ದೊಡ್ಡಬಳ್ಳಾಪುರ ನಗರಸಭೆ ಮೇಲೆ ಲೋಕಾಯುಕ್ತ ದಾಳಿ : ದಾಖಲೆಗಳನ್ನು ಪರಿಶೀಲಿಸುತ್ತಿರುವ ಅಧಿಕಾರಿಗಳು

ದೊಡ್ಡಬಳ್ಳಾಪುರ : ದೊಡ್ಡಬಳ್ಳಾಪುರ ನಗರಸಭೆ ಕಾರ್ಯಾಲಯದ ಮೇಲೆ ಇಂದು ಮಧ್ಯಾಹ್ನ ಲೋಕಾಯುಕ್ತ ಅಧಿಕಾರಿಗಳ ತಂಡ ದಾಳಿ ನಡೆಸಿದೆ     ಸಾರ್ವಜನಿಕರ ದೂರಿನ ಹಿನ್ನಲೆ ದೊಡ್ಡಬಳ್ಳಾಪುರ ನಗರಸಭೆ ಮೇಲೆ ಲೋಕಾಯುಕ್ತ ಎಸ್ ಪಿ ಪವನ್ ನೆಜ್ಜುರ್ ನೇತೃತ್ವದಲ್ಲಿ ದಾಳಿ ನೆಡೆಸಿರುವ ಅಧಿಕಾರಿಗಳು ನಗರಸಭೆ ಪೌರಾಯುಕ್ತ ಕಾರ್ತಿಕೇಶ್ವರ್ ಕಚೇರಿಯ ಕಡತಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ.   ಸದ್ಯ ದಾಖಲೆಗಳ ಪರಿಶೀಲನೆ ಮತ್ತು ಸಿಬ್ಬಂದಿಗಳ ವಿಚಾರಣೆಯನ್ನ ನಡೆಸುತ್ತಿದ್ದಾರೆ, ಮೂಲಗಳ ಪ್ರಕಾರ ಸಾರ್ವಜನಿಕರೊಬ್ಬರ ದೂರಿನ ಹಿನ್ನಲೆ ಲೋಕಾಯಕ್ತ ದಾಳಿ ನಡೆದಿದೆ ಎನ್ನಲಾಗಿದೆ.   […]

Continue Reading

ಮಕ್ಕಳ ಸರ್ವತೋಮುಖ ಅಭಿವೃದ್ಧಿಗಾಗಿ ಗುರುತ್ವ ಅಕಾಡೆಮಿ ಸದಾ ಶ್ರಮಿಸುತ್ತಿದೆ – ಶ್ರೀನಿವಾಸ್

ದೊಡ್ಡಬಳ್ಳಾಪುರ : ನಗರದ ಗಾಂಧಿ ವೃತ್ತದ ಬಳಿ ಇರುವ ಗುರುತ್ವ ಅಕಾಡೆಮಿಯಲ್ಲಿ ತರಬೇತಿ ಪಡೆದು ಸೈನಿಕ್ ಮತ್ತು ಜವಾಹರ ನವೋದಯ ವಿದ್ಯಾಸಂಸ್ಥೆಗಳಿಗೆ 4 ಪ್ರತಿಭಾನ್ವಿತ ವಿದ್ಯಾರ್ಥಿಗಳು ಆಯ್ಕೆಯಾಗಿದ್ದು,ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಸಂಸ್ಥೆವತಿಯಿಂದ ಹಮ್ಮಿಕೊಳ್ಳಲಾಗಿತ್ತು.     ನವೋದಯ ವಿದ್ಯಾಸಂಸ್ಥೆಗೆ ಅನನ್ಯ ಎಚ್‌.ಎಸ್ ಹಾಗೂ ಹರ್ಷಿತ್.ವಿ ಇಬ್ಬರು ವಿದ್ಯಾರ್ಥಿಗಳು ಆಯ್ಕೆಯಾದರೆ, ಸೈನಿಕ್ ಶಾಲೆಗೆ ಹರಿಪ್ರಿಯ ಹಾಗೂ ತೇಜಸ್ ರೆಡ್ಡಿ ಪಿ.ಎನ್ ಆಯ್ಕೆಯಾಗಿದ್ದಾರೆ.   ಸೈನಿಕ್ ಮತ್ತು ಜವಾಹರ ನವೋದಯ ವಿದ್ಯಾಸಂಸ್ಥೆಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಗುರುತ್ವ ಅಕಾಡೆಮಿ […]

Continue Reading

ಬಮೂಲ್ ಚುನಾವಣೆ : ಕಾಂಗ್ರೆಸ್ ಜೆಡಿಎಸ್ ಗೆ ಬಿಜೆಪಿ ಟಕ್ಕರ್. ಹುಸ್ಕೂರು ಆನಂದ್ ವಿರುದ್ಧ ಬಿ.ಸಿ ಆನಂದ್ ಕುಮಾರ್ ಭರ್ಜರಿ ಗೆಲುವು. ಹಾಲು ಉತ್ಪಾದಕರಿಗೆ ಗೆಲುವು ಅರ್ಪಣೆ.

ದೊಡ್ಡಬಳ್ಳಾಪುರ:ಬೆಂಗಳೂರು ಸಹಕಾರ ಹಾಲು ಒಕ್ಕೂಟ (ಬಮೂಲ್) ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬಿ ಸಿ ಆನಂದ ಕುಮಾರ್ 156 ಮತಗಳನ್ನು ಪಡೆಯುವ ಮೂಲಕ ಭರ್ಜರಿ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಬೆಂಬಲಿತ ಜೆಡಿಎಸ್ ಅಭ್ಯರ್ಥಿ ಹುಸ್ಕೂರು ಟಿ ಆನಂದ್‌ 40 ಮತಗಳನ್ನು ಪಡೆದಿದ್ದಾರೆ.ಎನ್ ಡಿ ಎ ಬೆಂಬಲಿತ ಅಭ್ಯರ್ಥಿ ಬಿ ಸಿ ಆನಂದ್ ಕುಮಾರ್ 156 ಮತಗಳನ್ನು ಪಡೆಯುವ ಮೂಲಕ ಕಾಂಗ್ರೆಸ್ ಜೆಡಿಎಸ್ ಮೈತ್ರಿ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದಾರೆ. ಇಂದು ಬೆಂಗಳೂರು ಡೇರಿ ವೃತ್ತ […]

Continue Reading

ಬಮೂಲ್ ಚುನಾವಣೆ : ಕಾಂಗ್ರೆಸ್ ಜೆಡಿಎಸ್ ಗೆ ಸೆಡ್ಡು ಹೊಡೆದ ಎನ್‌ಡಿಎ : ಹುಸ್ಕೂರು ಆನಂದ್ ವಿರುದ್ಧ ಬಿ.ಸಿ. ಆನಂದ್ ಕುಮಾರ್ ಭರ್ಜರಿ ಗೆಲುವು

ದೊಡ್ಡಬಳ್ಳಾಪುರ:ಬೆಂಗಳೂರು ಸಹಕಾರ ಹಾಲು ಒಕ್ಕೂಟ (ಬಮೂಲ್) ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯಲ್ಲಿ ಎನ್ ಡಿ ಎ ಅಭ್ಯರ್ಥಿ ಬಿ ಸಿ ಅನಂದ ಕುಮಾರ್ 156 ಮತಗಳನ್ನು ಪಡೆಯುವ ಮೂಲಕ ಭರ್ಜರಿ ಗೆಲುವು ಸಾಧಿಸಿದ್ದಾರೆ.     ಕಾಂಗ್ರೆಸ್ ಬೆಂಬಲಿತ ಜೆಡಿಎಸ್ ಅಭ್ಯರ್ಥಿ ಹುಸ್ಕೂರು ಆನಂದ್‌ 43ಮತಗಳನ್ನು ಪಡೆದಿದ್ದು ಎನ್ ಡಿ ಎ ಬೆಂಬಲಿತ ಅಭ್ಯರ್ಥಿ ಬಿ ಸಿ ಆನಂದ್ ಕುಮಾರ್ 156 ಮತಗಳನ್ನು ಪಡೆಯುವ ಮೂಲಕ ಕಾಂಗ್ರೆಸ್ ಜೆಡಿಎಸ್ ಮೈತ್ರಿ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದಾರೆ.   […]

Continue Reading

ಬಮೂಲ್ ಚುನಾವಣೆ: ಮತ ಏನಿಕೆ ಪ್ರಾರಂಭ : ಫಲಿತಾಂಶಕ್ಕಾಗಿ ಕಾದು ನಿಂತಿರುವ ಮುಖಂಡರು

ದೊಡ್ಡಬಳ್ಳಾಪುರ:ಬೆಂಗಳೂರು ಸಹಕಾರ ಹಾಲು ಒಕ್ಕೂಟ (ಬಮೂಲ್) ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯಲ್ಲಿ ಕೆಲ ಗೊಂದಲಗಳಿದ್ದ ಕಾರಣ ದೊಡ್ಡಬಳ್ಳಾಪುರ ಮತ ಕ್ಷೇತ್ರದ ಎಣಿಕೆಯನ್ನು ನ್ಯಾಯಾಲಯದ ತೀರ್ಪಿನ ಬಳಕ ನಡೆಸಲಾಗುವುದು ಎಂದು ತಿಳಿಸಲಾಗಿತ್ತು   ಆದರೆ ಇದೀಗ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬಂದು ಮತ ಎಣಿಕೆ ಮಾಡಲು ಮುಂದಾಗಿ, ಅಭ್ಯರ್ಥಿಗಳು, ಏಜೆಂಟ್‌ಗಳನ್ನು ಮತ್ತೆ ಬರುವಂತೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ, ಈ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರು ಹಿಂತಿರುಗುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.   ಅತಿ ಕುತೂಹಲ ಮೂಡಿಸಿದ್ದ  ಬಮೂಲ್ ನಿರ್ದೇಶಕರ  […]

Continue Reading

ಬಮೂಲ್ ಚುನಾವಣೆ : ದೊಡ್ಡಬಳ್ಳಾಪುರ ಫಲಿತಾಂಶಕ್ಕೆ ಕೋರ್ಟ್ ತಡೆ ಕಾರಣವೇನು…??? ಸುದ್ದಿ ನೋಡಿ

ದೊಡ್ಡಬಳ್ಳಾಪುರ:ಬೆಂಗಳೂರು ಸಹಕಾರ ಹಾಲು ಒಕ್ಕೂಟ (ಬಮೂಲ್) ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯ ಶಾಂತಿಯುತ ಮುಕ್ತಾಯವಾಗಿದ್ದು, ದೊಡ್ಡಬಳ್ಳಾಪುರ ಮತ ಕ್ಷೇತ್ರದ ಎಣಿಕೆಗೆ ಕೋರ್ಟ್ ತಡೆಯಾಜ್ಞೆ ನೀಡಿದೆ ಎಂದು ಮೂಲಗಳು ತಿಳಿಸಿವೆ.   ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಹುಸ್ಕೂರು ಆನಂದ್ ರವರು ತನ್ನ ಸ್ವರ್ಧೆಯ ಅನರ್ಹತೆ ಪ್ರಶ್ನಸಿ ಹೈಕೋರ್ಟ್ ಮೊರೆ ಹೋಗಿ ಮಧ್ಯಂತರ ಆದೇಶ ಪಡೆದು ಕಣಕ್ಕಿಳಿದಿದ್ದರು. ಆದರೆ ಈಗ ಈ ಪ್ರಕರಣದ ತೀರ್ಪು ಬರುವವರೆಗೂ ಎಣಿಕೆಗೆ ಕೋರ್ಟ್ ತಡೆಯಾಜ್ಞೆ ನೀಡಿದೆ.    

Continue Reading

ಪಕ್ಷ ನಿಷ್ಠೆ ಮರೆತ ಕೆಲ ಸ್ವಪಕ್ಷಿಯಾರಿಂದಲೇ ಹುಸ್ಕೂರ್ ಆನಂದ್ ರನ್ನು ಸೋಲಿಸುವ ಪ್ರಯತ್ನ ನೆಡೆಯುತ್ತಿದೆಯೇ …..????

ಈಗಾಗಲೇ ಬಮೂಲ್ ನಿರ್ದೇಶಕ ಸ್ಥಾನದ ಚುನಾವಣೆ ರಂಗೇರಿದ್ದು ಕಣದಲ್ಲಿ ಎನ್ ಡಿ ಎ ಅಭ್ಯರ್ಥಿಯಾಗಿ ಬಿ. ಸಿ. ಆನಂದ್ ಕುಮಾರ್ ಹಾಗೂ ಕಾಂಗ್ರೆಸ್ ಬೆಂಬಲಿತ ಜೆಡಿಎಸ್ ಅಭ್ಯರ್ಥಿ ಹುಸ್ಕೂರು ಟಿ ಆನಂದ್ ಕಣದಲ್ಲಿ ಇದ್ದಾರೆ. ಗೆಲುವು ಸಾಧಿಸಲು ಬೇಕಿರುವ ಎಲ್ಲಾ ತಂತ್ರಗಾರಿಕೆಯನ್ನು 3 ಪಕ್ಷಗಳು ಮಾಡುತ್ತಿದೆ.     ಆದರೆ ಜೆಡಿಎಸ್ ಪಕ್ಷ ನಿಷ್ಠೆ ಮರೆತ ಕೆಲ ಮುಖಂಡರು,ನಾಯಕರು ಬಿಜೆಪಿ ಬೆಂಬಲಿತ ಅಭ್ಯರ್ಥಿ ಪರ ಕೆಲಸ ಮಾಡಲು ಮುಂದಾಗಿರುವುದು ಶೋಚನಿಯ ಸಂಗತಿಯಾಗಿದೆ ಎಂದು ದೇವನಹಳ್ಳಿ ಜೆಡಿಎಸ್ ಪಕ್ಷದ […]

Continue Reading

ದೊಡ್ಡಬಳ್ಳಾಪುರ : ಸಾರ್ವಜನಿಕ ಆಸ್ಪತ್ರೆ ಕೀಮೋಥೆರಪಿ ಘಟಕಕ್ಕೆ ಚಾಲನೆ

ಈ ಮೊದಲು ಕೀಮೋಥೆರಪಿ ಚಿಕಿತ್ಸೆಗೆ ಬೆಂಗಳೂರಿಗೆ ತೆರಳಬೇಕಾಗಿತ್ತು. ಇದು ರೋಗಿಗಳ ಪಾಲಿಗೆ ಕಷ್ಟಸಾಧ್ಯವಾಗಿತ್ತು,ಬಡ ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ದೊರೆಯದ ಕಾರಣ, ಅಕಾಲಿಕ ಮರಣಕ್ಕೆ ತುತ್ತಾಗುತ್ತಿದ್ದರು ಈ ಬಾರಿ ಜಿಲ್ಲೆ ಹಾಗೂ ತಾಲ್ಲೂಕಿನಲ್ಲಿ ಸಕಲ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಲು ಸರ್ಕಾರವು ಪ್ರಯತ್ನಿಸಿದೆ ಎಂದು ದೊಡ್ಡಬಳ್ಳಾಪುರ ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ರಮೇಶ್ ತಿಳಿಸಿದರು.   ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಡೇ ಕೇರ್ ಕೀಮೋಥೆರಪಿ ಕೇಂದ್ರವನ್ನು ತಾಲೂಕು ಆರೋಗ್ಯಾಧಿಕಾರಿ ಡಾ.ಶಾರದಾ ನಾಗನಾಥ್,ಮುಖ್ಯ ಆಡಳಿತಾಧಿಕಾರಿ ಡಾ.ರಮೇಶ್ ಉದ್ಘಾಟಿಸಿ ಮಾತನಾಡಿದ ಅವರು […]

Continue Reading

ದೊಡ್ಡಬಳ್ಳಾಪುರ ಅವ್ಯವಸ್ಥೆ : ಹೆಸರಿಗಷ್ಟೇ ಸೀಮಿತವಾದ ” ದಾರಿ ದೀಪಗಳು “

ನಗರದ ಜೂನಿಯರ್ ಕಾಲೇಜು ಮುಂಭಾಗದ ರಸ್ತೆ ಯಿಂದ ತಾಲ್ಲೂಕು ಕಚೇರಿ ಮುಂಭಾಗದವರೆಗೂ ದಾರಿದೀಪಗಳ ಅವ್ಯವಸ್ಥೆ ಕಾರಣ ರಸ್ತೆಯು ಸಂಪೂರ್ಣ ಕತ್ತಲಿನಿಂದ ಆವರಿಸಿದೆ. ತಾಲ್ಲೂಕುದಂಡಾಧಿಕಾರಿಗಳ ಕಛೇರಿ ಮುಂಭಾಗವೇ ದಾರಿದೀಪಗಳು ಬೆಳಕು ನೀಡದೆ ಕೆಟ್ಟು ನಿಂತಿರುವುದು ಚರ್ಚೆಗೆ ಕಾರಣವಾಗಿದೆ, ರಸ್ತೆಯ ವಿದ್ಯುತ್ ಕಂಬಗಳು ಬೆಳಕು ನೀಡುವುದಕ್ಕಿಂತ ಕೆಟ್ಟು ನಿಂತಿರುವುದೇ ಹೆಚ್ಚು, ಈ ಕಂಬಗಳು ರಾಜಕೀಯ ಹಾಗೂ ಸಂಭ್ರಮಾಚರಣೆಯ ಬ್ಯಾನರ್ ಕಟ್ಟುವ ಪೋಲ್ ಗಳಾಗಿವೆ ಎಂಬುದು ಸಾರ್ವಜನಿಕರ ಆಕ್ರೋಶದ ಮಾತು.   ಈ ರಸ್ತೆಗಳ ಕತ್ತಲಿನಲ್ಲಿ ಪಾದಚಾರಿಗಳು ಸಂಚರಿಸುವುದು ಕಷ್ಟ ಸಾಧ್ಯವಾಗಿದೆ, […]

Continue Reading

ಮರದಿಂದ ಬಿದ್ದು ಗಾಯಗೊಂಡಿದ್ದ ವ್ಯಕ್ತಿಗೆ 30,000 ರೂ ಕ್ರಿಟಿಕಲ್ ಫಂಡ್ ವಿತರಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ದೊಡ್ಡಬಳ್ಳಾಪುರ ತಾಲೂಕು ಇವರ ವತಿಯಿಂದ ಮರದಿಂದ ಬಿದ್ದು ಗಂಬೀರ ಗಾಯಗೊಂಡಿದ್ದ ರಮೇಶ್ ರವರಿಗೆ 30,000 ರೂ ಕ್ರಿಟಿಕಲ್ ಫಂಡ್ ವಿತರಣೆ ಮಾಡಲಾಯಿತು.     ತಾಲ್ಲೂಕಿನ ಮಧುರೆ ಹೋಬಳಿಯ ಮದಗೊಂಡನಹಳ್ಳಿ ಗ್ರಾಮದ ರಮೇಶ್ ಎಂಬುವರು ಮರದಿಂದ ಬಿದ್ದು ಗಂಬೀರ ಗಾಯಗೊಂಡಿದ್ದು,ಅವರ ಚಿಕಿತ್ಸೆಗಾಗಿ ಧರ್ಮಸ್ಥಳದ ಧರ್ಮಾಧಿಕಾರಿ ಮಂಜೂರು ಮಾಡಿರುವ 30,000 ರೂ ಕ್ರಿಟಿಕಲ್ ಫಂಡ್ ನ್ನು ಮಾನ್ಯ ಯೋಜನಾಧಿಕಾರಿ ಯವರಾದ ದಿನೇಶ್ ರವರು ಹಸ್ತಾಂತರಿಸಿದರು.     ಈ ಸಮಯದಲ್ಲಿ ಯೋಜನೆಯ […]

Continue Reading