ರೈತರ ಸಹಾಯಕ್ಕೆ ನಿಂತ ನವ ಕರ್ನಾಟಕ ಯುವ ಶಕ್ತಿ ವೇದಿಕೆ : ದನಗಳಿಗೆ ಉಚಿತ ಮೇವು ನೀರು ವಿತರಣೆ

ದೊಡ್ಡಬಳ್ಳಾಪುರ : ಕಳೆದ ಮೂರು ವರ್ಷಗಳಿಂದ ಶ್ರೀ ಕ್ಷೇತ್ರ ಘಾಟಿ ಸುಬ್ರಮಣ್ಯ ದಲ್ಲಿ ನಿಂತು ಹೋಗಿದ್ದ ದನಗಳ ಜಾತ್ರೆ ಈ ಬಾರಿ ಅದ್ಧೂರಿಯಾಗಿ ಆರಂಭವಾಗಿದ್ದು ಸಾವಿರಾರು ಸಂಖ್ಯೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಜೋಡಿ ಎತ್ತುಗಳು ಜಾತ್ರೆಯಲ್ಲಿ ಸೇರಿವೆ.ಜಾತ್ರೆಯಲ್ಲಿ ಸೇರಿರುವ ಜಾನುವಾರುಗಳಿಗೆ ನವ ಕರ್ನಾಟಕ ಯುವ ಶಕ್ತಿ ವೇದಿಕೆ ವತಿಯಿಂದ ಉಚಿತವಾಗಿ ಮೇವು ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡುವ ಮೂಲಕ ರೈತರಿಗೆ ನೆರವಾಗಿದೆ   ಈ ಸಂದರ್ಭದಲ್ಲಿ ನವ ಕರ್ನಾಟಕ ಯುವ ಶಕ್ತಿ ವೇದಿಕೆಯ ರಾಜ್ಯಾಧ್ಯಕ್ಷರಾದ ಅಂಬರೀಷ್ […]

Continue Reading

ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ನೂತನ ಪಿಎಸ್ಏನ್ ಘಟಕ ಸ್ಥಾಪನೆ : ಸಂಸ್ಥೆಯ ಗಣ್ಯರಿಂದ ಉದ್ಘಾಟನೆಗೊಂಡ ತಾಲ್ಲೂಕಿನ ಮೊದಲ ಅಧಿಕೃತ ಪಿಎಸ್ಏನ್ ಮಾರಾಟ ಮತ್ತು ಸೇವಾ ಘಟಕ

ದೊಡ್ಡಬಳ್ಳಾಪುರ : ಸ್ಥಳೀಯವಾಗಿ ಶಾಲಾ ಬಸ್ ಹಾಗೂ ಟೆಂಪೋ ಟ್ರಕ್ ಗಳ ಮಾರಾಟದ ಬೇಡಿಕೆ ಮೇರೆಗೆ ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಮೊದಲ ಬಾರಿಗೆ ಪಿಎಸ್ಏನ್  ಘಟಕವನ್ನು ಸ್ಥಾಪಿಸಲಾಗಿದೆ ಅತ್ಯುತ್ತಮ ಸೇವೆ ನೀಡುವಲ್ಲಿ ಹೆಸರುವಾಸಿಯಾಗಿರುವ ನಮ್ಮ ಸಂಸ್ಥೆ ಇನ್ನೂ ಮುಂದೆ ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಅಧಿಕೃತವಾಗಿ ಕಾರ್ಯ ನಿರ್ವಹಿಸಲಿದೆ ಎಂದು ಪಿಎಸ್ಏನ್  ಸಂಸ್ಥೆಯ ಜಂಟಿ ನಿರ್ವಾಹಕ ನಿರ್ದೇಶಕರಾದ ಪವಿತ್ರ ಪದ್ಮನಾಭನ್ ತಿಳಿಸಿದರು   ತಾಲ್ಲೂಕಿನ ಕೆಸ್ತೂರು ಗೇಟ್ ಬಳಿ ಯಿಚರ್ ಪಿಎಸ್ಏನ್  ಉದ್ಘಾಟಿಸಿ ಮಾತನಾಡಿದ ಅವರು  ದೊಡ್ಡಬಳ್ಳಾಪುರ ತಾಲ್ಲೂಕಿನ ನೂತನ ಪಿಎಸ್‌ಏನ್  […]

Continue Reading

ಕನ್ನಡ ಭಾಷೆಯ ನಾಮಫಲಕ ಬಳಕೆ ಕಡ್ಡಾಯ ಖಡಕ್ ವಾರ್ನಿಂಗ್ ಕೊಟ್ಟ ಕರವೇ : ವ್ಯಾಪಾರಸ್ಥರು ಎಚ್ಚೆದ್ದುಕೊಳ್ಳದ ಪಕ್ಷದಲ್ಲಿ ಉಗ್ರ ಹೋರಾಟ ಖಂಡಿತಾ – ಪುರುಷೋತ್ತಮ್ ಗೌಡ

ಬೆಂಗಳೂರು : ಕರ್ನಾಟಕ ರಕ್ಷಣಾ ವೇದಿಕೆ ಸಂಸ್ಥಾಪಕರಾದ ಟಿ .ಎ. ನಾರಾಯಣ್ ಗೌಡ ಅವರು ಒಂದು ತಿಂಗಳ ಹಿಂದೆ ಕರ್ನಾಟಕ ರಾಜ್ಯ ಕನ್ನಡ ಅಭಿಮಾನೋತ್ಸವದ ಸಂದರ್ಭದಲ್ಲಿ ಬೆಂಗಳೂರಿನ ಹಾಗೂ ರಾಜ್ಯದಲ್ಲಿ ವಾಸಿಸುವ ಹೊರ ರಾಜ್ಯದ ವಲಸಿಗರಿಗೆ ಡಿಸೆಂಬರ್ 27ರ ವರೆಗೆ ಇಂಗ್ಲಿಷ್ ನಾಮಪಲಕಗಳನ್ನು ತೆರವು ಗೊಳಿಸಿ 65% ಕನ್ನಡ ಕಡ್ಡಾಯವಾಗಿ ಹೊಂದಿರುವ ನಾಮಫಲಕಗಳನ್ನು ಹಾಕಬೇಕೆಂದು ಎಚ್ಚರಿಕೆ ನೀಡಲಾಗಿತ್ತು ಈ ಕುರಿತಂತೆ ಇಂದು ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಘಟಕದ ವತಿಯಿಂದ ತಾಲ್ಲೂಕು ಅಧ್ಯಕ್ಷರಾದ ಪುರುಷೋತ್ತಮ್ ಗೌಡ ರವರ […]

Continue Reading

ಮನೆಮುಂದೆ ನಿಂತ ಕೊಳಚೇನೀರು : ಅವ್ಯವಸ್ಥೆ ಸರಿಪಡಿಸಲು ನಗರಸಭೆಗೆ ಮನವಿ ಮಾಡಿದ ಸ್ಥಳೀಯ ನಿವಾಸಿಗಳು

ದೊಡ್ಡಬಳ್ಳಾಪುರ : ವಾರದಲ್ಲಿ ಎರಡು ಮೂರು ದಿನ ಮಕ್ಕಳು ಕಾಯಿಲೆಗೆ ಒಳಗಾಗುತ್ತಿದ್ದಾರೆ ಸರಿಯಾಗಿ ಶಾಲೆಗೆ ಹೋಗಲು ಸಾಧ್ಯವಾಗುತ್ತಿಲ್ಲ ಕೊಳೆತ ನೀರಿನ ವಾಸನೆಗೆ ಮನೆಯಲ್ಲಿ ವಾಸಿಸಲು ಆಗುತ್ತಿಲ್ಲ ನಮ್ಮ ಗೋಳು ಯಾರಿಗೆ ಹೇಳುವುದು ಎಂದು ಕಛೇರಿ ಪಾಳ್ಯ ನಿವಾಸಿಗಳು ತಮ್ಮ ನೋವನ್ನು ಹೇಳಿಕೊಂಡರು ತಾಲ್ಲೂಕು ಕಚೇರಿಯ ಕೂಗಳತೆ ದೂರದಲ್ಲಿ ಇರುವ ಮನೆಗಳ ಪರಿಸ್ಥಿತಿ ಇದಾಗಿದ್ದು ತಾಲ್ಲೂಕಿನ ಕಛೇರಿ ಪಾಳ್ಯದ ಕೆಲ ಮನೆಗಳ ನಿವಾಸಿಗಳು ಕೊಳೆತ ಕಲುಷಿತ ನೀರಿನ ಪಕ್ಕದಲ್ಲಿ ಜೀವನ ಸಾಗಿಸುವಂಥಾಗಿದೆ ದೊಡ್ಡಬಳ್ಳಾಪುರ ತಾಲ್ಲೂಕಿನ ನಗರ ಭಾಗದ ಮುಖ್ಯ […]

Continue Reading

ಸ್ವ ಉದ್ಯೋಗ ಆರಂಭಿಸಲು ತರಬೇತಿ ಶಿಬಿರ : ಯೋಜನಾಧಿಕಾರಿಗಳಿಂದ ವಿವಿಧ ಸ್ವ ಉದ್ಯೋಗ ಕುರಿತು ಶಿಬಿರಾರ್ಥಿಗಳಿಗೆ ಮಾಹಿತಿ

ದೊಡ್ಡಬಳ್ಳಾಪುರ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ದೊಡ್ಡಬಳ್ಳಾಪುರ ತಾಲ್ಲೂಕಿನ ಕಸಬಾ ವಲಯದ ಇಸ್ಲಾಪುರ ಕಾರ್ಯಕ್ಷೇತ್ರದಲ್ಲಿ ಸ್ವ ಉದ್ಯೋಗ ತರಬೇತಿ ಕಾರ್ಯಾಗಾರ ನಡೆಯಿತು ಮಹಿಳೆಯರಿಗೆ ಸ್ವಾವಲಂಬಿ ಜೀವನ ನಡೆಸಲು ಸ್ವ ಉದ್ಯೋಗ ಅತ್ಯಂತ ಅವಶ್ಯಕವಾಗಿದ್ದು ಮಹಿಳಾ ಸಬಲೀಕರಣಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸದಾ ಸಹಕಾರ ನೀಡಿ ಸ್ಪಂದಿಸುತ್ತದೆ ಎಂದು ಯೋಜನಾಧಿಕಾರಿಗಳಾದ ಶ್ರೀಮತಿ ಸುಧಾ ಭಾಸ್ಕರ್ ನಾಯ್ಕ್ ತಿಳಿಸಿದರು   ಕಾರ್ಯಕ್ರಮವನ್ನು ಉದ್ಘಾಟಿಸಿ ಪ್ರಾಸ್ತಾವಿಕವಾಗಿಮಾತನಾಡಿದ ಅವರು ಸ್ವ ಉದ್ಯೋಗ ಕೈಗೊಳ್ಳುವುದರಿಂದ ಮನೆಯಲ್ಲಿ ಕುಳಿತು […]

Continue Reading

ಮೇಕೆಯನ್ನು ಬಲಿ ಪಡೆದ ಚಿರತೆ : ಹೊಸಹಳ್ಳಿ ವ್ಯಾಪ್ತಿಯ ಕುಕ್ಕಲಳ್ಳಿ ಗ್ರಾಮದಲ್ಲಿ ಘಟನೆ

ದೊಡ್ಡಬಳ್ಳಾಪುರ : ಚಿರತೆಯೊಂದು ಮನೆ ಬಳಿ ಇದ್ದ ಮೇಕೆಯನ್ನು ಎಳೆದೊಯ್ದು ಕೊಂದು ಹಾಕಿರುವ ಘಟನೆ ಇಂದು‌ ಮುಂಜಾನೆ ಸುಮಾರು 3:45ರ ಸಮಯದಲ್ಲಿ ತಾಲೂಕಿನ ಹೊಸಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಕ್ಕಲಳ್ಳಿ ಗ್ರಾಮದಲ್ಲಿ ನಡೆದಿದೆ.   ರೈತ ಶಶಿಧರ್ ಅವರಿಗೆ ಸೇರಿದ ಮೇಕೆಯನ್ನು ಚಿರತೆ ಬಲಿ ಪಡೆದಿದೆ.   ಎಂದಿನಂತೆ ಮನೆಯ ಕಾಂಪೌಂಡ್ ಒಳಗೆ ಎರಡು ಮೇಕೆಗಳನ್ನ ಕಟ್ಟಿಹಾಕಲಾಗಿತ್ತು. ಎರಡು ಮೇಕೆಗಳಲ್ಲಿ ಒಂದು ಮೇಕೆಯನ್ನು‌ ಊರ ಹೊರವಲಯದಲ್ಲಿರುವ ಹಳ್ಳದ ಕಡೆ ಹೊತ್ತೊಯ್ದು ಅರೆಬರೆ ತಿಂದು ಪರಾರಿಯಾಗಿದೆ.   ಇದರಿಂದ […]

Continue Reading

ರಂಗೇರಿದ ವ್ಯಾಪಾರ ಭರಾಟೆ : ಹಲವು ವರ್ಷಗಳ‌ ನಂತರ ಕಳೆಗಟ್ಟಿದ ಘಾಟಿ ದನಗಳ ಜಾತ್ರೆ

ಘಾಟಿ ಸುಬ್ರಹ್ಮಣ್ಯ ಜಾತ್ರೆಯಲ್ಲಿ ಕೃಷಿ ಕೆಲಸಕ್ಕೆ ಬೇಕಾಗುವ ಹೋರಿಗಳನ್ನು ಖರೀದಿಸಲು ರಾಜ್ಯದ ಬಳ್ಳಾರಿ, ದಾವಣಗೆರೆ, ರಾಯಚೂರು, ಬೀದರ್ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಮಾತ್ರವಲ್ಲದೆ ಹೊರ ರಾಜ್ಯದ ತಮಿಳುನಾಡಿನ ಸೇಲಂ, ಹೊಸೂರು,ಆಂಧ್ರಪ್ರದೇಶದ ಹಿಂದೂಪುರ,ಅನಂತಪುರ,ಮಹಾರಾಷ್ಟ್ರದ ಕೊಲ್ಲಾಪುರ,ಸಾಂಗ್ಲಿ ಸೇರಿದಂತೆ ವಿವಿಧ ಕಡೆಗಳಿಂದಲು ರೈತರು ಬರುತ್ತಾರೆ.   ದಕ್ಷಿಣ ಭಾರತದಲ್ಲೇ ದನಗಳ ಜಾತ್ರೆಗೆ ಪ್ರಸಿದ್ಧಿಯಾಗಿರುವ ಘಾಟಿ ಸುಬ್ರಹ್ಮಣ್ಯಸ್ವಾಮಿ ದನಗಳ ತುಂಬು ಜಾತ್ರೆಗೆ ದೂರದ ಊರುಗಳಿಂದ ಹೊರಿಗಳೊಂದಿಗೆ ಸಾಲು ಸಾಲಾಗಿ ರೈತರು ಬರುತ್ತಿದ್ದಾರೆ. ಕಳೆದ ಹಲವು ವರ್ಷಗಳ ಬಳಿಕ ಘಾಟಿ ದನಗಳ ಸಂತೆ ಕಳೆಗಟ್ಟಿದೆ. […]

Continue Reading

ದೇವಾಲಯದ ಪ್ರಸಾದ ಸೇವಿಸಿ ಸಿದ್ದಗಂಗಮ್ಮ (45)ಸಾವು : ಆಸ್ಪತ್ರೆಯಲ್ಲಿ 15ಕ್ಕೂ ಹೆಚ್ಚು ಮಂದಿಯ ಸ್ಥಿತಿ ಗಂಭೀರ

ಹೊಸಕೋಟೆ: ಹನುಮ ಜಯಂತಿ ಅಂಗವಾಗಿ ದೇವಾಲಯದಲ್ಲಿ ನೀಡಿದ ಪ್ರಸಾದ ಸೇವಿಸಿದ ಪರಿಣಾಮ ಓರ್ವ ಮಹಿಳೆ ಮೃತಪಟ್ಟು, ನೂರಾರು ಜನ ಅಸ್ವಸ್ಥಗೊಂಡಿರುವ ಘಟನೆ ನಗರದಲ್ಲಿ ನಡೆದಿದೆ.   ನಗರದ ವೆಂಕಟರಮಣಸ್ವಾಮಿ, ಊರುಬಾಗಿಲ ಆಂಜನೇಯ ಸ್ವಾಮಿ, ಕೋಟೆ ಆಂಜನೇಯ ಸ್ವಾಮಿ ದೇವಾಲಯಗಳಲ್ಲಿ ಭಾನುವಾರ ಹನುಮ ಜಯಂತಿಯ ಅಂಗವಾಗಿ ಭಕ್ತರಿಗೆ ಪ್ರಸಾದ ವಿತರಿಸಲಾಗಿತ್ತು.   ಪುಳಿಯೊಗರೆ, ಪಾಯಸ , ಲಡ್ಡು ಸೇವನೆ ಮಾಡಿದ್ದ ಭಕ್ತರಿಗೆ ವಾಂತಿ ಭೇದಿ ಕಾಣಿಕೊಂಡಿದೆ. ಕೂಡಲೇ ಅಸ್ವಸ್ಥರನ್ನು ನಗರದ ಖಾಸಗಿ ಆಸ್ಪತ್ರೆ, ಕೋಲಾರ, ಬೆಂಗಳೂರು ಆಸ್ಪತ್ರೆಗಳಲ್ಲಿ ಸ್ಥಳಾಂತರಿಸಿ, […]

Continue Reading

ರಾಜಕೀಯ ಸ್ನೇಹಮಯವಾಗಿರಲಿ ದ್ವೇಷಮಯವಾಗುವುದು ಬೇಡ : ಜೆಡಿಎಸ್ ಪಕ್ಷ ಸೋತಿದೆ ನಿಜ ಸತ್ತಿಲ್ಲ – ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹರೀಶ್ ಗೌಡ

ದೊಡ್ಡಬಳ್ಳಾಪುರ : ಬೂತ್ ಮಟ್ಟದಿಂದ ಪಕ್ಷ ಬಲಪಡಿಸಲು ಹಾಗೂ ತಾಲ್ಲೂಕಿನ ಜೆಡಿಎಸ್ ಕಾರ್ಯಕರ್ತರಲ್ಲಿ ಮತ್ತೆ ಹೊಸ ಚೈತನ್ಯ ತುಂಬುವ ನಿಟ್ಟಿನಲ್ಲಿ ಈ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮದ ಆಯೋಜನೆ ಮಾಡಲಾಗಿದೆ .ತಾಲ್ಲೂಕಿನ ಜೆಡಿಎಸ್ ಕಾರ್ಯಕರ್ತರು ಗೊಂದಲಕ್ಕೆ ಒಳಗಾಗುವುದು ಬೇಡ ನಿಮ್ಮೊಂದಿಗೆ ನಾವಿದ್ದೇವೆ ಎಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹರೀಶ್ ಗೌಡ ತಿಳಿಸಿದರು   ತಾಲ್ಲೂಕಿನ ನಗರ ಭಾಗದ ಒಕ್ಕಲಿಗರ ಭವನದಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಸ್ಥಳೀಯ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವು ಸೋಲು […]

Continue Reading

ಪ್ರಸಿದ್ಧ ದಿನ್ನೆ ಆಂಜನೇಯಸ್ವಾಮಿ ಜಾತ್ರ ಮಹೋತ್ಸವ : ದೇವರಿಗೆ ವಿಶೇಷ ಪೂಜೆ, ಅಲಂಕಾರ ಕಣ್ತುಂಬಿಕೊಂಡ ಭಕ್ತರು ಗಣ

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕಿನ ಪೆರಮಗೊಂಡನಹಳ್ಳಿ ಗ್ರಾಮದ ದಿನ್ನೆ ಆಂಜನೇಯ ಸ್ವಾಮಿ ದೇವಾಲಯದ ಜಾತ್ರ ಮೊಹೋತ್ಸವ ಕಾರ್ಯಕ್ರಮ ನೆಡಯಿತು     ಮರದಲ್ಲಿ ಮೂಡಿದ ಹನುಮ ಮೂರ್ತಿ ಆಕರ್ಷಣಿಯವಾಗಿತ್ತು     ಸುಮಾರು 500 ವರ್ಷಗಳ ಇತಿಹಾಸವಿರುವ ದೇವಾಲಯ ಇದಾಗಿದ್ದು ವಿಶೇಷ ಆಚರಣೆ ಹೊಂದಿದೆ. ಜೋಡೆತ್ತುಗಳ ರಥಯಾತ್ರೆ, ಹಯಗ್ರಿವ ಉತ್ಸವ ಒಳಗೊಂಡಂತೆ ಹಲವು ವಿಶೇಷತೆಗಳನ್ನು ಒಳಗೊಂಡಿದೆ ಈ ಕ್ಷೇತ್ರವನ್ನು ಸಂಗಮ ಕ್ಷೇತ್ರ ಎಂದು ಕರೆಯಲಾಗುತ್ತದೆ ಕಾರಣ ಸುತ್ತಮುತ್ತಲಿನ ಸಪ್ತಮಾತೃಕೆಯರ ಉತ್ಸವ ಮೂರ್ತಿಗಳು ಈ ಜಾತ್ರ ಮಹೋತ್ಸವಕ್ಕೆ […]

Continue Reading