ಗ್ರಾಮಗಳಿಗೆ ಸಂಪರ್ಕ ರಸ್ತೆ ಸಮಸ್ಯೆ: ಹೆದ್ದಾರಿ ತಡೆದು ಗ್ರಾಮಸ್ಥರ ಪ್ರತಿಭಟನೆ

ದೊಡ್ಡಬಳ್ಳಾಪುರ ಮಾ 21 ( ವಿಜಯ ಮಿತ್ರ ) : ಚಿಕ್ಕ ತುಮಕೂರು, ಮಾಜರಹೊಸಹಳ್ಳಿ ಸೇರಿದಂತೆ ಹಲವು ಗ್ರಾಮಗಳ ಗ್ರಾಮಸ್ಥರು ಸ್ಥಳೀಯವಾಗಿ ಸಂಪರ್ಕ ರಸ್ತೆ ಕಲ್ಪಿಸುವಂತೆ ಅಗ್ರಹಿಸಿ ಹೆದ್ದಾರಿ ತಡೆ ಮಾಡುವ ಮೂಲಕ ಪ್ರತಿಭಟನೆ ನೆಡೆಸಿದರು.   ನಗರ ಭಾಗದಿಂದ ಚಿಕ್ಕತುಮಕೂರು ಗ್ರಾಮಕ್ಕೆ ಸೇರುವ ಸಂಪರ್ಕ ರಸ್ತೆಯನ್ನು ಹೆದ್ದಾರಿ ಪ್ರಾಧಿಕಾರ ಬಂದ್ ಮಾಡಿದ್ದು ಸದರಿ ರಸ್ತೆಯನ್ನು ಗ್ರಾಮಸ್ಥರ ಅನುಕೂಲಕ್ಕೆ ನಿರ್ಮಿಸಿಕೊಡುವಂತೆ ಸ್ಥಳೀಯ ಮುಖಂಡರಾದ ಟಿ. ರಂಗರಾಜು, ಬಿ. ಸಿ.ಆನಂದ್, ಆದಿತ್ಯ ನಾಗೇಶ್ ಸೇರಿದಂತೆ ಹಲವು ರೈತರ ಮುಖಂಡರ […]

Continue Reading

ಹಾಡೋನಹಳ್ಳಿಯಲ್ಲಿ ಅಗ್ನಿ ಅವಘಡದಲ್ಲಿ ಗಾಯಗೊಂಡಿದ್ದ ರೈತನ ಮನೆಗೆ ಬಿ.ಸಿ ಆನಂದ್ ಕುಮಾರ್ ಭೇಟಿ.

ದೊಡ್ಡಬಳ್ಳಾಪುರದ ತಾಲ್ಲೂಕಿನ ತೂಬಗೆರೆ ಹೋಬಳಿಯ ಹಾಡೋನಹಳ್ಳಿ ಗ್ರಾಮದಲ್ಲಿ ಕಳೆದ ಗುರುವಾರ ಹಸು ಕಟ್ಟುವ ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ ಅವಘಡದ ಪರಿಣಾಮದಿಂದ ಎರಡು ಹಸುಗಳು ಸೇರಿದಂತೆ ತೀವ್ರವಾಗಿ ಗಾಯಗೊಂಡಿದ್ದ ರೈತ ರಾಜಣ್ಣ ಮನೆಗೆ ಸೋಮವಾರ ಸಂಜೆ ಕರ್ನಾಟಕ ಹಾಲು ಮಹಾಮಂಡಳಿ ನಿರ್ದೇಶಕ ಬಿ.ಸಿ ಆನಂದ್ ಕುಮಾರ್ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ರೈತ ರಾಜಣ್ಣ ಮತ್ತು ಕುಟುಂಬಸ್ಥರೊಂದಿಗೆ ಮಾತನಾಡಿ ಹಸುಗಳನ್ನೇ ನಂಬಿ ಜೀವನ ಸಾಗಿಸುತ್ತಿದ್ದ ನಿಮಗೆ ಭಗವಂತ ಹೆಚ್ಚಿನ ಅಪಾಯವಾಗದಂತೆ ರಕ್ಷಿಸಿದ್ದಾನೆ. ನೀವು ಮಾಡಿದ ಪುಣ್ಯದ ಕೆಲಸ ನಿಮ್ಮನ್ನ […]

Continue Reading

ದೇವಾಲಯಕ್ಕೆ ನುಗಿದ ಕಳ್ಳರು : ದೇವರ ಎರಡು ಬೆಳ್ಳಿ ಕಿರೀಟ ಒಂದು ಚಿನ್ನದ ತಾಳಿ ಕದ್ದು ಪರಾರಿ

ದೊಡ್ಡಬಳ್ಳಾಪುರ : ಕಳೆದ ರಾತ್ರಿ ತೇರಿನ ಬೀದಿಯಲ್ಲಿರುವ ಪ್ರಸನ್ನ ವೆಂಕಟರಮಣಸ್ವಾಮಿ ದೇವಸ್ಥಾನದಲ್ಲಿ ಹುಂಡಿ ಕಳವು ಯತ್ನ ನಡೆದಿದ್ದು, ಪಕ್ಕದ ಚಂದ್ರ ಮೌಳೇಶ್ವರ ದೇವಸ್ಥಾನದಲ್ಲಿ ದೇವರ ಎರಡು ಬೆಳ್ಳಿ ಕಿರೀಟ,ಒಂದು ಚಿನ್ನದ ತಾಳಿಯನ್ನ ಕಳ್ಳರು ಕದ್ದು ಪರಾರಿಯಾಗಿದ್ದಾರೆ   ದೊಡ್ಡಬಳ್ಳಾಪುರ ನಗರದ ಇತಿಹಾಸ ಪ್ರಸಿದ್ಧ ಪ್ರಸನ್ನ ವೆಂಕಟರಮಣಸ್ವಾಮಿ ದೇವಸ್ಥಾನದಲ್ಲಿ ತಿಂಗಳ ಹಿಂದೆ ಇತಿಹಾಸ ಪ್ರಸಿದ್ಧ ಪ್ರಸನ್ನ ವೆಂಕಟರಮಣಸ್ವಾಮಿ ರಥೋತ್ಸವ ನಡೆದಿದ್ದು, ದೇವಸ್ಥಾನದ ಹುಂಡಿಗೆ ಭಾರೀ ಹಣವೇ ಬಂದಿದೆ ಎಂದು ಲೆಕ್ಕಾಚಾರ ಹಾಕಿದ್ದ ಕಳ್ಳರು, ನಿನ್ನೆ ರಾತ್ರಿ ಹುಂಡಿಗೆ ಕಳವು […]

Continue Reading

*ಲೋಕಾಯುಕ್ತ ಸಂಸ್ಥೆಗೆ ದೂರು ನೀಡಿ*

ಬೆಂಗಳೂರು ಗ್ರಾಮಾಂತರ ಜಿಲ್ಲೆ, ಮಾರ್ಚ್ 18 ( ವಿಜಯ ಮಿತ್ರ ): ಕರ್ನಾಟಕ ಲೋಕಾಯುಕ್ತ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪೊಲೀಸ್ ಅಧಿಕಾರಿಗಳ ದೂರವಾಣಿ ಸಂಖ್ಯೆಗಳು ಬದಲಾಗಿದ್ದು, ಸರ್ಕಾರಿ ಕೆಲಸಕಾರ್ಯಗಳನ್ನು ಮಾಡಿಕೊಡಲು ಲಂಚಕ್ಕಾಗಿ ಬೇಡಿಕೆ ಇಟ್ಟರೆ, ಅಕ್ರಮ ಆಸ್ತಿ ಸಂಪಾದನೆ ಮಾಡಿದ್ದಲ್ಲಿ, ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಲ್ಲಿ ಈ ಕೆಳಕಂಡ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಿ ಮಾಹಿತಿ ನೀಡುವುದು. ಪೊಲೀಸ್ ಅಧೀಕ್ಷಕರು ಮೊ.ಸಂಖ್ಯೆ 9364062509, ಪೊಲೀಸ್ ಉಪಾಧೀಕ್ಷಕರು-1 ಮೊ.ಸಂ 9364062550, ಪೊಲೀಸ್ ಉಪಾಧೀಕ್ಷಕರು-2 ಮೊ.ಸಂ 9364062551, ಪೊಲೀಸ್ ಇನ್ಸ್‌ಪೆಕ್ಟರ್-1 ಮೊ.ಸಂ […]

Continue Reading

ಶನಿಮಹಾತ್ಮ ಸ್ವಾಮಿಯ 69ನೇ ಬ್ರಹ್ಮರಥೋತ್ಸವ : ದೇವರ ದರ್ಶನ ಪಡೆದು ಪುನೀತರಾದ ಭಕ್ತಗಣ

ದೊಡ್ಡಬಳ್ಳಾಪುರ, (ಮಾ.19) ವಿಜಯ ಮಿತ್ರ : ಚಿಕ್ಕಮಧುರೆ (ಕನಸವಾಡಿ) ಶ್ರೀ ಶನಿಮಹಾತ್ಮ ಸ್ವಾಮಿಯ 69ನೇ ಬ್ರಹ್ಮರಥೋತ್ಸವು ಅದ್ದೂರಿಯಾಗಿ ನೆರವೇರಿತು. ತಾಲ್ಲೂಕಿನ ಚಿಕ್ಕಮಧುರೆಯ ಶ್ರೀ ಶನಿಮಹಾತ್ಮ ಸ್ವಾಮಿಯ ಬ್ರಹ್ಮರಥೋತ್ಸವಕ್ಕೆ ಶಾಸಕ ಧೀರಜ್ ಮುನಿರಾಜು ಚಾಲನೆ ನೀಡಿದರು. ರಥೋತ್ಸವದಲ್ಲಿ ಸಾವಿರಾರು ಭಕ್ತಾದಿಗಳು ರಾಜ್ಯದ ಮೂಲೆ ಮೂಲೆಗಳಿಂದ ಪಾಲ್ಗೊಂಡು ಯಶಸ್ವೀಗೊಳಿಸಿದರು.ಆಗಮಿಸಿದ ಭಕ್ತಾದಿಗಳಿಗೆ ದಾಸೋಹ ಭವನದ ಮುಂಭಾಗ ಊಟದ ವ್ಯವಸ್ಥೆ ಕಲ್ಪಿಸಿದ್ದು , ಭಕ್ತಾದಿಗಳಿಂದ ದೇವಾಲಯ ಹಲವು ಭಾಗಗಳಲ್ಲಿ ಅರವಂಟಿಕೆ ಹಾಗೂ ಪ್ರಸಾದ ವಿನಿಯೋಗ ಆಯೋಜನೆ ಮಾಡಲಾಗಿತ್ತು.   ಭಕ್ತಾದಿಗಳು ಶ್ರದ್ದಾ ಭಕ್ತಿಯಿಂದ […]

Continue Reading

ಪುನೀತ್ ರಾಜಕುಮಾರ್ ಅವರ 49ನೇ ಹುಟ್ಟುಹಬ್ಬ ಆಚರಣೆ : ಬಿರಿಯಾನಿ ಹಂಚಿ ಸಂಭ್ರಮಿಸಿದ ಅಪ್ಪು ಫ್ಯಾನ್ಸ್

ದೊಡ್ಡಬಳ್ಳಾಪುರ ಮಾ.17 ( ವಿಜಯ ಮಿತ್ರ ) : ಪುನೀತ್ ರಾಜಕುಮಾರ್ ರವರ 49ನೇ ಹುಟ್ಟುಹಬ್ಬದ ಅಂಗವಾಗಿ ಪುನೀತ್ ರವರಿಗೆ ಇಷ್ಟವಾದ ಬಿರಿಯಾನಿಯನ್ನು ಹಂಚಿಕೆ ಮಾಡುವ ಮೂಲಕ ಅವರ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸುತ್ತಿದ್ದೇವೆ ಎಂದು ರಾಘವ ತಿಳಿಸಿದರು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ 49ನೇ ಹುಟ್ಟುಹಬ್ಬದ ದಿನವನ್ನು ರೋಜಿಪುರ ಮತ್ತು ಗಂಗಾಧರಪುರ ಅಭಿಮಾನಿಗಳು ಅದ್ದೂರಿಯಾಗಿ ಆಚರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ರಾಜವಂಶದ ಕುಡಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ಕಲಿಯುಗದ ಕೃಷ್ಣ ಎಂದರೆ […]

Continue Reading

ಪಡಿತರ ವಿತರಣೆ ಕುರಿತು ಯುವಕರ ಜನಜಾಗೃತಿ ಅಭಿಯಾನ : ನ್ಯಾಯಬೆಲೆ ಅಂಗಡಿಗಳು ಸರ್ಕಾರಿ ಆದೇಶ ಪಾಲಿಸುವಂತೆ ಒತ್ತಾಯ

ದೊಡ್ಡಬಳ್ಳಾಪುರ ಮಾ.17(ವಿಜಯ ಮಿತ್ರ ): ಸರ್ಕಾರದ ಆದೇಶದಂತೆ ತಿಂಗಳ ಪ್ರತಿದಿನವೂ ನ್ಯಾಯಬೆಲೆ ಅಂಗಡಿಯನ್ನು ತೆಗೆಯುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕಿರುವ ಪಡಿತರ ವಿತರಕರು ತಿಂಗಳಿನಲ್ಲಿ ಕೇವಲ ಎರಡು ಮೂರು ದಿನಗಳು ನ್ಯಾಯಬೆಲೆ ಅಂಗಡಿ ತೆರೆಯುವ ಮೂಲಕ ಸಾರ್ವಜನಿಕರನ್ನು ವಂಚಿಸುತ್ತಿದ್ದಾರೆ ಎಂದು ಯುವ ಸಂಚಲನ ಮುಖಂಡ ಚಿದಾನಂದ ತಿಳಿಸಿದರು   ಇಂದು ತಾಲೂಕಿನಲ್ಲಿ ಪಡಿತರ ವಿತರಣೆ ಮಾಡುತ್ತಿರುವ ನ್ಯಾಯಬೆಲೆ ಅಂಗಡಿಗಳ ಮುಂಭಾಗದಲ್ಲಿ ಸಾಲುಗಟ್ಟಿ ನಿಂತಿದ್ದ ಸಾರ್ವಜನಿಕರಲ್ಲಿ ಯುವ ಸಂಚಲನ ತಂಡ ಕರಪತ್ರ ವಿತರಿಸುವ ಮೂಲಕ ಜಾಗೃತಿ ಮೂಡಿಸಿದರು. ಈ […]

Continue Reading

*ಇಂದಿನಿಂದ ಕಟ್ಟುನಿಟ್ಟಿನ ನೀತಿ ಸಂಹಿತೆ ಜಾರಿ: ಜಿಲ್ಲಾಧಿಕಾರಿ ಡಾ.ಎನ್ ಶಿವಶಂಕರ*

ಬೆಂಗಳೂರು ಗ್ರಾಮಾಂತರ ಜಿಲ್ಲೆ, ಮಾರ್ಚ್ 16 (ವಿಜಯಮಿತ್ರ ): ಭಾರತ ಚುನಾವಣಾ ಆಯೋಗವು 2024ರ ಲೋಕಸಭಾ ಚುನಾವಣೆಯ ಅಧಿಸೂಚನೆ ಹೊರಡಿಸಿದ್ದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ 2024 ರ ಏಪ್ರಿಲ್ 26 ರಂದು ಮತದಾನ ನಡೆಯಲಿದೆ. ಜೂನ್ 04ರಂದು ಮತ ಎಣಿಕೆ ನಡೆಯಲಿದೆ. ಚುನಾವಣೆ ಮಾದರಿ ನೀತಿ ಸಂಹಿತೆಯು ದಿನಾಂಕ 16.03.2024 ರಿಂದ ಜಿಲ್ಲೆಯಾದ್ಯಂತ ಜಾರಿಯಲ್ಲಿರುತ್ತದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಹಾಗೂ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಹಾಯಕ ಚುನಾವಣೆ ಅಧಿಕಾರಿ ಡಾ.ಶಿವಶಂಕರ. ಎನ್ ತಿಳಿಸಿದರು. ಬೆಂಗಳೂರು ಗ್ರಾಮಾಂತರ […]

Continue Reading

*ಉಪನಗರ ರೈಲು ಯೋಜನೆಯ ಮೊದಲ ಮಾರ್ಗ 2025ರ ಡಿಸೆಂಬರ್ ಗೆ ಪೂರ್ಣ: ಸಚಿವ ಎಂ.ಬಿ ಪಾಟೀಲ*

ಬೆಂಗಳೂರು: ಬಿ ಎಸ್ ಆರ್ ಪಿ (ಬೆಂಗಳೂರು ಉಪನಗರ ರೈಲು ಯೋಜನೆ) ಮೊದಲ ಭಾಗವಾದ ಚಿಕ್ಕಬಾಣಾವರ-ಯಶವಂತಪುರ ನಡುವಿನ 7.4 ಕಿ‌.ಮೀ. ಮಾರ್ಗದಲ್ಲಿ 2025ರ ಡಿಸೆಂಬರ್ ವೇಳೆಗೆ ರೈಲು ಸಂಚಾರ ಆರಂಭವಾಗಲಿದ್ದು, ಇದರಲ್ಲಿ ದೇಶದಲ್ಲೇ ಅತಿ ಉದ್ದದ ಗರ್ಡರ್ ಬಳಸಲಾಗುತ್ತಿದೆ ಎಂದು ಮೂಲ ಸೌಕರ್ಯ ಅಭಿವೃದ್ಧಿ ಸಚಿವ ಎಂ ಬಿ ಪಾಟೀಲ ಶನಿವಾರ ಹೇಳಿದರು.   ದೇಶದಲ್ಲೇ ಅತಿ ಉದ್ದದ (100 ಅಡಿ ಅಥವಾ 31 ಮೀಟರ್) ಯು-ಗರ್ಡರ್ ನಿರ್ಮಾಣ ಪ್ರಕ್ರಿಯೆಯನ್ನು ವೀಕ್ಷಿಸಲು ದೇವನಹಳ್ಳಿ ಬಳಿಯ ಗೊಲ್ಲಹಳ್ಳಿಯ ಕ್ಯಾಸ್ಟಿಂಗ್ […]

Continue Reading

ನಮ್ಮ ಪ್ರಾಧಿಕಾರ ಐದು ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕಾಗಿ ಕೆಲಸ ಮಾಡುವುದು – ವಿಶ್ವನಾಥ್ ರೆಡ್ಡಿ

ದೊಡ್ಡಬಳ್ಳಾಪುರ ಮಾ.16 (ವಿಜಯಮಿತ್ರ ):ತಾಂತ್ರಿಕ ಕಾರಣದಿಂದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಸ್ವಲ್ಪ ಹಿನ್ನಡೆಯಾಗಿದೆ, ನಮ್ಮ ಪ್ರಾಧಿಕಾರ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕಾಗಿ ಕೆಲಸ ಮಾಡುವುದು, ಯೋಜನೆಗಳ ಫಲಾನುಭವಿಗಳಾಗಲು ನಮ್ಮ ಪ್ರಾಧಿಕಾರವನ್ನ ಸಂಪರ್ಕಿಸಿದ್ದಾರೆ ಯೋಜನೆಯ ಫಲಾನುಭವಿಗಳನ್ನಾಗಿ ಮಾಡಲಾಗುವುದು ಎಂದು ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ವಿಶ್ವನಾಥ್ ರೆಡ್ಡಿ ತಿಳಿಸಿದರು.   ನಗರ ಭಾಗದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಅಧಿಕಾರ ಸ್ವೀಕಾರ ಮತ್ತು ಸದಸ್ಯರ ಪದಗ್ರಹಣ ಸಮಾರಂಭದಲ್ಲಿ ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ಚುಂಚೇಗೌಡ, ಕೆಪಿಸಿಸಿ […]

Continue Reading