡಿಎಸ್ ತನ್ನ ಅಭ್ಯರ್ಥಿಯನ್ನಾಗಿ ಹುಸ್ಕೂರು ಟಿ ಆನಂದ್ ರವರನ್ನು ಅಧಿಕೃತವಾಗಿ ಘೋಷಣೆ ಮಾಡಿದೆ.   ನಗರದ ಜೆಡಿಎಸ್ ಕೇಂದ್ರ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಪಕ್ಷದ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಬಿ ಮುನೇಗೌಡ ಅಭ್ಯರ್ಥಿಯ ಘೋಷಣೆ ಮಾಡಿದರು, ಈ ಸಂದರ್ಭದಲ್ಲಿ ಮಾತನಾಡಿದ ಅವರು ಸ್ಥಳೀಯವಾಗಿ ಜೆಡಿಎಸ್ ಪಕ್ಷದ ಶಕ್ತಿ ಪ್ರದರ್ಶನ ಹಾಗೂ ಕಾರ್ಯಕರ್ತರಲ್ಲಿ ಹುಮ್ಮಸ್ಸು ಹೆಚ್ಚಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ, ಬಮೂಲ್ ಚುನಾವಣೆಯ […]

Continue Reading

ಖಾಸಗಿ ಶಾಲೆಗಳು ಸರ್ಕಾರಿ ಮಾನದಂಡದಂತೆ ಶುಲ್ಕ ಪಡೆಯಲಿ – ಸಂಜೀವ್ ನಾಯಕ್

ದೊಡ್ಡಬಳ್ಳಾಪುರ : ಖಾಸಗಿ ಪ್ರಾಥಮಿಕ, ಪ್ರಾಥಮಿಕ ಪೂರ್ವ ಮತ್ತು ಪ್ರೌಢಶಿಕ್ಷಣ ಶಾಲೆಗಳಿಗೆ ಸರ್ಕಾರಿ ಮಾನದಂಡದಲ್ಲಿ ಶುಲ್ಕ ನಿಗದಿ ಪಡಿಸಲು ಹಾಗೂ ಕೂಡಲೇ ಆದೇಶ ಹೊರಡಿಸುವಂತೆ ಉಪನಿರ್ದೇಶಕರಿಗೆ ಪತ್ರ ಮುಖೇನ ತಿಳಿಸಲಾಗಿದೆ ಎಂದು ಕನ್ನಡ ಪಕ್ಷದ ರಾಜ್ಯ ಉಪಾಧ್ಯಕ್ಷ ಸಂಜೀವ ನಾಯಕ್ ತಿಳಿಸಿದರು. ನಗರದ ಪ್ರವಾಸಿ ಮಂದಿರದಲ್ಲಿ ಪಕ್ಷದ ವತಿಯಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. 2025-26ನೇ ಸಾಲಿನ ಶಾಲಾ ತರಗತಿಗಳು ಪ್ರಾರಂಭವಾಗುತ್ತಿದ್ದು, ಖಾಸಗಿ ಶಾಲೆಗಳಲ್ಲಿ, ಸರ್ಕಾರದ ಮಾನದಂಡದ ಪ್ರಕಾರ ಶುಲ್ಕ ಪಡೆದು ಕೊಳ್ಳದೆ ತಮಗಿಷ್ಟ ಬಂದಂತೆ ವಾರ್ಷಿಕ […]

Continue Reading

ಆಪರೇಷನ್‌ ಸಿಂಧೂರ್‌ ಯಶಸ್ಸು: ಲಯನ್ಸ್‌ ಕ್ಲಬ್‌ ನೇತೃತ್ವದಲ್ಲಿ 2 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಂದ ಬೃಹತ್‌ ಜಾಥಾ

ದೊಡ್ಡಬಳ್ಳಾಪುರ: ಭಾರತೀಯ ಸೇನಾಪಡೆಗಳು ಭಯೋತ್ಪಾದಕರ ವಿರುದ್ದ ನಡೆಸಿದ ಆಪರೇಷನ್‌ ಸಿಂಧೂರ್‌ ಯಶಸ್ವಿಯಾದ ಹಿನ್ನಲೆ ಸೇನಾ ಪಡೆಗಳ ಪರಾಕ್ರಮವನ್ನು ಸ್ಮರಿಸಿ ಹಾಗೂ ಉಗ್ರವಾದವನ್ನು ಖಂಡಿಸಿ ಇಲ್ಲಿನ ಆರ್.ಎಲ್.ಜಾಲಪ್ಪ ಸಮೂಹ ಶಿಕ್ಷಣ ಸಂಸ್ಥೆಗಳು ಹಾಗೂ ಲಯನ್ಸ್‌ ಕ್ಲಬ್‌ ಆಫ್‌ ಆರ್.ಎಲ್.ಜಾಲಪ್ಪ ಇನ್ಸ್‌ಟಿಟ್ಯೂಷನ್ಸ್‌ ನೇತೃತ್ವದಲ್ಲಿ ಬೃಹತ್‌ ವಿದ್ಯಾರ್ಥಿ ಜಾಥಾ ಶನಿವಾರ ನಡೆಯಿತು. ನೆಲದಾಂಜನೇಯಸ್ವಾಮಿ ದೇವಾಲಯ, ಬಸವ ಭವನ ವೃತ್ತ ಹಾಗೂ ಕೆಸಿಪಿ ವೃತ್ತದ ಬಳಿಯಿಂದ 3 ಪ್ರತ್ಯೇಕ ಜಾಥಾಗಳು ಹೊರಟು ಭಗತ್‌ಸಿಂಗ್‌ ಕ್ರೀಡಾಂಗಣದಲ್ಲಿ ಸುಮಾರು 2 ಸಾವಿರ ವಿದ್ಯಾರ್ಥಿಗಳು ಬಂದು ಸೇರಿದರು. […]

Continue Reading

ಘಾಟಿ ಸುಬ್ರಹ್ಮಣ್ಯ : ಹುಂಡಿ ಎಣಿಕೆ ಕಾರ್ಯ ಮುಕ್ತಾಯ : ಸಂಗ್ರಹವಾದ ಒಟ್ಟು ಮೊತ್ತ ಎಷ್ಟು.. ಗೊತ್ತಾ ???

ದೊಡ್ಡಬಳ್ಳಾಪುರ ತಾಲೂಕಿನ ಪ್ರಸಿದ್ದ ಶ್ರೀ ಘಾಟಿ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದಲ್ಲಿ ಹುಂಡಿ ಏಣಿಕೆ ಕಾರ್ಯ ಮುಕ್ತಾಯವಾಗಿದ್ದು ಒಟ್ಟು 59,28,876 ಮೊತ್ತದ ಕಾಣಿಕೆ ಸಂಗ್ರಹವಾಗಿದೆ.     ಭಕ್ತಾದಿಗಳು 63, 000(1kg 400ಗ್ರಾಂ ) ರೂಗಳ ಮೌಲ್ಯದ ಬೆಳ್ಳಿ, 1,57,000( 19.500 ಮಿಲಿ ) ರೂಪಾಯಿಗಳ ಮೌಲ್ಯದ ಬಂಗಾರವನ್ನು ಕಾಣಿಕೆ ರೂಪದಲ್ಲಿ ದೇವಾಲಯದ ಹುಂಡಿಯಲ್ಲಿ ಹಾಕಿದ್ದಾರೆ. ದೇವಾಲಯಕ್ಕೆ ಆಗಮಿಸಿದ ಭಕ್ತಾದಿಗಳ ಸಮ್ಮುಖದಲ್ಲಿ ಹುಂಡಿ ಎಣಿಕೆ ಮಾಡಲಾಯಿತು.   ಹುಂಡಿ ಎಣಿಕೆ ಕಾರ್ಯದಲ್ಲಿ ದೇವಾಲಯದ ಕಾರ್ಯದರ್ಶಿ ಎಂ ನಾರಾಯಣಸ್ವಾಮಿ, ಪ್ರಧಾನ […]

Continue Reading