ನವೋದಯ ಚಾರಿಟೇಬಲ್ ಟ್ರಸ್ಟ್ ನವತಿಯಿಂದ ಗ್ರಾಮೀಣ ಆರೋಗ್ಯ ಮತ್ತುಪರಿಸರ ಅಧ್ಯಯನ ಕೇಂದ್ರ ಉದ್ಘಾಟನೆ : ಪದ್ಮಶ್ರೀ ಪುರಸ್ಕೃತರಾದ ಡಾ.ಸಿ.ಆರ್. ಚಂದ್ರಶೇಖರ್ ಭಾಗಿ

ಜಿಲ್ಲೆ ತಾಲೂಕು
Spread the love

ದೊಡ್ಡಬಳ್ಳಾಪುರ: ಕರೋನಾ ನಂತರ ಶೇಕಡಾ ಮೂವತ್ತರಷ್ಷು ಜನತೆ ಮಾನಸಿಕ ಖಾಯಿಲೆಗಳಿಂದ ಬಳಲುತ್ತಿದ್ದಾರೆ ಎಂದು ಖ್ಯಾತ ಮನೋವೈದ್ಯರು ಪದ್ಮಶ್ರೀ ಪುರಸ್ಕೃತರಾದ ಡಾ.ಸಿ.ಆರ್‌.ಚಂದ್ರಶೇಖರ್ ತಿಳಿಸಿದರು.

ನವೋದಯ ಚಾರಿಟೇಬಲ್ ಟ್ರಸ್ಟ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಸುರಾನಾ ಕಾಲೇಜು ಇವರ ಸಹಬಾಗಿತ್ವದಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕಿನ ದೊಡ್ಡರಾಯಪ್ಪನಹಳ್ಳಿಯಲ್ಲಿ ನವೋದಯ ಗ್ರಾಮೀಣ ಆರೋಗ್ಯ ಮತ್ತು ಪರಿಸರ ಅಧ್ಯಯನ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಇತ್ತೀಚಿನ ಸಮೀಕ್ಷೆ ಪ್ರಕಾರ ಮನುಷ್ಯ ಅತಿಯಾದ ಒತ್ತಡಗಳಿಗೆ ಒಳಗಾಗಿ ಮಾನಸಿಕವಾಗಿ ಕುಗ್ಗುತ್ತಿದ್ದಾನೆ ಯುವಕರು ಸಾಕಷ್ಟು ಮಂದಿ ದುಶ್ಚಟಗಳಿಗೆ ದಾಸರಾಗುತ್ತಿದ್ದಾರೆ ಇದರಿಂದ ಹೊರ ಬರಲು ಯೋಗ,ಧ್ಯಾನ ಉತ್ತಮ ವ್ಯಾಯಾಮ,ಒಳ್ಳೆಯ ಚಿಂತನೆಗಳನ್ನು ಮಾಡಬೇಕು ಎಂದರು. ಅತಿಯಾದ ಆಸೆ ಚಿಂತೆಯೂ ಸಹ ಮಾನವನ ಆಕಾಂಕ್ಷೆಗಳಲಿಂದಲೂ ಕೂಡ ಮಾನಸಿಕ ಖಿನ್ನತೆಗಳಿಗೆ ಒಳಗಾಗುತ್ತಿದ್ದಾರೆ ಈ ನಿಟ್ಟಿನಲ್ಲಿ ಈ ಗ್ರಾಮೀಣ ಪ್ರದೇಶದಲ್ಲಿ ನವೋದಯ ಚಾರಿಟೇಬಲ್ ಅಧ್ಯಕ್ಷರಾದ ಚೇತನ್ ಮತ್ತು ಅವರ ತಂಡ ಗ್ರಾಮೀಣ ಆರೋಗ್ಯ ಅಧ್ಯಯನ ಕೇಂದ್ರವನ್ನು ತೆರೆದಿರುವುದು ಬಹಳ ಸಂತೋಷದ ವಿಷಯ ಎಂದರು.ತೂಬಗೆರೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಉದಯಾರಾಧ್ಯ ಮಾತನಾಡಿ ಗ್ರಾಮೀಣ ಭಾಗದಲ್ಲಿ ಯುವಕ ಮಿತ್ರರು ಒತ್ತಡಗಳಿಗೆ ಒಳಗಾಗಿ ಸಾಕಷ್ಟು ಮಧ್ಯಪಾನ ಧೂಮಪಾನಗಳಂತ ದುಶ್ಚಟಗಳಿಗೆ ದಾಸರಾಗುತ್ತಿದ್ದಾರೆ ಈಗಿನ ಸ್ಪರ್ಧಾ ಜಗತ್ತಿನಲ್ಲಿ ಸಣ್ಣ ಸಣ್ಣ ವಿಚಾರಗಳಿಗೂ ಯುವಕ ಯುವತಿಯರು ಅತ್ಮಹತ್ಯೆಯಂತಹ ಕೆಲಸಗಳಿಗೆ ಕೈ ಹಾಕುತ್ತಿರುವುದು ವಿಷಾದಕರ ಸಂಗತಿ,ಹಾಗೂ ಮಾನಸಿಕ ಕಾರ್ಯಕ್ರಮಗಳಡಿ ನೀಡುವ ಚಿಕಿತ್ಸೆಗಳನ್ನು ಪಡೆದುಕೊಳ್ಳಲು ಯಾರು ಕೂಡ ಮುಂದೆ ಬರುತ್ತಿಲ್ಲ ಈ ನಿಟ್ಟಿನಲ್ಲಿ ನವೋದಯ ಟ್ರಸ್ಟ್ ಗ್ರಾಮೀಣ ಭಾಗದ ಜನತೆಗೆ ಉಪಯೋಗವಾಗಲು ಗ್ರಾಮೀಣ ಆರೋಗ್ಯ ಸೇವಾ ಕೇಂದ್ರ ತೆರೆದಿರುವುದ ಸಂತಸದ ವಿಷಯ ಎಂದರು.

 

ಈ ಕಾರ್ಯಕ್ರಮದಲ್ಲಿ ಸುರಾನ ಕಾಲೇಜು ಮುಖ್ಯಸ್ಥರಾದ ಡಾ. ಸುದರ್ಶನ್ ಸರ್ಕಾರಿ ಆಸ್ಪತ್ರೆಯ ವೈದ್ಯರಾದ ಡಾ.ಪರಮೇಶ್ವರ,ತೂಬಗೆರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಾದ ಡಾ.ಪೂರ್ಣಿಮಾ.ಗ್ರಾಮ ಪಂಚಾಯಿತಿ ಸದಸ್ಯರಾದ ಶ್ವೇತ ಮುನಿಶಾಮಿಗೌಡ,ಅರಣ್ಯ ಇಲಾಖೆ ಉಪ ವಲಯ ಅರಣ್ಯಧಿಕಾರಿಗಳಾದ ಚಂದ್ರಶೇಖರ್ ಎಂಪಿಸಿಎಸ್ ಅಧ್ಯಕ್ಷರಾದ ಚೊಕ್ಕರೆಡ್ಡಿ ನವೋದಯ ಚಾರಿಟೇಬಲ್ ಟ್ರಸ್ಟ್ ತಂಡದ ಲೋಹಿತ್ .ವೈ.ಟಿ. ಕಾರ್ತಿಕ್ ಗೌಡ, ಮಂಜುನಾಥ್, ಆಶಾ ಕಾರ್ಯಕರ್ತೆಯರು ಸುರನಾ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *